ಆಮಶಂಕೆ ಅಥವಾ ರಕ್ತಭೇದಿಯಿಂದ ಬಳಲುತ್ತಿದ್ದೀರ, ಹಾಗಾದರೆ ನೀವು ಈ ಔಷದಿಯ ಬಗ್ಗೆ ಖಂಡಿತ ಓದಲೇಬೇಕು…

0
3818

ತೀವ್ರವಾದ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ, ಪಚನವಾಗಲು ಕಷ್ಟವಾದ ಎಣ್ಣೆ ಪದಾರ್ಥಗಳ ಸೇವನೆಯಿಂದ, ಅತಿಯಾದ ಖಾರ ತಿನ್ನುವುದರಿಂದ ಆಮಶಂಕೆ ಉಂಟಾಗುತ್ತದೆ. ಮಲದೊಂದಿಗೆ ರಕ್ತ ಹೋಗುವುದು ಈ ಖಾಯಿಲೆಯ ಚಿಹ್ನೆ. ತಕ್ಷಣ ಚಿಕಿತ್ಸೆ ಪಡೆಯದಿದ್ದಲ್ಲಿ ಆಮಶಂಕೆಯು ಉಗ್ರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ.

ಆಮಶಂಕೆಗೆ ಕೆಲವು ಮನೆಮದ್ದುಗಳು ಇಲ್ಲಿದೆ.

೧) ದಾಳಿಂಬೆ ಬೀಜಗಳನ್ನು ಅರೆದು ಸ್ವಚ್ಛವಾದ ಕಾದಾರಿದ ನೀರಿನಲ್ಲಿ ಬೆರೆಸಿ ಕುಡಿಯುವುದು.
೨) ಬಾರ್ಲಿ ಗಂಜಿಯ ಸೇವನೆಯಿಂದಲೂ ಆಮಶಂಕೆ ನಿಲ್ಲುತ್ತದೆ.
೩) ಚಹಾಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸಿದರೆ ಆಮಶಂಕೆ ನಿಲ್ಲುತ್ತದೆ.
೪) ಊಟದ ನಂತರ ನೇರಳೆ ಹಣ್ಣಿನ ಶರಬತ್ತನ್ನು ಸೇವಿಸುವುದು.
೫) ಮೆಂತ್ಯದ ಪುಡಿಯನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಬೇಕು.

೬) ಬೇಯಿಸಿದ ಹುರಳಿಕಾಳಿನ ಕಟ್ಟನ್ನು ಬಸಿದು ಮಾಡಿದ ಸಾರನ್ನು ಸೇವಿಸುವುದು.
೭) ಎಳೇ ಸೀಬೆಕಾಯಿಯ ರಸವನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯುವುದು.
೮) ದಾಳಿಂಬೆ ಹಣ್ಣಿನ ಬೀಜಗಳನ್ನು ಹೊರತೆಗೆದು ಉಳಿದ ದಿಂಡಿನಿಂದ ಕಷಾಯ ತಯಾರಿಸಿ, ಈ ಕಷಾಯವನ್ನು ಮೆಂತ್ಯದ ಕಷಾಯಕ್ಕೆ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಬೇಕು.
೯) ಒಂದು ಟೀ ಸ್ಪೂನ್ ನಿಂಬೆರಸವನ್ನು ಚೆನ್ನಾಗಿ ಮಾಗಿದ ಬಾಳೆಹಣ್ಣು ಮತ್ತು ಜೇನುತುಪ್ಪದೊಂದಿಗೆ ಸೇವಿಸುವುದು ಆಮಶಂಕೆಗೆ ಉತ್ತಮ ಮದ್ದು.

೧೦) ಮನೆಯಲ್ಲಿ ತಯಾರಿಸಿದ ಅರಿಶಿನ ಪುಡಿಯನ್ನು ಒಂದು ಬಟ್ಟಲು ಮೊಸರಿನಲ್ಲಿ ಕದಡಿ ಬೆಳಿಗ್ಗೆ ಸಂಜೆ ಸೇವಿಸುವುದು ಆಮಶಂಕೆಗೆ ಉತ್ತಮ ಉಪಶಮನವನ್ನು ಕೊಡುತ್ತದೆ.
೧೧) ಬಾಳೆದಿಂಡಿನ ಪಲ್ಯ ಸೇವಿಸಿದ್ದಲ್ಲಿ ರಕ್ತ ಭೇದಿ ನಿಲ್ಲುತ್ತದೆ.
೧೨) ಬೇಲದ ಕಾಯಿ ಬೀಜಗಳನ್ನು ಪ್ರತ್ಯೇಕಿಸಿ ತಿರುಳನ್ನು ಜಜ್ಜಿ ಸೇವಿಸುವುದು ಉತ್ತಮ ಪರಿಹಾರವಾಗಿದೆ.
೧೩) ಒಂದು ಬಾಳೆಹಣ್ಣನ್ನು ತಿಂದು, ಒಂದು ಕಪ್ ಹಾಲು ಬೆರೆಸದ ಟೀ ಕಷಾಯವನ್ನು ಕುಡಿಯುವುದು ಆಮಶಂಕೆಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ.
೧೪) ನೇರಳೆಲೆಯ ಕಷಾಯವನ್ನು ತಯಾರಿಸಿ, ದಿನಕ್ಕೆ ೩-೪ ಸ್ಪೂನ್ಗಳಷ್ಟು ಸೇವಿಸಬೇಕು
೧೫) ಸಕ್ಕರೆ ಬದಲು ಅಡುಗೆ ಉಪ್ಪು ಬಳಸಿ ನಿಂಬೆಹಣ್ಣಿನ ಪಾನಕ ಮಾಡಿ ಕುಡಿಯಬೇಕು.