ರಿಲಯನ್ಸ್ ಬಿಗ್ ಟಿವಿಯಿಂದ ಭರ್ಜರಿ ಗಿಫ್ಟ್ 500 ಚಾನಲ್ 5 ವರ್ಷ ಸಂಪೂರ್ಣ ಉಚಿತ.. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

2
1728

ರಿಲಯನ್ಸ್ ಬಿಗ್ ಟಿ ವಿ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ.. ಹೌದು 500 ಚಾನೆಲ್ ಗಳನ್ನು 5 ವರ್ಷಗಳ ಕಾಲ ಉಚಿತವಾಗಿ ನೀಡುವ ಮೂಲಕ ಎಲ್ಲರೂ ಬಿಗ್ ಟಿ ವಿ ಕಡೆ ಮುಖ ಮಾಡುವಂತಾಗಿದೆ..

ಈ ಕೊಡುಗೆಯನ್ವಯ ಶುಲ್ಕ ರಹಿತ ಮನರಂಜನಾ ಚಾನಲ್ ಗಳು ಸೇರಿದಂತೆ 500 ಚಾನಲ್ ಗಳು ಉಚಿತವಾಗಲಿದೆ.. ಶುಲ್ಕ ಸಹಿತ ಚಾನಲ್ ಗಳು ಒಂದು ವರ್ಷ ಉಚಿತವಾಗಲಿದೆ.. HD ಚಾನಲ್ ಗಳನ್ನು ಉಚಿತವಾಗಿ ನೀಡುವ ಭರವಸೆಯನ್ನು ನೀಡಿರುವ ರಿಲಯನ್ಸ್ ಶುಲ್ಕದ ವಿವರ ಕೆಳಗಿದೆ ನೋಡಿ..

ಶುಲ್ಕದ ವಿವರ..

ಮೊದಲ ವರ್ಷ ಸಂಪೂರ್ಣ ಉಚಿತ ವಾಗಿ ಎಲ್ಲಾ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ.. ಜೊತೆಗೆ ಒಂದು ವರ್ಷದ ನಂತರ ಶುಲ್ಕ ಸಹಿತ ಚಾನೆಲ್ ಗಳನ್ನು ನೋಡಲು 300 ರೂ ಮಾಸಿಕವಾಗಿ ಪಾವತಿಸಬೇಕಿದೆ.. ಉಳಿದಂತೆ ಶುಲ್ಕ ರಹಿತ ವಾದ 500 ಚಾನೆಲ್ ಗಳನ್ನು 5 ವರ್ಷ ಸಂಪೂರ್ಣ ಉಚಿತವಾಗಿ ನೋಡಬಹುದಾಗಿದೆ..

ಎರಡನೇ ವರ್ಷದಿಂದ ನಾಲ್ಕನೇ ವರ್ಷದ ವರೆಗೆ ಮಾಸಿಕ ಶುಲ್ಕವನ್ನು ಕಟ್ಟಿದ ನಂತರ.. 2000 ರೂಪಾಯಿಗಳನ್ನು ನಿಮ್ಮ ಡಿಟಿಹೆಚ್ ರೀಚಾರ್ಜ್ ರೂಪದಲ್ಲಿ ಮರುಪಾವತಿಸಲಾಗುವುದು..

ಬುಕ್ ಮಾಡುವುದು ಹೇಗೆ..

ಮುಂಗಡ ಬುಕಿಂಗ್ ಅನ್ನು ಬಿಗ್ ಟಿ ವಿ ಯ ಅಧಿಕೃತ ವೆಬ್‌ಸೈಟ್‌ನಲ್ಲಿ 499 ರೂಪಾಯಿಗಳ ಶುಲ್ಕವನ್ನು ಪಾವತಿಸಿ ಬುಕ್ ಮಾಡಬಹುದಾಗಿದೆ.. ಉಳಿದ 1500 ರೂಪಾಯಿಗಳನ್ನು ಸೆಟ್ ಅಪ್ ಬಾಕ್ಸ್ ಪಡೆದುಕೊಂಡ ಮೇಲೆ ಪಾವತಿಸಬೇಕು..

ಬಿಗ್ ಟಿವಿ ಎನ್ನು ಬುಕ್ ಮಾಡುವವರು ಈ ಲಿಂಕ್ www.reliancedigitaltv.com ಮೂಲಕ ಅಧಿಕೃತ ವೆಬ್ಸೈಟ್ ಗೆ ಹೋಗಿ ಬುಕ್‌ಮಾಡಬಹುದಾಗಿದೆ..