ಗಾಲಿ ರೆಡ್ಡಿ ಮಗಳು ಬ್ರಾಹ್ಮಿಣಿಯ ಮದ್ವೆಗೆ ಹೊಸ ನೋಟು ತೊಂದ್ರೆ ಮಾಡಲ್ಲ ಯಾಕ್ ಅಂದ್ರೆ…?

0
1568

ಬಿಜೆಪಿ ನಾಯಕ ಮಾಜಿ ಸಚಿವ ಹಾಗೂ ಗಣಿ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಗೆ ವಿಶೇಷ ರೀತಿಯಲ್ಲಿ ಆಮಂತ್ರಣ ಪತ್ರಿಕೆ ಮಾಡಿ ಸುದ್ದಿ ಮಾಡುತ್ತಿದ್ದು, ಮೂಲಗಳ ಪ್ರಕಾರ ಸುಮಾರು 500 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ ಬೆಂಗಳೂರಿನ ವೈಭೋಗ, ಆಡಂಬರದ ಮದುವೆಗೆ ದೊಡ್ಡ ಮೌಲ್ಯದ ನೋಟುಗಳ ನಿಷೇಧ ಅಡ್ಡಿಯಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರಧಾನಿ ಮೋದಿ ಅವರ ಮಹತ್ವದ ಆದೇಶ ಗಾಲಿ ರೆಡ್ಡಿ ಮನೆ ಮದುವೆಯ ಸಂಭ್ರಮವನ್ನು ತಗ್ಗಿಸಿಲ್ಲ. ಏಕೆಂದರೆ ಬ್ರಹ್ಮಿಣಿ ಮದುವೆಯ ಆಹ್ವಾನ ಪತ್ರಿಕೆಯನ್ನು ವಿಡಿಯೋ ಜತೆಗೆ ಎಲ್ಲರಿಗೂ ತಲುಪಿಸಿದ ಕಾಲಕ್ಕೆ ಗಾಲಿ ರೆಡ್ಡಿಗೆ ಈ ಆದೇಶದ ಮುನ್ಸೂಚನೆ ಸಿಕ್ಕಿತ್ತು ಎನ್ನಲಾಗಿದೆ.

ಬಿಜೆಪಿ ಹೈಕಮಾಂಡ್ ಕಡೆಯಿಂದ ಬಿಜೆಪಿಯ ಹಿರಿಯ ನಾಯಕರೆಲ್ಲರಿಗೂ ಇಂಥದ್ದೊಂದು ಆದೇಶದ ಬಗ್ಗೆ ಸೂಚನೆ ನೀಡಲಾಗಿತ್ತು ಎಂದು ರಹಸ್ಯ ಮಾಹಿತಿ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಇಲ್ಲ. ಒಂದು ಕಾರ್ಡ್ ಮದುವೆ ಕರೆಯೋಲೆಗೆ ಸುಮಾರು 6 ಸಾವಿರ ಖರ್ಚು ಮಾಡಿದ್ದ ಗಾಲಿ ರೆಡ್ಡಿ ಅವರು ಮದುವೆಗಾಗಿ ನೂರು ರೂಗಳ ಸುಮಾರು 400 ರಿಂದ 500 ಕೋಟಿ ರು ಮೀಸಲಿಟ್ಟಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆಗೆ ಅರಮನೆ ಮೈದಾನ ಸಜ್ಜಾಗುತ್ತಿದೆ. ಬಳ್ಳಾರಿಯಲ್ಲಿ ಕಲ್ಯಾಣ ಮಹೋತ್ಸವದ ಕಾರ್ಯಕ್ರಮಗಳು ಈಗಾಗಲೆ ಆರಂಭಗೊಂಡಿದೆ. ಮದುವೆ ನವೆಂಬರ್ 16 ರಂದು ನಟರು ಶಾರುಖ್ ಖಾನ್, ತಮನ್ನಾಹ್ ಮತ್ತು ಕತ್ರಿನಾ ಕೈಫ್ ಬಂದು ಕುಣಿಯುತ್ತಾರೆಂದು ಎಂದು ಹೇಳಲಾಗಿದ್ದು, ರೆಡ್ಡಿ ರೇಂಜಿಗೆ ಅವರೆಲ್ಲಾ ಕಮ್ಮಿ ಎನ್ನಬಹುದು.