ಗಣಿ ಧಣಿ ಜನಾರ್ದನ ರೆಡ್ಡಿ ಅವರ ಮಗಳ ಮದುವೆಯ ಕರೆಯೋಲೆ ಹೇಗಿದೆ ನೋಡಿ…!

0
2533

ಬಳ್ಳಾರಿಯ ‘ಗಣಿ ದಣಿ’, ಕರ್ನಾಟಕದ ಕೋಟ್ಯಧಿಪತಿ ಗಾಲಿ ಜನಾರ್ದನ ರೆಡ್ಡಿ ತನ್ನ ಮಗಳ ಮದುವೆಗೆ ಎಲ್ಲರಿಗೂ ಆಮಂತ್ರಿಸಿದ್ದಾರೆ. ಅದು ಮದುವೆ ಕರೆಯೋಲೆ ನೀಡುವ ಮೂಲಕವಲ್ಲ. ಬದಲಿಗೆ ವಿಡಿಯೋ ದೃಶ್ಯದ ಮೂಲಕ ಎಲ್ಲರಿಗೂ ಆಹ್ವಾನ ನೀಡಿ ವಿಭಿನ್ನತೆ ಮೆರೆದಿದ್ದಾರೆ.

ಕರೆಯೋಲೆ ನೋಡಿ…!

ಇದು ಯಾವುದೊ ವಿಡಿಯೋ ಅಲ್ಲ, ಒಂದು ನಿಮಿಷಕ್ಕೂ ಹೆಚ್ಚು ಕಾಲ ರನ್ನಿಂಗ್ ವಿಡಿಯೋದಲ್ಲಿ ರೆಡ್ಡಿ ಮತ್ತು ಅವರ ಪತ್ನಿ ಮಗಳು ಬ್ರಹ್ಮಣಿ, ತನ್ನ ಮಗ ಮತ್ತು ವರ ರಾಜೀವ್ ರೆಡ್ಡಿ ನೇರವಾಗಿ ಕಾಣಿಸಲಿದ್ದಾರೆ. ಕನ್ನಡ ಹಾಡನ್ನು ಹಾಡಿ ಮದುವೆಗೆ ಆಮಂತ್ರಿಸಿಸುತ್ತಿದ್ದಾರೆ ಹಾಡು ವಿಶೇಷವಾಗಿ ಮದುವೆಗೆ ಮಾಡಿಸಿದ್ದಾರೆ.

ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಕನ್ನಡ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಮದುವೆಗೋಸ್ಕರವೇ ಗೀತೆಯೊಂದನ್ನು ವಿಶೇಷವಾಗಿ ರಚಿಸಲಾಗಿದೆ. ನ.16 ರಂದು ನಿಗದಿಯಾಗಿರುವ ರೆಡ್ಡಿ ಮಗಳ ಅದ್ದೂರಿ ಮದುವೆಯಲ್ಲಿ ಬಾಲಿವುಡ್, ಕಾಲಿವುಡ್ ನಟ-ನಟಿಯರಾದ ಶಾರುಕ್ ಖಾನ್, ಪ್ರಭುದೇವ, ತಮನ್ನಾ, ಕತ್ರಿನಾ ಕೈಫ್ ಕಾರ್ಯಕ್ರಮ ನೀಡಲಿದ್ದಾರೆ ಎನ್ನಲಾಗಿದೆ.

vlcsnap-2016-10-19-05h56m43s757

ರೆಡ್ಡಿ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಮೂರು ವರ್ಷಗಳ ಕಾಲ ಕಳೆದಿದ್ದಾರೆ. ಸುಪ್ರೀಂ ಕೋರ್ಟ್, ಜನವರಿ 22, 2015 ರಂದು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ರೆಡ್ಡಿ ಕರ್ನಾಟಕ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.