ಡ್ರೈ ಪ್ರೂಟ್ಸ್ ಪಲಾವ್ ಮಾಡುವ ಸುಲಭ ವಿಧಾನವನ್ನು ಕಲಿಯಿರಿ!!

0
1287

ಬೇಕಾಗುವ ಸಾಮಗ್ರಿಗಳು

ಅಕ್ಕಿ-2ಕಪ್,

ಬಾದಾಮಿ-10,

ಒಣದ್ರಾಕ್ಷಿ-10,

ಗೋಡಂಬಿ-10,

ತುಪ್ಪ-ಎರಡು ಚಮಚ,

ಕಾಳು ಮೆಣಸು-1 ಚಿಕ್ಕ ಚಮಚ,

ಉಪ್ಪು,

ದಾಲ್ಚಿನ್ನಿ,

ಕೇಸರಿ.

ಮಾಡುವ ವಿಧಾನ:

ನಾನ್‌ಸ್ಟಿಕ್ ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಅದಕ್ಕೆ ದಾಲ್ಚಿನ್ನಿ ಎಲೆ, ಕಾಳುಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ, ನಂತರ ಅಕ್ಕಿ ಹಾಕಿ ಎರಡು ನಿಮಿಷಗಳ ಕಾಲ ಹುರಿದುಕೊಳ್ಳಿ. ಅದಕ್ಕೆ ಉಪ್ಪು ಮತ್ತು ಕೇಸರಿ ಸೇರಿಸಿ ಹುರಿಯಿರಿ. ಇದಕ್ಕೆ 3 ಕಪ್ ಕುದಿಸಿದ ನೀರನ್ನು ಹಾಕಿ ತಿರುವಿ ಕುದಿಯಲು ಬಿಡಿ.

ಕುದಿ ಬಂದ ನಂತರ ಬಳಿಕ ಸಣ್ಣ ಉರಿಯಲ್ಲಿ ಪಾತ್ರೆಯ ಮುಚ್ಚಳವನ್ನು ಮುಚ್ಚಿ ಅಕ್ಕಿ ಬೇಯಲು ಬಿಡಿ. ಅಕ್ಕಿ ಬೆಂದ ನಂತರ ಒಲೆಯಿಂದ ಕೆಳಗಿರಿಸಿದರೆ ಡ್ರೈ ಪ್ರೂಟ್ಸ್ ಪಲಾವ್ ಸವಿಯಲು ಸಿದ್ಧ.

ಡ್ರೈ ಪ್ರೂಟ್ಸ್ ಪಲಾವ್ ಸವಿಯಲು ಸಿದ್ಧ