ಡಾನ್ಸ್​ ಬಾರ್​ಗಳಿಗೆ ವಿಧಿಸಿದ್ದ ಕಠಿಣ ಕಾನೂನು ಕ್ರಮಗಳನ್ನು ವಜಾ ಮಾಡಿದ ಸುಪ್ರೀಂಕೋರ್ಟ್​; ಹೊಸ ನಿಯಮ ಜಾರಿ ಮಾಡಿದೆ..

0
313

ಬಾರ್ ಮತ್ತು ಪಬ್ -ಗಳಲ್ಲಿ ನಡೆಯುವ ಮನರಂಜನೆ ಡಾನ್ಸ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ತಗಾದೆ ನಡೆಯುತ್ತಾನೆ ಇದೆ. ಈ ವಿಷಯಕ್ಕೆ ಸಂಬಂಧಪಟಂತೆ ಮಾಹಾರಾಷ್ಟ್ರ ಸರ್ಕಾರ ಕಠಿಣ ಕಾನೂನು ಕ್ರಮ ವಿಧಿಸಿತ್ತು ಆ ಕಾರಣಕ್ಕೆ ಡ್ಯಾನ್ಸ್​ ಬಾರ್ ತೆರೆಯಲು ಮಹಾರಾಷ್ಟ್ರದಲ್ಲಿ 2005ರಿಂದ ಈವರೆಗೂ ಒಬ್ಬ ವ್ಯಕ್ತಿಗೂ ಡ್ಯಾನ್ಸ್​ ಬಾರ್​ ತೆರೆಯಲು ಪರವಾನಗಿ ಸಿಕ್ಕಿಲ್ಲ. ಈ ವಿಷಯವಾಗಿ ಸುಪ್ರೀಂಕೋರ್ಟ್​ ನಿರ್ಬಂಧನೆಗಳನ್ನು ವಿಧಿಸಬಹುದೇ ಹೊರತು ಸಂಪೂರ್ಣ ನಿಷೇಧಿಸುವಂತಿಲ್ಲ. ಎಂದು ತೀರ್ಪು ನೀಡಿದೆ.

Also read: ಅತ್ಯಾಚಾರ ತಡೆಯಲು ಹೊಸ ಡಿವೈಸ್; ಇದನ್ನು ಅಳವಡಿಸಿಕೊಂಡರೆ ಮಹಿಳೆಯರಿಗೆ ಕಾಮುಕರಿಂದ ಯಾವುದೇ ತೊಂದರೆ ಆಗುವುದಿಲ್ಲವಂತೆ..

ಏನಿದು ತೀರ್ಪು?

ಭಾರತವು ಧಾರ್ಮಿಕತೆಗೆ ಹೆಸರುವಾಸಿಯಾಗಿದೆ. ಈ ಡಾನ್ಸ್ ಬಾರ್ ಗಳಿಂದ ಧಾರ್ಮಿಕತೆಗೆ ಧಕ್ಕೆಯಾಗುತ್ತೆ ಆದಕಾರಣ ಧಾರ್ಮಿಕ ಪ್ರದೇಶ ಮತ್ತು ಶಿಕ್ಷಣ ಸಂಸ್ಥೆಗಳ 1 ಕಿ.ಮೀ ವ್ಯಾಪ್ತಿಯೊಳಗೆ ಡಾನ್ಸ್​ ಬಾರ್​ ತೆರೆಯುವಂತಿಲ್ಲ ಎಂದು ಹಲವು ವರ್ಷಗಳಿಂದ ವಿವಾದ ನಡೆಯುತ್ತಿದೆ. ಇದಕ್ಕೆ ಸುಪ್ರಿಂಕೋರ್ಟ್ ಡಾನ್ಸ್​ ಬಾರ್​ಗೆ ಮಹಾರಾಷ್ಟ್ರ ಸರ್ಕಾರ ವಿಧಿಸಿದ್ದ ಕಠಿಣ ಕಾನೂನು ಕ್ರಮಗಳನ್ನು ಸುಪ್ರೀಂಕೋರ್ಟ್​ ಸಡಿಲಗೊಳಿಸಿದೆ. ಇವುಗಳ ಮೇಲೆ ನಿರ್ಬಂಧಗಳು ಇರಬೇಕೇ ಹೊರತು ಸಂಪೂರ್ಣ ನಿಷೇಧ ಹೇರಬಾರದು ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಸುಪ್ರೀಂಕೋರ್ಟ್​ ಹೇಳಿದು ಏನ್?

ಧಾರ್ಮಿಕ ಪ್ರದೇಶ ಮತ್ತು ಶಿಕ್ಷಣ ಸಂಸ್ಥೆಗಳ 1 ಕಿ.ಮೀ ವ್ಯಾಪ್ತಿಯೊಳಗೆ ಡಾನ್ಸ್​ ಬಾರ್​ ತೆರೆಯುವಂತಿಲ್ಲ ಎಂಬ ನಿಯಮ ಸಮಂಜಸವಾದುದ್ದಲ್ಲ ಎಂದು ನ್ಯಾ.ಎ.ಕೆ.ಸಿಖ್ರಿ ನೇತೃತ್ವದ ನ್ಯಾಯಪೀಠ, ​ಡ್ಯಾನ್ಸ್ ಪ್ರದರ್ಶನ ನೀಡುವವರಿಗೆ ಟಿಪ್ಸ್​​ ನೀಡುವ ಅವಕಾಶ ಕೊಟ್ಟಿದೆಯಾದರೂ ಹಣವನ್ನು ಮನಬಂದಂತೆ ಎರಚುವಂತಿಲ್ಲ ಇನ್ನು ಪ್ರದರ್ಶನಗೊಂಡ ನಂತರ ಬಾರ್​ ಕೋಣೆ ಮತ್ತು ನೃತ್ಯ ಮಹಡಿಯನ್ನು ಸ್ಥಗಿತಗೊಳಿಸಬೇಕು ಎಂದು ಆದೇಶ ನೀಡಿದೆ. ಮುಖ್ಯವಾಗಿ ವ್ಯಕ್ತಿಯ ಖಾಸಗಿತನಕ್ಕೆ ದಕ್ಕೆ ತರಲಿದೆ. ಗೌಪ್ಯತೆಯನ್ನು ಉಲ್ಲಂಘಿಸುವ ಕಾರಣಕ್ಕೆ ಸುಪ್ರೀಂ ಕೋರ್ಟ್​ ಈ ನಿರ್ಧಾರವನ್ನು ಬದಲಿಸಿ ಡಾನ್ಸ್​ ಬಾರ್​ಗೆ ಮಹಾರಾಷ್ಟ್ರ ಸರ್ಕಾರ ವಿಧಿಸಿದ್ದ ಕಠಿಣ ಕಾನೂನು ಕ್ರಮಗಳನ್ನು ಸುಪ್ರೀಂಕೋರ್ಟ್​ ಸಡಿಲಗೊಳಿಸಿದೆ.

ಧಾರ್ಮಿಕ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಒಂದು ಕಿ.ಮೀ. ಅಂತರದಲ್ಲಿ ಡಾನ್ಸ್​ ಬಾರ್​ ಇರಬಾರದು ಎಂಬ ನಿಯಮ ದೊಡ್ಡ ದೊಡ್ಡ ನಗರದಲ್ಲಿ ಅನ್ವಯಿಸಿಕೊಳ್ಳಲು ಕಷ್ಟ ಎಂದು ಡಾನ್ಸ್​ ಬಾರ್ ಮಾಲೀಕರು ಆಕ್ಷೇಪಣೆ ಎತ್ತಿದ್ದರು. ಈ ವಿಷಯವಾಗಿ ಸುಪ್ರೀಂಕೋರ್ಟ್​ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಪರ ವಕೀಲ ನಿಶಾಂತ್ ಕಾಟ್ನೇಶ್ವರ್​ಕರ್, ಬಾರಿನಲ್ಲಿ ಕೆಲಸ ಮಾಡುವ ಹುಡುಗಿಯರ ರಕ್ಷಣೆ ದೃಷ್ಟಿಯಿಂದ ಕೆಲವು ಕಠಿಣ ನಿಯಮಗಳನ್ನು ತೆಗೆದುಕೊಳ್ಳಲಾಗಿತ್ತು. ಈಗ ಸುಪ್ರೀಂಕೋರ್ಟ್​ ಆದೇಶ ನೀಡಿದಂತೆ ಮುಂದಿನ ದಿನಗಳಲ್ಲಿ ಡಾನ್ಸ್​ ಬಾರ್ ತೆರೆಯಲು ಪರವಾನಗಿ ನೀಡಲಾಗುವುದು ಎಂದು ಹೇಳಿದ್ದಾರೆ.