ಪದೇ ಪದೇ ಮಕ್ಕಳು ಹೊಟ್ಟೆನೋವು ಅಂತ ಕಂಪ್ಲೇಂಟ್ ಮಾಡ್ತಿದ್ರೆ ನಿರ್ಲಕ್ಷ್ಯ ವಹಿಸ್ಬೇಡಿ..ಯಾಕೆ ಅಂತ ಈ ಆರ್ಟಿಕಲ್ ಓದಿದ್ಮೇಲೆ ನಿಮಗೆ ಗೊತ್ತಾಗುತ್ತೆ.

0
2141

ಮಕ್ಕಳಲ್ಲಿ ಹೊಟ್ಟೆನೋವು ಎಂಬುದು ಸಾಮಾನ್ಯ ಖಾಯಿಲೆ.ಹಲವಾರು ಕಾರಣಗಳಿಂದ ಕಾಡುವ ಹೊಟ್ಟೆನೋವು ನಿಮ್ಮ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಳಿಗೆ ಮಾರಕವಾಗಬಹುದು.
ಕೆಲವು ಮಕ್ಕಳಲ್ಲಿ ಹೊಟ್ಟೆನೋವಿಗೆ ಮಾನಸಿಕ ಹಿನ್ನಲೆ ಇರಬಹುದು. ತಂದೆ ತಾಯಿಯರ ನಿರ್ಲಕ್ಷ್ಯ ಮನೋಭಾವ, ಶಾಲೆ-ಮನೆಗಳಲ್ಲಿ ಭಯ ಹಾಗು ದುಗುಡದ ವಾತಾವರಣ, ಒತ್ತಾಯಪೂರ್ವಕವ್ವಾಗಿ ತಿನ್ನುಸುವುದು ಇತ್ಯಾದಿ ಮಕ್ಕಳಲ್ಲಿ ಹೊಟ್ಟೆನೋವಿನ ಮೂಲಕ ಪ್ರಕಟಗೊಳ್ಳಬಹುದು. ಇಂತಹ ಹೊಟ್ಟೆನೋವಿಗೆ ಪಾಲಕರು ಮಗುವಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸಂಯಮ ಹಾಗು ಪ್ರೀತಿಯಿಂದ ಮಗುವಿನೊಡನೆ ನಡೆದುಕೊಂಡಲ್ಲಿ ಈ ಹೊಟ್ಟೆನೋವು ಬೇಗನೆ ವಾಸಿಯಾಗಬಹುದು.

ಹೊಟ್ಟೆನೋವು ಬರಲು ಇತರ ಕಾರಣಗಳು:

  • ಹೊಟ್ಟೆಯಲ್ಲಿ ಜಂತು ಹುಳಗಳಾಗಿದ್ದಾಗಲೂ ಹೊಟ್ಟೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಜಂತುಹುಳುವಿನ ಔಷಧ ನೀಡಿ ೬ ತಿಂಗಳುಗಳಿಗಿಂತ ಹೆಚ್ಚಾಗಿದ್ದಲ್ಲಿ ವೈದ್ಯರ ಸಲಹೆ ಪಡೆದು ಔಷದಿ ನೀಡುವುದು ಉತ್ತಮ.
  • ವಾಂತಿ, ಭೇದಿ ಆಮಶಂಕೆಗಳಿದ್ದಾಗ ಹೊಟ್ಟೆನೋವು ಸಹಜವಾಗಿ ಕಂಡುಬರುತ್ತದೆ.
  • ಬಲಭಾಗದ ಮೇಲ್ಭಾಗದಲ್ಲಿ ಹೊಟ್ಟೆನೋವು ಕಂಡು ಬಂದು, ಹಸಿವು ಒಮ್ಮೆಲೇ ಕಡಿಮೆಯಾಗಿ, ಮಗುವಿಗೆ ವಾಂತಿಯಾಗಿ ಮೂತ್ರವು ದಟ್ಟ ಹಳದಿ ಬಣ್ಣದಲ್ಲಿದ್ದಲ್ಲಿ ಕಾಮಾಲೆಯ ರೋಗ ಲಕ್ಷಣವಾಗಿರಬಹುದು.

  • ಹೊಟ್ಟೆನೋವು ಕೆಲ ನಿಮಿಷಗಳ ಕಾಲ ಮಾತ್ರವಿದ್ದು ಮಗುವಿನ ಆಟ, ಪಾಠ, ಚಟುವಟಿಕೆ, ಬೆಳವಣಿಗೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೆ ಅಂತಹ ಹೊಟ್ಟೆನೋವನ್ನು ನಿರ್ಲಕ್ಷಿಸಬಹುದು.
  • ಹೊಟ್ಟೆನೋವಿಗೆ ಈಗಾಗಲೇ ತಿಳಿಸಿದಂತೆ ಯಾವುದೇ ಮಾನಸಿಕ ಕಾರಣಗಳಿದ್ದಲ್ಲಿ ಪಾಲಕರು ಇದರತ್ತ ಸೂಕ್ತ ಹಾಗು ತೀವ್ರ ಗಮನ ನೀಡಬೇಕು.
  • ಹೊಟ್ಟೆನೋವಿನ ಜೊತೆಗೆ ಮಗುವಿಗೆ ವಾಂತಿಯಾಗುತ್ತಿದ್ದರೆ, ಮಗು ಸುಮಾರು ಸಮಯದಿಂದ ಮಲವಿಸರ್ಜನೆ ಮಾಡದಿದ್ದರೆ, ಹೊಟ್ಟೆ ಊದಿಕೊಂಡಿದ್ದರೆ, ಬಿಳುಚಿಕೊಂಡಂತೆ ಕಂಡುಬಂದರೆ ಮಗುವನ್ನು ತ್ವರಿತ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.

 • ಒಮ್ಮೆಲೇ ತೀವ್ರ ಹೊಟ್ಟೆನೋವು ಬಲಭಾಗದ ಕೆಳಹೊಟ್ಟೆಯಲ್ಲಿ ಕಂಡುಬಂದು ವಾಂತಿಹಾಗು ಜ್ವರವಿದ್ದರೆ ಅಪೆಂಡಿಸೈಟಿಸ್ ಆಗಿರಬಹುದು.
 • ಮಗುವಿಗೆ ವಾಂತಿ ಭೇದಿಯೊಂದಿಗೆ ಹೊಟ್ಟೆನೋವು ಕಾಣಿಸಿಕೊಂಡಲ್ಲಿ ಕರುಳಿನ ಸೋಂಕು ಉಂಟಾಗಿರಬಹುದು.

ಇದರಿಂದ ಮಕ್ಕಳು ಹೊಟ್ಟೆನೋವು ಎಂದಾಗ ಅಲಕ್ಷ್ಯ ತೋರದೆ ಅವರ ಮೇಲೆ ನಿಗಾ ವಹಿಸಿ. ತ್ವರಿತ ಪ್ರಥಮ ಚಿಕಿತ್ಸೆಗಳಿಂದ ಹೊಟ್ಟೆನೋವು ಉಲ್ಬಣಿಸದಂತೆ ಮಾರಕವಾಗದಂತೆ ತಡೆಗಟ್ಟಬಹುದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840