ಜಿಯೋದಿಂದ ಮತ್ತೊಂದು ಕ್ರಾಂತಿ 600 ರು.ಗೆ ಟೀವಿ, ಲ್ಯಾಂಡ್‌ಲೈನ್‌, ಬ್ರಾಡ್‌ ಬ್ಯಾಂಡ್‌ ಏನೆಲ್ಲ ಸೇವೆ ಉಚಿತ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

0
699

ಇಂಟರ್ನೆಟ್ ಬಳಕೆದಾರರಿಗೆ ಒಂದಿಲ್ಲದೊಂದು ಪ್ಲಾನ್ ಮತ್ತು ಕೊಡುಗೆಯನ್ನು ನೀಡಿ ಸುದ್ದಿಯಲ್ಲಿರುವ ಜಿಯೋ ದಾಳಿಗೆ ಏರ್ಟೆಲ್, ಐಡಿಯಾ, ವೊಡಫೋನ್, ಮತ್ತು ಇತರೆ ಕಂಪನಿಗಳು ದಿಕ್ಕಾಪಾಲಾಗಿವೆ. ಜಿಯೋ ಕೇವಲ ಎರಡುವರೆ ವರ್ಷದ ಕಾರ್ಯಗಳಲ್ಲೇ ಸರಿಸುಮಾರು 300 ಮಿಲಿಯನ್ ಗ್ರಾಹಕರನ್ನು ದಾಟಿದೆ. ಇದೆಲ್ಲ ಸಾಧಿಸಿರುವುದು ಕಂಪೆನಿಯು ನೀಡುವ ಆಕರ್ಷಕ ಕೊಡುಗೆಗಳು ಎಂದು ಹೇಳಬಹುದು. ಇದೆಲ್ಲ ಮೊಬೈಲ್ ಸಂಬಂಧಿಸಿದ ಕೊಡುಗೆಯಾದರೆ ಈಗ ಜಿಯೋ ಟಿವಿ ಯುಗದಲ್ಲಿವೂ ತನ್ನ ಕ್ರಾಂತಿಯನ್ನು ಶುರುಮಾಡಿದೆ.
ಹೌದು ಕಡಿಮೆ ದರದಲ್ಲಿ ದರಕ್ಕೆ 4ಜಿ ಸೇವೆ ನೀಡಿ ಗ್ರಾಹಕರನ್ನು ಸೇಳೆಯಲು ಯಶಸ್ವಿಯಾಗಿರುವ ರಿಲಯನ್ಸ್‌ ಜಿಯೋ, ಇದೀಗ ತಿಂಗಳಿಗೆ ಕೇವಲ 600 ರು.ಗೆ ಹೈ ಸ್ಪೀಡ್‌ ಬ್ರಾಡ್‌ ಬ್ಯಾಂಡ್‌, ಸ್ಥಿರ ದೂರವಾಣಿ ಹಾಗೂ ಇಂಟರ್‌ನೆಟ್‌ ಟೀವಿ ಸೇವೆ ಒದಗಿಸಲಿದೆ. ಇದರಿಂದಾಗಿ ಜಿಯೋ 600 ರು.ಗೆ ಟೀವಿ, ಲ್ಯಾಂಡ್‌ಲೈನ್‌, ಬ್ರಾಡ್‌ ಬ್ಯಾಂಡ್‌, ಗಿಗಾಫೈಬರ್‌ ಮೂಲಕ 100 ಎಂಬಿ ವೇಗದಲ್ಲಿ 100 ಜಿ.ಬಿ. ಡೇಟಾ, 600 ಟೀವಿ ಚ್ಯಾನಲ್‌ಗಳು, ಅನಿಯಮಿತಿ ದೂರವಾಣಿ ಕರೆ ಸೌಲಭ್ಯವನ್ನು ಒದಗಿಸಲಿದೆ.

ಈಗಾಗಲೇ ದೆಹಲಿ ಮತ್ತು ಮುಂಬೈನಲ್ಲಿ ಪ್ರಾಯೋಗಿಕವಾಗಿ 100 ಮೆಗಾಬೈಟ್‌ ವೇಗದಲ್ಲಿ 100 ಜಿಜಿ ಡೇಟಾ ನೀಡುವ ಗಿಗಾಫೈಬರ್‌ ಯೋಜನೆಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೋಟರ್‌ಗೆ 4,500 ರು. ಶುಲ್ಕ ಹೊರತುಪಡಿಸಿ ಉಳಿದಲ್ಲವೂ ಉಚಿತವಾಗಿ ನೀಡಲಾಗುತ್ತಿದೆ. ಈ ಸೇವೆಗೆ ಮುಂದಿನ ಮೂರು ತಿಂಗಳಿನಲ್ಲಿ ಸ್ಥಿರ ದೂರವಾಣಿ ಮತ್ತು ಇಂಟರ್‌ನೆಟ್‌ ಟೀವಿ ಸೇವೆಯನ್ನು ಸೇರ್ಪಡೆ ಮಾಡಲಾಗುತ್ತದೆ. ಇದರಿಂದ ಗ್ರಾಹಕರನ್ನು ಸೆಳೆಯಲು ಹೊಸ ಪ್ಲಾನ್ ಮಾಡಿದ್ದು ಒಂದು ವರ್ಷಗಳ ಕಾಲ ಉಚಿತವಾಗಿ ಈ ಸೇವೆಯನ್ನು ನೀಡಲಾಗುತ್ತದೆ. ಬಳಿಕ ವಾಣಿಜ್ಯಿಕವಾಗಿ ರಿಲಯನ್ಸ್‌ ಜಿಯೋ ಗಿಗಾ ಫೈಬರ್‌ ಯೋಜನೆಯನ್ನು ಇತರ ನಗರಗಳಲ್ಲೂ ಜಾರಿ ಮಾಡಲಿದೆ.

ಇದರಲ್ಲಿ ಯಾವರೀತಿಯ ಸೇವೆಗಳಿವೆ?

ಜಿಯೋ ಹೊಸ ಯೋಜನೆಯಲ್ಲಿ ಮೂರು ವಿಧದ ಸೇವೆಗಳು ಸಿಗಲಿದ್ದು ಆಫ್ಟಿಕಲ್‌ ನೆಟ್‌ವರ್ಕ್ ಟರ್ಮಿನಲ್‌ (ONT) ಬಾಕ್ಸ್‌ ರೂಟರ್‌ನ ಮೂಲಕ ಲಭ್ಯವಾಗಲಿದ್ದು. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟೀವಿ, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಹಾಗೂ ಸ್ಮಾರ್ಟ್‌ ಉಪಕರಣಗಳು ಸೇರಿದಂತೆ 40ರಿಂದ 45 ಉಪಕರಣಗಳಿಗೆ ಸಂಪರ್ಕಿಸಬಹುದಾಗಿದೆ. ಇಂಟರ್‌ನೆಟ್‌ ಟೀವಿಯಲ್ಲಿ 600 ಚ್ಯಾನಲ್‌ಗಳು, ಸ್ಥಿರ ದೂರವಾಣಿಯಲ್ಲಿ ಅನಿಯಮಿತ ಕರೆ ಸೌಲಭ್ಯ ಮತ್ತು 100 ಮೆಗಾಬೈಟ್‌ ವೇಗದಲ್ಲಿ ಬ್ರಾಡ್‌ ಬ್ರ್ಯಾಂಡ್‌ ಸೇವೆ ಲಭ್ಯವಾಗಲಿದೆ.

ಸಿಮ್ ರೀತಿಯಂತೆ ಸಿಗಲಿದಯಾ ಉಚಿತ ಸೇವೆ?

ಹೌದು ಜಿಯೋ ಮೊದಲು 4G ಸಿಮ್ ಬಿಡುಗಡೆಗೊಳಿಸಿದ್ದಾಗೆ ಹೇಗೆ ಉಚಿತ ಇಂಟರ್ನೆಟ್ ಫ್ರೀ ಕಾಲ್ ನಿಡಿತ್ತೋ ಹಾಗೆಯೇ. ಜಿಯೋ ಫೈಬರ್ ಕೂಡ ಒಂದು ವರ್ಷ ಉಚಿತವಾಗಿ ಸಿಗಲಿದೆ. ಲ್ಯಾಂಡ್‍ಲೈನ್‍ನಲ್ಲಿ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿ ನೀಡಲಿದೆ. ಲ್ಯಾಂಡ್‍ಲೈನ್ ಮತ್ತು ಟಿವಿ ವಾಹಿನಿ ಸೇವೆಗಳು ಮೂರು ತಿಂಗಳಿನಲ್ಲಿ ಸೇರ್ಪಡೆಯಾಗಲಿದೆ. ಈಗಾಗಲೇ ಟಿವಿ ವೀಕ್ಷಣೆಗೆ ಜಿಯೋ ಟಿವಿ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ ನಲ್ಲಿ ಬರುವ ಎಲ್ಲ ಟಿವಿಗಳನ್ನು ವೀಕ್ಷಿಸಬಹುದಾಗಿದೆ. ಈ ಸೇವೆ ಆರಂಭಗೊಂಡ ದಿನದಿಂದ ಒಂದು ವರ್ಷದವರೆಗೆ ಎಲ್ಲ ಸೇವೆಗಳು ಉಚಿತವಾಗಿ ಸಿಗಲಿದ್ದು, ಒಂದು ವರ್ಷದ ಬಳಿಕ ಗ್ರಾಹಕರು ಬೇಕಾದ ಪ್ಯಾಕ್‍ಗೆ ಅನುಗುಣವಾಗಿ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ರೂಟರ್ ಖರಿದಿಸಲೇ ಬೇಕಾ?

ಒಂದು ವರ್ಷ ಉಚಿತ ಸೇವೆ ಆದರೂ ಗ್ರಾಹಕರು ಆರಂಭದಲ್ಲಿ 4,500 ರೂ. ನೀಡಿ ರೂಟರ್ ಖರೀಸಬೇಕು. ಎಲ್ಲ ಇಂಟರ್‍ನೆಟ್ ಸೇವೆಗಳು ಆಪ್ಟಿಕಲ್ ನೆಟ್‍ವರ್ಕ್ ಟರ್ಮಿನಲ್ (ಒಎನ್‍ಟಿ) ಬಾಕ್ಸ್ ರೂಟರ್ ಮೂಲಕ ನಡೆಯಲಿದ್ದು, ಒಂದೇ ಬಾರಿಗೆ ಒಟ್ಟು 40-45 ಡಿವೈಸ್ ಗಳನ್ನು ಕನೆಕ್ಟ್ ಮಾಡಬಹುದು. ಮೊಬೈಲ್, ಸ್ಮಾರ್ಟ್ ಟಿವಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಗೇಮಿಂಗ್, ಸಿಸಿಟಿವಿ, ಸ್ಮಾರ್ಟ್ ಹೋಮ್ ಸಿಸ್ಟಂ ಸಹ ಕನೆಕ್ಟ್ ಮಾಡಬಹುದು. ಈ ಸೇವೆಯ ಇನ್ನೊಂದು ವಿಶೇಷ ಏನೆಂದರೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೇರಿದಂತೆ ಇತರ ಡೇಟಾಗಳನ್ನು ಕ್ಲೌಡ್ ಮೂಲಕ ಸೇವ್ ಆಗಲಿದೆ. ಈ ಮೂಲಕ ಎಲ್ಲೇ ಹೋದರೂ ಡೇಟಾಗಳನ್ನು ಗ್ರಾಹಕರು ಚೆಕ್ ಮಾಡಬಹುದು.

ಜಿಯೋ ಪರಿಣಾಮವಾಗಿ ಇತರೆ ಕಂಪನಿಗಳಿಗೆ ಹೊಡೆತ:

ಪ್ರಸ್ತುತ ಭಾರತದಲ್ಲಿ 1.8 ಕೋಟಿ ಜನ ಬ್ರಾಂಡ್ ಬ್ಯಾಂಡ್ ಬಳಕೆ ಮಾಡುತ್ತಿದ್ದರೆ 53 ಕೋಟಿ ಜನ ಮೊಬೈಲ್ ಡೇಟಾ ಬಳಕೆ ಮಾಡುತ್ತಿದ್ದಾರೆ. ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಅಧಿಕೃತವಾಗಿ ಆರಂಭವಾದರೆ ಟೆಲಿಕಾಂ ಕಂಪನಿಗಳಿಗೆ ಹೇಗೆ ಹೊಡೆತ ನೀಡಿತ್ತೋ ಅದೇ ರೀತಿಯಾಗಿ ಬ್ರಾಡ್‍ಬ್ಯಾಂಡ್ ಕಂಪನಿಗಳಿಗೆ ಹೊಡೆತ ನೀಡಬಹುದು ಎನ್ನುವ ವಿಶ್ಲೇಷಣೆ ಈಗಾಗಲೇ ಕೇಳಿ ಬಂದಿದೆ.