ಜನಾರ್ದನ ರೆಡ್ಡಿ ಮಗಳ ಮದುವೆ ಖರ್ಚು 100 ಕೋಟಿ ರೂ.!?

0
1340

ಮಾಜಿ ಸಚಿವ ಹಾಗೂ ಗಣಿ ಹಗರಣದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿ ತಮ್ಮ ಮಗಳ ಮದುವೆಗೆ ವಿಶೇಷ ರೀತಿಯಲ್ಲಿ ಆಮಂತ್ರಣ ಪತ್ರಿಕೆ ಮಾಡಿ ಸುದ್ದಿ ಮಾಡುತ್ತಿದ್ದು, ಮೂಲಗಳ ಪ್ರಕಾರ ಸುಮಾರು ೧೦೦ ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎನ್ನಲಾಗಿದೆ.

ಮಾಜಿ ಬಿಜೆಪಿ ನಾಯಕ ಮಗಳ ಮದುವೆ ಆಹ್ವಾನ ಒಂದು LCD ಸ್ಕ್ರೀನ್ ನಲ್ಲಿ ವೀಡಿಯೊ ಮಾಡಿಸಿದ್ದು, ಸ್ವತಃ ರೆಡ್ಡಿ ಕುಟುಂಬ ಕಾಣಿಸಿಕೊಂಡಿದೆ. ಯಾವುದೇ ಸಿನಿಮಾದ ಅದ್ಧೂರಿ ಹಾಡಿಗೆ ಕಡಿಮೆ ಇಲ್ಲದಂತೆ ಆಮಂ ತ್ರಣ ವೀಡಿಯೋ ಚಿತ್ರೀಕರಿಸಲಾಗಿದೆ.

ಒಂದು ನಿಮಿಷಕ್ಕೂ ಹೆಚ್ಚು ಕಾಲ ರನ್ನಿಂಗ್, ವಿಡಿಯೋ ದಲ್ಲಿ ರೆಡ್ಡಿ ಮತ್ತು ಅವರ ಪತ್ನಿ, ಮಗಳು ಬ್ರಹ್ಮಣಿ, ತನ್ನ ಮಗ ಮತ್ತು ವರ ರಾಜೀವ್ ರೆಡ್ಡಿ ನೇರವಾಗಿ ಕಾಣಿಸಿ ಕೊಂಡಿದ್ದಾರೆ. ಕನ್ನಡ ಹಾಡನ್ನು ಹಾಡಿ ಮದುವೆಗೆ ಆಮಂತ್ರಿಸಿಸುತ್ತಿದ್ದಾರೆ, ಹಾಡು ವಿಶೇಷವಾಗಿ ಮದುವೆಗೆ ಮಾಡಿಸಿದ್ದಾರೆ.

ಬರಿ ವಿಡಿಯೋ ಮಾತ್ರ ಅಲ್ಲ , ಪೇಪರ್ ನಲ್ಲಿ ಕೂಡ ಆಮಂತ್ರಣ ಪತ್ರ ಇದೆ. ಡಬ್ಬ ತೆಗೆದ ತಕ್ಷಣ ವಿಡಿಯೋ autoplay ಆಗುತ್ತೆ.

ಮದುವೆ ನವೆಂಬರ್ 16 ರಂದು ನಟರು ಶಾರುಖ್ ಖಾನ್, ಸದ್ಯ, ತಮನ್ನಾಹ್ ಮತ್ತು ಕತ್ರಿನಾ ಕೈಫ್ ಬಂದು ಕುಣಿಯುತ್ತಾರೆಂದು ಗುಮಾನಿ ಇದೆ.