ಕೆಂಪಕ್ಕಿ ಆರೋಗ್ಯಕರ ಗುಣಗಳು ಗೊತ್ತಾದ್ಮೇಲೆ ಸಣ್ಣಗಾಗಬೇಕು ಅಂತ ಅನ್ನ ಬಿಟ್ಟವ್ರೆಲ್ಲ ಕೆಂಪಕ್ಕಿ ಮೊರೆ ಹೋಗ್ತೀರಾ!!

0
1678

ಈಗ ಅನ್ನ ತಿಂದೆ ಇರೋದೇ ಒಂದು ಫ್ಯಾಷನ್ ಆಗೋಗಿದೆ. ಏನಾದ್ರೂ ಯಾಕೆ ಅಂತ ಕೇಳಿದ್ರೆ ತಟ್ಟನೆ ಡಯಟ್, ಹೆಲ್ತ್ ಕಾನ್ಸಿಯಸ್ ಅಂತೆಲ್ಲ ಉತ್ತರಗಳು ಸಿಗುತ್ತವೆ. ಅನ್ನ ತಿಂದ್ರೆ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಬರುತ್ತೆ ಅನ್ನೋ ಭಯಯುಕ್ತ ಸಮಾಜ ನಿರ್ಮಾಣವಾಗಿದೆ. ಅನ್ನದಂತಹ ಅಮೃತನ ಬಿಟ್ಟು ಆರೋಗ್ಯಕ್ಕೆ ಏನೆಲ್ಲಾ ಸರ್ಕಸ್ ಮಾಡ್ತಾ ಇದೀವಿ ಅಲ್ವಾ?

ಎಲ್ಲ ಅಕ್ಕಿ ಅನ್ನ ಕೆಟ್ಟದಲ್ಲ!! ಬರಿ ಬಿಳಿ ಅಕ್ಕಿಯಲ್ಲಿ ಮಾಡಿದ ಅನ್ನ ಮಾತ್ರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅಕ್ಕಿಯನ್ನು ಸಂಸ್ಕರಿಸುವಾಗ ಅದರ ಮೇಲಿನ ಸಿಪ್ಪೆಗಳನ್ನು ಪೂರ್ತಿಯಾಗಿ ತೆಗೆದು ಅದನ್ನು ಪಾಲಿಶ್ ಮಾಡುವುದರ ಪರಿಣಾಮವಾಗಿ ಅಕ್ಕಿ ಬಿಳಿಯಾಗುತ್ತದೆ. ಹೀಗೆ ದೊರೆತ ಅಕ್ಕಿಯಲ್ಲಿ ನಾರು, ವಿಟಮಿನ್, ಮಿನರಲ್ ಗಳೆಲ್ಲ ನಶಿಸಿ ಬರಿ ಸಕ್ಕರೆ ಅಂಶಗಳು ಅಧಿವಾಗಿ ಲಭಿಸುತ್ತದೆ. ಇದರ ನಿರಂತರ ಉಪಯೋಗದಿಂದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಹಾಗು ಇತರೆ ಜೀವನ ಶೈಲಿಗೆ ಸಂಬಂಧಪಟ್ಟ ಖಾಯಿಲೆಗಳು ಅಧಿಕವಾಗುತ್ತಿವೆ.

ಕೆಂಪಕ್ಕಿ ಆರೋಗ್ಯಕರ ಗುಣಗಳು

1. ಕೆಂಪಕ್ಕಿ ಅನ್ನದ ಸೇವನೆ ಮಧುಮೇಹ ತಡೆಯುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

2. ಕೆಂಪು ಅಕ್ಕಿ ತಿನ್ನುವುದು 30 ನಿಮಿಷ ವೇಗವಾಗಿ ನಡೆಯುವುದಕ್ಕೆ ಸಮ. ಒಂದು ದಿನಕ್ಕೆ 100 ಕ್ಯಾಲಿಯನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

3. ಸೆಲಿನಿಯಂ ಹೆಚ್ಚಿರುವುದರಿಂದ ಕುಚ್ಚಿಗೆ ಅಕ್ಕಿಯು ರೋಗಗಳು, ಕ್ಯಾನ್ಸರ್, ತಡೆಯುತ್ತದೆ.

4. ಒಂದು ಲೋಟ ಅಕ್ಕಿಯಲ್ಲಿ ದಿಂದ ಅಗತ್ಯದ ಮ್ಯಾಂಗನೀಸ್ ದೇಹಕ್ಕೆ ಪೂರೈಕೆಯಾಗುತ್ತದೆ. ಇದು ದೇಹ ಫ್ಯಾಟ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನರವ್ಯವಸ್ಥೆಯನ್ನೂ ಚೆನ್ನಾಗಿ ನಿರ್ವಹಿಸಲು ಸಹಾಯಕವಾಗಿದೆ.

5. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಲುಭಗೊಳಿಸಿ, ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ.

6. ಆ್ಯಂಟಿ ಆಕ್ಸಿಡೆಂಟ್ಸ್‌ ಅಧಿಕವಾಗಿದ್ದು, ಚರ್ಮ, ಕೂದಲು ಕಾಂತಿ ಹೆಚ್ಚಿಸುತ್ತದೆ.

7. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ.

8. ಚಿಕ್ಕ ಮಕ್ಕಳ ದೇಹದ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.