ಒಬ್ಬ ಭಾರತೀಯ, ಪಾಶ್ಚಾತ್ಯ ವಿಜ್ಞಾನಿಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಅಂತ ತೋರಿಸಿದ ವಿಜ್ಞಾನಿ ಎಸ್. ಚಂದ್ರಶೇಖರ್. ಪ್ರತಿಯೊಬ್ಬ ಭಾರತೀಯನೂ ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕು!!

0
563

ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ್ ಭಾರತೀಯ ಮೂಲದ ಅಮೆರಿಕ ದೇಶದ ನೊಬೆಲ್ ಪುರಸ್ಕೃತ ಭೌತವಿಜ್ಞಾನಿ. ಅಮೆರಿಕಾದ ವಿಲ್ಲಿಫೌಲರ್‍ರೊಂದಿಗೆ ನೊಬೆಲ್ ಪ್ರಶಸ್ತಿ ಹಂಚಿಕೊಂಡರು. ವಿಶ್ವದ ಶ್ರೇಷ್ಠ ವಿಜ್ಞಾನ ಬರಹಗಾರರಲ್ಲಿ ಒಬ್ಬರಾದ ಆರ್ಥರ್ ಮಿಲ್ಲರ್, ಚಂದ್ರಶೇಖರ್ ಅವರನ್ನು ಖಭೌತ ವಿಜ್ಞಾನಿ, ನಕ್ಷತ್ರಲೋಕದ ಅನಭಿಷಕ್ತ ಚಕ್ರವರ್ತಿಯೆಂದು ಕರೆದಿದ್ದಾರೆ.

ಅಕ್ಟೋಬರ್ 19, 1910ರಂದು ಲಾಹೋರಿನಲ್ಲಿ ಜನಿಸಿದರು. ತಂದೆ ಸುಬ್ರಹ್ಮಣ್ಯಂ ಅಯ್ಯರ್ ವಾಯುವ್ಯ ರೈಲ್ವೆಯಲ್ಲಿ ಸಹಾಯಕ ಆಡಿಟರ್ ಜನರಲ್ ಆಗಿದ್ದವರು. ಅವರು ಚೆನ್ನೈಗೆ ವರ್ಗವಾಗಿ ಬಂದಾಗ ಟ್ರಿಪ್ಲಿಕೇನ್‍ನಲ್ಲಿ ಹಿಂದೂ ಹೈಸ್ಕೂಲ್ ಸೇರಿದರು. ಗಣಿತದಲ್ಲಿ ಅಪಾರ ಪ್ರತಿಭೆ, ಅದ್ಭುತ ನೆನಪಿನ ಶಕ್ತಿ ಹೊಂದಿದ್ದರು. ಜೊತೆಗೆ ವಿಜ್ಞಾನದಲ್ಲೂ ತೀವ್ರ ಆಸಕ್ತಿಯಿತ್ತು. 1929ರಲ್ಲಿ ಪ್ರೆಸಿಡೆನ್ಸಿ ಕಾಲೇಜಿಯಲ್ಲಿ ಭೌತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಓದಿದರು. ಆಗಿನ ಕಾಲದ ಇಂಗ್ಲೀಷ್ ಸಾಹಿತ್ಯದ ಪ್ರಮುಖರ ಸಾಹಿತ್ಯವನ್ನು ಚೆನ್ನಾಗಿ ಅರಗಿಸಿಕೊಂಡಿದ್ದ ಚಂದ್ರಶೇಖರ್ ಅವರು ತಮ್ಮ ವೈಜ್ಞಾನಿಕ ಬರಹದಲ್ಲೂ ಸಾಹಿತ್ಯದ ಸೊಗಡನ್ನು ತುಂಬಿಡುತ್ತಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ವೈಜ್ಞಾನಿಕ ವಿಷಯಗಳ ಮೇಲೆ ಪ್ರಬಂಧ ಬರೆದಿದ್ದರು.

1930ರ ಮೇ ನಲ್ಲಿ ಇಂಗ್ಲೆಂಡಿನಲ್ಲಿ ಸಂಶೋಧನೆ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಲಂಡನ್‍ನ ರಾಯಲ್ ಅಸ್ಟ್ರಾನಾಮಿಕಲ್ ಸೊಸೈಟಿಯ ಸಭೆಗಳಲ್ಲಿ ಭಾಗವಹಿಸಿ ತಮ್ಮ ಪ್ರಬಂಧಗಳನ್ನು ಓದಿದರು. 1921ರ ಜುಲೈನಲ್ಲಿ ಜರ್ಮನಿಗೆ ತೆರಳಿ ವರ್ಗನಿಯಮ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ನಕ್ಷತ್ರಗಳ ಕುರಿತು ಅಧ್ಯಯನ ಮಾಡಿದರು. 1929ರ ಜನವರಿಯಲ್ಲಿ `ಮಾದರಿ ದ್ಯುತಿಗೋಳ’ಗಳ ಬಗ್ಗೆ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯಲ್ಲಿ ವಿಶಿಷ್ಟ ಪ್ರಬಂದ ಮಂಡಿಸಿ ಎಡಿಂಗ್‍ಟನ್ ಮತ್ತು ಮಿಲ್ಸ್‍ರ ಮೆಚ್ಚುಗೆಗೆ ಪಾತ್ರರಾದರು. ಬೆಲ್ಜಿಯಂನ ಲೀಡ್ ವಿಶ್ವವಿದ್ಯಾಲಯದಲ್ಲಿ ಖಭೌತಶಾಸ್ತ್ರದ ಬಗ್ಗೆ ಮಂಡಿಸಿದ ಸರಣಿ ಉಪನ್ಯಾಸಗಳು ಮುಂದೆ ಪುಸ್ತಕರೂಪದಲ್ಲಿ ಪ್ರಕಟವಾದವು.

1928ರಲ್ಲಿ ಶ್ವೇತ ಕುಬ್ಜಗಳು(ವೈಟ್ ಡ್ವಾರ್ಫ್) ಹಾಗೂ ಮಿತಿಯುಳ್ಳು ರಾಶಿ ಕುರಿತು ರಷ್ಯಾದ ಪುಲ್ಕೋವೊ ಗ್ರಹವೀಕ್ಷಣಾಲಯದಲ್ಲಿ ಉಪನ್ಯಾಸ ನೀಡಿದರು. ಶ್ವೇತ ಕುಬ್ಜಗಳ ಬಗ್ಗೆ ಅವರು ನಡೆಸಿದ ಸಂಶೋಧನೆ 1944ರ ನಂತರ ಅವರಿಗೆ ಮನ್ನಣೆ ತಂದುಕೊಟ್ಟಿತು.

ನಕ್ಷತ್ರಗಳಲ್ಲಿರುವ ಜಲಜನಕವು ವ್ಯಯವಾಗುತ್ತಾ ಹೋದಂತೆ, ಅವುಗಳ ಸ್ಥಾನದಲ್ಲಿ 1:4 ರ ಅನುಪಾತದಲ್ಲಿ ಹೀಲಿಯಮ್ ರೂಪುಗೊಂಡು, ನಕ್ಷತ್ರವು ಸಂಕುಚಿತವಾಗುತ್ತಾ ಹೋಗುತ್ತದೆ. ಹೀಗಾಗಿ ದ್ರವ್ಯರಾಶಿ ಸ್ಥಿರವಾಗಿ, ಸಾಂದ್ರತೆ ಹೆಚ್ಚಿ, ನಕ್ಷತ್ರದೊಳಗೆ ಒತ್ತಡವು ಅಧಿಕವಾಗುತ್ತದೆ. ಇದರ ಫಲವಾಗಿ ಪರಮಾಣು ವ್ಯವಸ್ಥೆ ಬಲಹೀನವಾಗಿ, ಎಲೆಕ್ಟ್ರಾನ್ ಹಾಗೂ ನ್ಯೂಕ್ಲಿಯಸ್ ಪ್ರತ್ಯೇಕಗೊಳ್ಳುತ್ತವೆ. ಈ ಪ್ರಕ್ರಿಯೆ ಮುಂದುವರೆದಂತೆ ಶ್ವೇತಕುಬ್ಜಗಳು ರೂಪುಗೊಳ್ಳುತ್ತವೆ. ನಕ್ಷತ್ರಗಳ ಭಾರ ಹೆಚ್ಚಿದರೂ, ಅವುಗಳೊಳಗಿನ ದ್ರವ್ಯರಾಶಿ ಒಂದು ಪರಿಮಿತಿಯಲ್ಲಿರುತ್ತವೆ. ಅಂಥ ನಕ್ಷತ್ರ ಸೂರ್ಯನ 1.44 ರಷ್ಟಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲವೆಂದು ಚಂದ್ರಶೇಖರ್ ಪ್ರತಿಪಾದಿಸಿದರು. ಅಲ್ಲದೆ ಯಾವುದೇ ನಕ್ಷತ್ರದ ದ್ರವ್ಯರಾಶಿ ಈ ಮಿತಿಗಿಂತ ಹೆಚ್ಚಾಗಿದ್ದರೆ, ಅದು ಸ್ಫೋಟಗೊಂಡು ಸ್ವಲ್ಪಾಂಶ ವಸ್ತುವನ್ನು ವಿಸರ್ಜಿಸಿ, ಶ್ವೇತಕುಬ್ಜವಾಗುತ್ತದೆ ಯಾವುದೇ ಶ್ವೇತಕುಬ್ಜದ ದ್ರವ್ಯರಾಶಿ 1.44 ರ ಮಿತಿಗಿಂತ ಹೆಚ್ಚಾಗಿರುವುದಿಲ್ಲ. ಈ ಮಿತಿಯನ್ನು “ಚಂದ್ರಶೇಖರ್ ಮಿತಿ” ಎನ್ನುವರು. ಚಂದ್ರಶೇಖರ್ ಈ ಮಿತಿಯನ್ನು ಗಣಿತದ ಲೆಕ್ಕಾಚಾರಗಳಿಂದಲೇ ಕಂಡುಹಿಡಿದರು.

ಅಮೆರಿಕಾ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್‍ನ ಯೆಕ್ರ್ಸ್ ಬಾಹ್ಯಾಕಾಶ ನಿರೀಕ್ಷಣಾಲಯದಲ್ಲಿ ಸಂಶೋಧನಾ ಸಂಯೋಜನಕರಾಗಿ ಸುಮಾರು 27 ವರ್ಷಗಳ ಕಾಲ ಕೆಲಸ ಮಾಡಿದರು. ಉಪಧ್ಯಾಯ ವೃತ್ತಿಯೊಂದಿಗೆ ಸಂಶೋಧನೆಯೂ ನಡೆಯಿತು. ನಕ್ಷತ್ರಗಲ ಚಲನಶಾಸ್ತ್ರ, ಚಲನಘರ್ಷಣೆ ಬಗ್ಗೆ ಸಂಶೋಧನೆ ನಡೆಸಿದರು. 1952-71ರವರೆಗೆ ಆಸ್ಟ್ರೋ ಫಿಸಿಕಲ್ ಜರ್ನಲ್‍ನ ವ್ಯವಸ್ಥಾಪಕ ಸಂಪಾದಕರಾಗಿದ್ದರು. 1995ರ ಆಗಸ್ಟ್ 20ರಂದು ನಿಧನ ಹೊಂದಿದರು.