ಅಂಬರೀಶ್ ಪುತ್ರ ಅಭಿಷೇಕ್ ಹೀರೋ ಆಗಿ ಸ್ಯಾಂಡಲ್-ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ, ಜೂ. ರೆಬೆಲ್ ಸ್ಟಾರ್ ಕಾಲ್ ಶೀಟ್-ಗಾಗಿ ದೊಡ್ಡ ದೊಡ್ಡ ನಿರ್ಮಾಪಕರು ಕಾದು ಕುಳಿತ್ತಿದ್ದಾರಂತೆ…!

0
646

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರಗಳಲ್ಲಿ ನಟಿಸಲಿದ್ದಾರಂತೆ, ಹೌದು, ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶೀಟ್-ಗಾಗಿ ಕಾದು ಕುಳಿತ್ತಿದ್ದಾರಂತೆ.

ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿವೆ, ಇವನ್ನು ನೋಡಿದ ಅಂಬಿ ಅಭಿಮಾನಿಗಳು, ಜೂನಿಯರ್ ರೆಬೆಲ್-ಸ್ಟಾರ್ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎನ್ನುತ್ತಿದ್ದಾರೆ.

ಅಭಿಷೇಕ್ ಅವರ ಮೊದಲ ಸಿನಿಮಾದ ಚಿತ್ರೀಕರಣ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆಯಂತೆ, ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಮತ್ತು ನಿರ್ಮಾಣವನ್ನು ಐರಾವತ ಖಾತಿಯ ಸಂದೇಶ್ ನಾಗರಾಜ್ ಮಾಡಲಿದ್ದಾರೆಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ರೆಬೆಲ್-ಸ್ಟಾರ್ ಮತ್ತು ಅವರ ಅಭಿಮಾನಿಗಳ ಬಯಕೆಯಂತೆ ಅಭಿಷೇಕ್ ಚಿತ್ರರಂಗಕ್ಕೆ ಬರುತ್ತಾರ ಕಾದು ನೋಡಬೇಕು…!