ಸೀಸನ್ ಚೇಂಜ್ ಆಗೋ ಪುರುಸೊತ್ತಿಲ್ಲ ಬರೋ ಕೆಮ್ಮಿಗೆ ಮಾತ್ರೆ ಸಿರಪ್ ತೆಗೊಳೋ ಮೊದ್ಲು ಈ ಮನೆಮದ್ದು ಪಾಲೀಸ್ರಿ ಕೆಮ್ಮಿನಿಂದ ಮುಕ್ತಿ ಹೊಂದಿ…

0
1280

ಕೆಮ್ಮಿನಲ್ಲಿ ಎರಡು ವಿಧ. ಒಂದು ಹಸಿ ಕೆಮ್ಮು ಮತ್ತೊಂದು ಒಣ ಕೆಮ್ಮು. ಹೆಚ್ಚು ಶೀತ ಪದಾರ್ಥ ಸೇವನೆ, ಧೂಳು, ಮಂಜಿನಲ್ಲಿ ಅಲೆಯುವುದು, ನೀರು ಮತ್ತು ಗಾಳಿಯಲ್ಲಿ ವ್ಯತ್ಯಾಸ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಅತಿಶಯವಾಗಿ ಸೇವಿಸುವುದೇ ಕೆಮ್ಮಿಗೆ ಕಾರಣಗಳಾಗಿವೆ. ಹಸಿ ಕೆಮ್ಮು ಬರುವಾಗ ಉಸಿರಾಟದ ತೊಂದರೆ, ಗಂಟಲು ಕೆರೆತ ಮತ್ತು ಗುರು ಗುರು ಶಬ್ದ, ಕಫ ಕಟ್ಟುವುದು,ಜಿಗುಟಾದ ಕಫದಿಂದ ಕೂಡಿದ ಕೆಮ್ಮು, ಪಕ್ಕೆಗಳಲ್ಲಿ ನೋವು ಉಂಟಾಗುವುದು.

ಹಸಿ ಕೆಮ್ಮಿಗೆ:

-ಅಳಲೆಕಾಯಿ ಸಿಪ್ಪೆಯ ಕಾಲು ಭಾಗವನ್ನು ಜೇನುತುಪ್ಪದಲ್ಲಿ ತೇದು ಬೆಳಿಗ್ಗೆ ಮತ್ತು ರಾತ್ರಿ ಕುಡಿಯಬೇಕು.
-ಕುಪ್ಪಿಗಿಡದ ೨೦ ಎಲೆಗಳಿಂದ ತಾಜಾ ರಸ ತೆಗೆದು ದಿನಕ್ಕೆ ೩ ಬಾರಿ ಸೇವಿಸಬೇಕು.
-ಹದಿನೈದರಿಂದ ಇಪ್ಪತ್ತು ಕಾಳು ಮೆಣಸನ್ನು ಒಂದು ಲೋಟ ನೀರಿನಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಸೇರಿಸಿ ಅರ್ಧದಷ್ಟು ಆಗುವವರೆಗೂ
ಕುದಿಸಿ ಕಷಾಯ ಮಾಡಿ, ನಾಲ್ಕು ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯಬೇಕು.

-ಒಂದು ಹಿಡಿ ತುಳಸಿ ಎಲೆ ಒಂದು ಹಿಡಿ ಆಡುಸೋಗೆ ಎಲೆ , ಒಂದು ಚಮಚ ಒಣ ಶುಂಠಿ ಪುಡಿಗೆ ರುಚಿಗನುಸಾರವಾಗಿ ಬೆಲ್ಲ ಸೇರಿಸಿ ಎರಡು ಲೋಟ ನೀರಿನಲ್ಲಿ ಹಾಕಿ ೧ ಲೋಟ ಆಗುವವರೆಗೂ ಕುದಿಸಿ ಕಷಾಯ ಮಾಡಿ. ಪ್ರತಿಸಲ ಅರ್ಧ ಲೋಟದಂತೆ ದಿನಕ್ಕೆ ೪ ಬಾರಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
-೧ ಚಮಚ ಹಸಿ ಈರುಳ್ಳಿಯ ರಸಕ್ಕೆ ಒಂದು ಚಮಚ ಬೆಲ್ಲ ಸೇರಿಸಿ ಸೇವಿಸುವುದರಿಂದಲೂ ಕೆಮ್ಮು ನಿಲ್ಲುವುದು.
-ನಾಲ್ಕೈದು ಲವಂಗವನ್ನು ಸುಮಾರಾಗಿ ಹುರಿದು ಒಂದು ಚೂರು ಬೆಲ್ಲದೊಂದಿಗೆ ತಿಂದರೂ ಕೆಮ್ಮು ನಿಲ್ಲುವುದು.

ಒಣ ಕೆಮ್ಮಿಗೆ:

ಒಣ ಕೆಮ್ಮಿನಲ್ಲಿ ಆಯಾಸಪೂರ್ವಕವಾಗಿ ಕೆಮ್ಮಿದರೂ ಕಫ ಬರುವುದಿಲ್ಲ. ಇದು ಕಂಠನಾಳದ ಮೇಲೆ ಈವ್ರಾ ಭಾದೆಯನ್ನುಂಟು ಮಾಡುವುದು.

-ಜೇಷ್ಠಮಧುವನ್ನು ಅರ್ಧ ಚಮಚದಷ್ಟು ನುಣ್ಣಗೆ ಅರೆದು ಪುಡಿ ಮಾಡಿ ನಿಂಬೆ ರಸದಲ್ಲಿ ಕಲಸಿರಿ ಅದಕ್ಕೆ ೧ ಚಮಚ ಜೇನುತುಪ್ಪ ಸೇರಿಸಿ ಪ್ರತಿದಿನ ೩ ಬಾರಿ ಸೇವಿಸಬೇಕು.
-ಅಳಲೆಕಾಯಿ,ದ್ರಾಕ್ಷಿ,ಹಿಪ್ಪಲಿ, ಇವುಗಳನ್ನು ಸಮತೂಕ ಅರೆದು ಕಡಲೆಕಾಳಿನ ಗಾತ್ರದ ಮಾತ್ರೆ ಮಾಡಿ ಆಗಾಗ ಒಂದೊಂದು ಮಾತ್ರೆಯನ್ನು ಬಾಯಲ್ಲಿ ಇಟ್ಟುಕೊಳ್ಳುವುದು.ಹೀಗೆ ೩ ರಿಂದ ೪ ದಿನ ಮಾಡಬೇಕು.
-ಜೀರಿಗೆಯನ್ನು ಹುರಿದು ಪುಡಿ ಮಾಡಿ ಒಂದು ಚಮಚ ಅರ್ಧ ಚಮಚ ತುಪ್ಪದಲ್ಲಿ ಸೇರಿಸಿ ನೆಕ್ಕಬೇಕು.
-ಬಾಳೆಹಣ್ಣಿನಲ್ಲಿ ಕಾಳು ಮೆಣಸಿನ ಕೆಲವು ಕಾಳುಗಳನಿಟ್ಟು ಜಗಿದು ತಿನ್ನಬೇಕು.ಈ ರೀತಿ ಪ್ರತಿದಿನ ಬೆಳಿಗ್ಗೆ ೨೧ ದಿನಗಳ ಕಾಲ ಸೇವಿಸಬೇಕು.