ಸಾಮಾನ್ಯವಾಗಿ ಕಾಡುವ ಅದೆಷ್ಟೋ ಖಾಯಿಲೆಗಳಿಗೆ ಮನೆಯಲ್ಲಿಯೇ ಇದೆ ನೋಡಿ ರಾಮಬಾಣದಂತಹ ಔಷಧಿಗಳು..

0
1424

Kannada News | Health tips in kannada

ಸಾಮಾನ್ಯವಾಗಿ ಸಣ್ಣ ಪುಟ್ಟ ಖಾಯಿಲೆಗಳಿಗೂ ಆಸ್ಪತ್ರೆಗೆ ಓಡುವ ಕಾಲವಿದು.. ಆದರೇ ಎಷ್ಟೋ ಜನರಿಗೆ ತಿಳಿದಿಲ್ಲ ಮನೆಯಲ್ಲೇ ಅನೇಕ ರೋಗಗಳಿಗೆ ರಾಮಬಾಣದಂತಹ ನೈಸರ್ಗಿಕ ಔಷಧಿಗಳಿವೆ ಎಂದು.. ಒಮ್ಮೆ ಅಡುಗೆ ಮನೆಯ ಕಡೆ ಹೋಗಿ ನೋಡಿ..

ಕರಿಬೇವಿನ ಸೊಪ್ಪು

ಇದೊಂದು ಅಮೃತವೆಂದೇ ಹೇಳಬಹುದು.. ಇದನ್ನು ಪ್ರತಿದಿನ ಸೇವಿಸುತ್ತಾ ಬಂದರೇ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದಿಲ್ಲ.. ಜೊತೆಗೆ ಅಕಾಲಿಕ ಮುಪ್ಪು ಕೂಡ ಹತ್ತಿರ ಸುಳಿಯುವುದಿಲ್ಲ.. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಂದೆರೆಡು ಎಲೆ ಕರಿಬೇವನ್ನು ತಿಂದರೆ ಅಧಿಕ ರಕ್ತದ ಒತ್ತಡದ ಸಮಸ್ಯೆಯೂ ಕೂಡ ಕಡಿಮೆಯಾಗುವುದು..

ಬೆಳ್ಳುಳ್ಳಿ

ಇದು ಅಜೀರ್ಣತೆಗೆ ರಾಮಬಾಣವಿದ್ದಂತೆ.. ಅಜೀರ್ಣದ ಸಮಸ್ಯೆ ಇದ್ದರೆ ಹಾಲಿಗೆ ಒಂದೆರೆಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಕುದಿಸಿ ಕುಡಿಯಿರಿ..

ಬೆಳ್ಳುಳ್ಳಿಯನ್ನು ಜಜ್ಜಿ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅಸ್ತಮಾ ಕೂಡ ದೂರವಾಗುವುದು

watch:

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪನ್ನು ಅರೆದು ಜ್ಯೂಸ್ ಮಾಡಿ ಕುಡಿದರೆ ರಾತ್ರಿಯ ಹೊತ್ತು ನೆಮ್ಮದಿಯಿಂದ ನಿದ್ರಿಸಬಹುದು..

ಬಾಳೆ ಹಣ್ಣು

ಕಿಡ್ನಿ ಸಮಸ್ಯೆ ಬರಬಾರದು ಎನ್ನುವವರು ದಿನಕ್ಕೊಂದು ಬಾಳೆಯ ಹಣ್ಣನ್ನು ತಪ್ಪದೇ ತಿನ್ನಿ.. ಇದು ಕಿಡ್ನಿಯಲ್ಲಿನ ಕಲ್ಮಶವನ್ನು ಹೊರ ಹಾಕುತ್ತದೆ.. ಅಜೀರ್ಣದ ಸಮಸ್ಯೆಯೂ ಕೂಡ ದೂರವಾಗುತ್ತದೆ.. ದೇಹದ ತೂಕವನ್ನು ಹೆಚ್ಚಿಸುತ್ತದೆ.. ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ..

ಪುದಿನಾ ಸೊಪ್ಪು

ಅಜೀರ್ಣ ಕ್ರಿಯೆಗೆ ಪುದಿನಾ ಸೊಪ್ಪು ಅತ್ಯಂತ ಒಳ್ಳೆಯದು.. ದಿನಾ ನಿಮ್ಮ ಅಡುಗೆಯಲ್ಲಿ ಸ್ವಲ್ಪ ಪುದಿನ ಸೊಪ್ಪನ್ನು ಬಳಸಿ.. ಆರೋಗ್ಯದಿಂದಿರಿ..

ಶುಂಠಿ

ಇದೊಂತರ ಅಡುಗೆ ಮನೆಯ ವೈದ್ಯನೆಂದೇ ಹೇಳಬಹುದು.. ಶುಂಠಿ ಅನೇಕ ರೋಗಗಳಿಗೆ ರಾಮಬಾಣ.. ಅದರಲ್ಲೂ ಶೀತ ಕೆಮ್ಮು ಗಂಟಲು ನೋವು ಇದ್ದರೆ ಶುಂಠಿಯನ್ನು ತುಳಸಿ ರಸ ಹಾಗೂ ಜೇನುತುಪ್ಪದೊಂದಿಗೆ ಸೇವಿಸಿ..‌ ಅಸಿಡಿಟಿ ಸಮಸ್ಯೆ ಇದ್ದರೆ ಶುಂಠಿಯನ್ನು ನಿಂಬೆ ಹಣ್ಣಿನ ಜ್ಯೂಸ್ ಜೊತೆ ಶುಂಠಿಯನ್ನು ಸೇರಿಸಿ ಕುಡಿಯಿರಿ..

ಮೆಂತ್ಯೆ ನೀರು..

ರಾತ್ರಿ ಹೊತ್ತು ಮೆಂತ್ಯೆಯನ್ನು ನೆನೆಸಿ ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ರಕ್ತಹೀನತೆ ದೂರವಾಗಿತ್ತದೆ..

ಬೀಟ್ ರೂಟ್

ದೇಹದಲ್ಲಿ ರಕ್ತಹೀನತೆಯನ್ನು ಕಡಿಮೆಗೊಳಿಸಲು ಇದೂ ಕೂಡ ತುಂಬಾ ಸಹಾಯಕಾರಿ.. ತಪ್ಪದೇ ವಾರದಲ್ಲೆರೆಡು ದಿನವಾದರೂ ಬೀಟ್ ರೂಟ್ ನಿಮ್ಮ ಮನೆಯ ಅಡುಗೆಯಲ್ಲಿರಲಿ..

Also Read: ಕುಂಬಳಕಾಯಿ ಬೀಜದ ಅರೋಗ್ಯ ಗುಣಗಳ ಬಗ್ಗೆ ತಿಳಿದುಕೊಂಡ ಮೇಲೆ, ನೀವು ಎಂದಿಗೂ ಕುಂಬಳಕಾಯಿ ಬೀಜಗಳನ್ನು ಬಿಸಾಡೋದೇ ಇಲ್ಲ!