ತೂಕ ಇಳಿಸಿಕೊಳ್ಳಲು ಭಾರಿ ಕಠಿಣವಾದ ಡೈಯಟ್/ವ್ಯಾಯಾಮ ಮಾಡಲೇಬೇಕಿಲ್ಲ, ಈ ಸುಲಭ ಆಕ್ಯು ಪ್ರೆಶರ್ ತಂತ್ರವನ್ನು ಪಾಲಿಸಿದರೆ ಸಾಕು…

0
2526

Kannada News | Health tips in kannada

ಆಕ್ಯುಪ್ರೆಶರ್ ಚಿಕೆತ್ಸೆ ತುಂಬಾ ಪ್ರಾಚೀನ ವೈದ್ಯ ಪದ್ಧತಿಗಳಲ್ಲಿ ಒಂದಾಗಿದೆ. ಸುಮಾರು 2000 ವರ್ಷಕ್ಕೂ ಹಳೆಯದಾದ ಈ ಚಿಕೆತ್ಸೆಯನ್ನು ಚೀನಿಯರು ಇನ್ನು ಬಳಸುತ್ತಾರೆ. ಈ ಚಿಕಿತ್ಸೆಯಿಂದ ಅದ್ಭುತ ಫಲಿತಾಂಶ ಸಿಗುತ್ತದೆ. ಇದರ ಮೂಲಕ ಹೇಗೆ ಸುಲಭವಾಗಿ ದೇಹದ ತೂಕವನ್ನು ಇಳಿಸಬಹುದು ಎಂದು ತಿಳಿದುಕೊಳ್ಳೋಣ.

ನಿಮ್ಮ ದೇಹದಲ್ಲಿ ಕೆಲವು ಶಕ್ತಿಯ ಮೆರಿಡಿಯನ್ ಅಂಶಗಳನ್ನು ಒತ್ತುವ ಮೂಲಕ, ನೀವು ದೇಹದಲ್ಲಿ ಮತ್ತೊಮ್ಮೆ ಶಕ್ತಿಯ ಹರಿವನ್ನು ಮಾಡಬಹುದು ಮತ್ತು ನಿಮ್ಮ ದೇಹವು ಉತ್ತಮ ಕೆಲಸಕ್ಕೆ ಸಹಾಯ ಮಾಡಬಹುದು. ಕೇವಲ ಈ ಪಾಯಿಂಟ್ಗಳನ್ನು ಕೆಲ ನಿಮಿಷಗಳವರೆಗೆ ಒತ್ತುವುದರಿಂದ ದೇಹದ ಕೊಬ್ಬು ಕರಗುತ್ತದೆ.

ಮೊಣಕೈ:

ನಿಮ್ಮ ಮೊಣಕೈ ಒಳಗಿನ ಭಾಗದಲ್ಲಿ ಈ ಪಾಯಿಂಟ್ ಇರುತ್ತದೆ ಇದನ್ನು ಒಂದು ನಿಮಿಷಗಳ ಕಾಲ ಒತ್ತಿರಿ. ಇದನ್ನು ನಿತ್ಯ ಪಾಲಿಸಿಕೊಂಡು ಬನ್ನಿ.

ಮೊಣಕಾಲು:
ನಿಮ್ಮ ಮೊಣಕಾಲುಗಳು ಸಹ ಆಕ್ಯುಪ್ರೆಶರ್ ಮಸಾಜ್ ಗೆ ಉತ್ತಮ ಪಾಯಿಂಟ್. ಪ್ರತಿದಿನ ಮೊಣಕಾಲಿನ ಪಾಯಿಂಟ್ಗಳಿಗೆ ಒತ್ತಡ ಹಾಕಿ.

ಹೊಟ್ಟೆ:

ನಿಮ್ಮ ಹೊಟ್ಟೆಯಲ್ಲಿ ಹೆಚ್ಚಿನ ಒತ್ತಡದ ಅಂಶಗಳಿವೆ, ಅದು ಹೆಚ್ಚು ವೇಗವಾಗಿ ಶಕ್ತಿಯ ಹರಿವನ್ನು ಸಕ್ರಿಯಗೊಳಿಸುತ್ತದೆ. ಈ ಪಾಯಿಂಟ್ ನಿಮ್ಮ ಹೊಕ್ಕಳಿನಿಂದ 2 ಬೆರಳಿನಷ್ಟು ಕೆಳಗೆ ಇಟ್ಟಿರುತ್ತದೆ. ಒಂದು ನಿಮಿಷ ಈ ಸ್ಥಳವನ್ನು ಮಸಾಜ್ ಮಾಡಿ.

ಹಿಮ್ಮಡಿ:
ಹಿಮ್ಮಡಿಯ ಒಳಗಿನ ಭಾಗದಲ್ಲಿರುವ ಈ ಆಕ್ಯುಪ್ರೆಶರ್ ಪಾಯಿಂಟ್ಗಳನ್ನು ನಿತ್ಯ ಒತ್ತಡದಿಂದ ಮಸಾಜ್ ಮಾಡುತ್ತ ಬಂದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

ತುಟಿಯ ಮೇಲ್ಭಾಗ:
ನಿಮ್ಮ ಮೇಲಿನ ತುಟಿಯ ಮೇಲ್ಭಾಗದಲ್ಲಿ ಈ ಆಕ್ಯುಪ್ರೆಶರ್ ಪಾಯಿಂಟ್ ಇದೆ. ಇದನ್ನು ನಿತ್ಯ ಒಂದು ನಿಮಿಷದವರೆಗೆ ಒತ್ತಿ ಮಸಾಜ್ ಮಾಡಿ ಉತ್ತಮ ಫಲಿತಾಂಶ ಗಳಿಸಿ.

ಕೈ:

ನಿಮ್ಮ ಕೈಯ ಹೊರಗಿನ ಭಾಗ ಮತ್ತು ನಿಮ್ಮ ಹೆಬ್ಬೆರಳು ನಡುವೆ ಈ ಪಾಯಿಂಟ್ ಇರುತ್ತದೆ. ಇದನ್ನು ನಿತ್ಯ ಒಂದು ನಿಮಿಷದವರೆಗೆ ಒತ್ತಿರಿ.

ಟ್ರಾಪಜಿಯಸ್ ಸ್ನಾಯು:

ನಿಮ್ಮ ಬೆನ್ನು, ನಿಮ್ಮ ಕುತ್ತಿಗೆ, ನಿಮ್ಮ ಭುಜ ಸೇರುವ ಈ ಭಾಗದಲ್ಲಿ ಈ ಸ್ನಾಯು ಇರುತ್ತದೆ. ಒಂದು ನಿಮಿಷದ ಕಾಲ ಈ ಸ್ಥಳದ ಮೇಲೆ ಒತ್ತಡವನ್ನು ಹಾಕಿ, ನಂತರ ದೇಹದ ವಿರುದ್ದ ದಿಕ್ಕಿನಲ್ಲಿ ಕೂಡ ಇದನ್ನೇ ಮಾಡಿ.

ಪಾದ:

ಪಾದದಲ್ಲಿ ಐದು ಆಕ್ಯುಪ್ರೆಶರ್ ಪಾಯಿಂಟ್ಗಳಿವೆ ಅವುಗಳನ್ನು ನಿತ್ಯ ಒಂದು ನಿಮಿಷ ಮಸಾಜ್ ಮಾಡಿದರೆ, ನಿಮ್ಮ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ.

ಹುಬ್ಬುಗಳು ಮದ್ಯೆ:
ಕಣ್ಣಿನ ಮೇಲಿನ ಎರಡು ಹುಬ್ಬುಗಳ ಮದ್ಯೆ ಈ ಆಕ್ಯುಪ್ರೆಶರ್ ಪಾಯಿಂಟ್ ಇರುತ್ತದೆ. ಇದನ್ನು ನಿಧಾನವಾಗಿ ಒಂದು ನಿಮಿಷದ ವರೆಗೆ ಒತ್ತಿರಿ.

ಎದೆಯೆಲುಬು:
ಸೆಲಿಯಕ್ ಪ್ಲೆಕ್ಸಸ್ ಮೇಲ್ಭಾಗದಲ್ಲಿರುವ ಈ ಆಕ್ಯುಪ್ರೆಶರ್ ಪಾಯಿಂಟ್ ಇರುತ್ತದೆ. ನಿತ್ಯ ಒಂದು ನಿಮಿಷ ಅದನ್ನು ಒತ್ತಿದರೆ ಅದು ನಿಮಗೆ ಶಕ್ತಿಯನ್ನು ಪುನಃಸ್ಥಾಪಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಕಿವಿ:

ಕಿವಿಯ ಮುಂದೆ ಮದ್ಯೆ ಭಾಗದಲ್ಲಿ ಈ ಆಕ್ಯುಪ್ರೆಶರ್ ಪಾಯಿಂಟ್ ಇರುತ್ತದೆ ನಿತ್ಯ ಒಂದು ನಿಮಿಷ ಒತ್ತಿ ಅದು ನಿಮಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಎದೆಯ ಕೆಳಗೆ:
ನಿಮ್ಮ ಹೊಟ್ಟೆ ಇರುವ ಪ್ರದೇಶದ ಮೇಲೆ ನಿಮ್ಮ ಎದೆಯ ಕೆಳಗೆ ಈ 2 ಪಾಯಿಂಟ್ಗಳಿರುತ್ತವೆ. ನಿಮ್ಮ ಹೊಟ್ಟೆಯನ್ನು ಮೇಲ್ಮುಖವಾಗಿ ಮಸಾಜ್ ಮಾಡಿ.

ಮೂಗಿನ ಸೇತುವೆ:

ನಿಮ್ಮ ಕಣ್ಣುಗಳ ಮದ್ಯೆ ಇರುವ ಮೂಗಿನ ಎರಡು ಇರುತ್ತೆ ಈ ಆಕ್ಯುಪ್ರೆಶರ್ ಪಾಯಿಂಟ್. ಕನ್ನಡಿಯಲ್ಲಿ ಎಚ್ಚರಿಕೆಯಿಂದ ನೋಡಿ ಕಣ್ಣಿನಿಂದ ಶುರುಮಾಡಿ ಮೂಗಿನವರೆಗೆ ಮೇಲ್ಮುಖವಾಗಿ ಒತ್ತಡ ಹಾಕಿ.

Also Read: ನಾರಿನಿಂದ ದೇಹಕ್ಕೆ ಎಷ್ಟೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ ಈಗ್ಲಿಂದಾನೆ ಹಸಿ ತರಕಾರಿ ಹಣ್ಣು ತಿನ್ನಲು ಸ್ಟಾರ್ಟ್ ಮಾಡ್ತೀರಾ…