ಹಿಂಸಿಸುವ ಕುರುವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳನ್ನು ತಪ್ಪದೆ ಪಾಲಿಸಿ…

0
4522

ಮಲಭದ್ದತೆ, ವಿರುಧ್ಧಆಹಾರ ಸೇವನೆ, ಅಜೀರ್ಣ, ಅಶುಚಿ, ಅತಿಯಾದ ಸಿಹಿ ಮತ್ತು ಎಣ್ಣೆಯುಕ್ತ ಪದಾರ್ಥಗಳ ಸೇವನೆ, ಸ್ತೂಲಕಾಯ, ಮಧುಮೇಹ ಇನ್ನು ಹತ್ತು ಹಲವಾರು ಕಾರಣಗಳಿಂದ ಚರ್ಮದ ಮೇಲೆ ಕುರುಗಳು ಏಳುತ್ತವೆ. ಮೂಲತಃ ಇದೊಂದು ಬ್ಯಾಕ್ಟೇರಿಯಲ್ ಇನ್ಫೆಕ್ಷನ್ ಆಗಿದ್ದು ಸಣ್ಣ ಗುಳ್ಳೆಯಿಂದ ಕ್ರಮೇಣ ದೊಡ್ಡ ಕೀವು ಉಳ್ಳ, ನೋವಿನಿಂದ ಕೂಡಿದ ದೊಡ್ಡ ಹುಣ್ಣಾಗಿ ಪರಿವರ್ತನೆಗೊಳ್ಳುತ್ತವೆ.

ಕುರುವಾದಾಗ ಅದನ್ನ ಒಡೆಯೋದು ಬಿಟ್ಟು ಕೆಳಕಂಡ ಮನೆಮದ್ದುಗಳನ್ನು ಪಾಲಿಸಿ…

೧) ಹಾಗಲಕಾಯಿ ರಸದಲ್ಲಿ ಜೇನು ಬೆರೆಸಿ ಕುರು ಗುಳ್ಳೆಗಳಿಗೆ ಲೇಪಿಸಿ.
೨) ಏಳೆಂಟು ನಿಂಬೆ ಬೀಜಗಳನ್ನು ಹಾಲಿನಲ್ಲಿ ಹಾಕಿ ಅರೆದು ಬೆಳಗ್ಗೆ ಎಡ್ಡಾ ಕೂಡಲೇ ಒಮ್ಮೆ ಕುಡಿದರೆ ಕುರು ಏಳುವುದು ಕಡಿಮೆಯಾಗುತ್ತದೆ.
೩) ಬಲಿತ ಬಿಲ್ವದ ಬೇರನ್ನು ನಿಂಬೆರಸದಲ್ಲಿ ತೇದು ಲೇಪನ ಮಾಡುವುದರಿಂದ ಕುರು ಬೇಗ ಹಣ್ಣಾಗಿ ಒಡೆಯುತ್ತದೆ.
೪) ಹುರಿಯಾದ ಹಸಿಯ ಇಂಗನ್ನು ನೀರಿನಲ್ಲಿ ತೇದು ದಪ್ಪನಾಗಿ ಹಚ್ಚಬೇಕು.
೫) ಪಪ್ಪಾಯಿಕಾಯಿಯ ಸಿಪ್ಪೆಯನ್ನು ತೆಗೆದು ತಿರುಳನ್ನು ಎರೆಡು ಸೌಟಿನಲ್ಲಿ ಹಾಕಿ ಬಿಸಿ ಮಾಡಿ ಕಟ್ಟಿದರೆ ಕುರು ಬೇಗ ಪಕ್ವವಾಗಿ ಒಡೆಯುತ್ತದೆ.

೬)ಶಂಖವನ್ನು ನಿಂಬೆರಸದಲ್ಲಿ ತೇದು ಹಚ್ಚಬೇಕು.
೭)ನುಗ್ಗೆಯ ಮರದ ಬೇರನ್ನು ಮಜ್ಜಿಗೆಯಲ್ಲಿ ಅರೆದು ಲೇಪಿಸುವುದು.
೮) ಬೆಳ್ಳುಳ್ಳಿಯನ್ನು ಸುಟ್ಟು ಅರಿಶಿನ ಸೇರಿಸಿ, ಅರೆದು ಬೆಣ್ಣೆಯಲ್ಲಿ ಕಲಸಿ ಹಚ್ಚುವುದು.
೯) ನೀರನ್ನು ಒಲೆಯ ಮೇಲಿಟ್ಟು ಅದು ಕುಡಿಯುವಾಗ ಅದಕ್ಕೆ ರಾಗಿ ಹಿಟ್ಟು ಮತ್ತು ಅರಿಶಿನವನ್ನು ಹಾಕಿ ತಿರುವುತ್ತಿದ್ದು ಅದು ಗಟ್ಟಿಯಾದ ಮೇಲೆ ಅದನ್ನು ಬಟ್ಟೆಯ ಮೇಲೆ ಹಾಕಿ ಬಿಸಿಯಿರುವಾಗ ಹರಳೆಣ್ಣೆ ಜೊತೆ ಲೇಪಿಸಬೇಕು.
೧೦) ಸೀತಾಫಲದ ಹಣ್ಣನ್ನು ಹಿಸುಕಿ ಗೊಜ್ಜು ಮಾಡಿ ಕಟ್ಟಿದರೆ ಕುರುಗಳು,ಗಡ್ಡೆಗಳು ಮಾಯುತ್ತವೆ.

೧೧) ಸೀತಾಫಲದ ಎಳೆಯ ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ ಅರೆದು ಕಟ್ಟಿದರೆ ಕುರು ಗಡ್ಡೆಗಳು ಬೇಗ ಪಕ್ವವಾಗುತ್ತವೆ.
೧೨) ಟಮೋಟ ಹಣ್ಣನ್ನು ಉಗಿಯಲ್ಲಿ ಬೇಯಿಸಿ, ಹಿಸುಕಿ ಸ್ವಲ್ಪ ಬಿಸಿ ಇರುವಾಗಲೇ ಕಟ್ಟುವುದರಿಂದ ಕುರು ಮಾಯವಾಗುತ್ತದೆ.
೧೩) ಅರಿಶಿನದ ಕೊಂಬನ್ನು ಸುಟ್ಟು ಭಸ್ಮ ಮಾಡಿ,ಅದರ ಜೊತೆಗೆ ಸ್ವಲ್ಪ ಸುಣ್ಣವನ್ನು ಬೆರೆಸಿ ಹಚ್ಚುವುದರಿಂದ ಕುರು ಬೇಗ ವಾಸಿಯಾಗುತ್ತದೆ.
೧೪) ಉದ್ದನ್ನು ನೀರಿನಲ್ಲಿ ಅರೆದು ಸುತ್ತಲೂ ಲೇಪ ಹಾಕುವುದರಿಂದ ಬೇಗ ಒಡೆಯುತ್ತವೆ.