ಅನಗತ್ಯ ಕೂದಲು ನಿವಾರಣೆಗೆ ಈ 4 ಟಿಪ್ಸ್ ಗಳ ಬಗ್ಗೆ ತಿಳಿದರೆ ನೀವು ಖಂಡಿತ ಇದನ್ನು ಪಾಲಿಸ್ತೀರ…!

0
3059

Kannada News | Health tips in kannada

ಮುಖದ ಮೇಲಿನ ಅನಗತ್ಯ ಕೂದಲು ಮಹಿಳೆಯರಿಗೆ ಪದೇ ಪದೇ ಕಿರಿಕಿರಿ ಉಂಟು ಮಾಡುತ್ತದೆ. ಸೌಂದರ್ಯಕ್ಕೆ ಅಡ್ಡಿಯಾಗುವ ಈ ಕೂದಲುಗಳನ್ನು ಹೋಗಲಾಡಿಸಲು ಹಲವು ವಿಧಾನಗಳನ್ನು ಬಳಸಿಕೊಳ್ಳಬಹುದು. ಅದರಲ್ಲಿ ವ್ಯಾಕ್ಸಿಂಗ್ ಇದು ಕೂದಲ ನಿವಾರಣೆಗೆ ಇರುವ ಸುಲಭ ಮತ್ತು ಸೇಫ್ ವಿಧಾನ. ಹೀಗೆ ಅನಗತ್ಯ ಕೂದಲುಗಳ ನಿವಾರಣೆಗೆ ಹಲವು ವಿಧಾನಗಳಿದ್ದರೂ ಇವುಗಳು ತಾತ್ಕಲಿಕ ಪರಿಹಾರ ಮಾತ್ರ. ಮುಖದಲ್ಲಿನ ಬೇಡವಾದ ಕೂದಲುಗಳನ್ನು ಹೋಗಲಾಡಿಸಲು ಹಲವು ವಿಧಾನಗಳನ್ನು ಬಳಸಿಕೊಳ್ಳಬಹುದು.

ಸಾಮಾನ್ಯವಾಗಿ ಹೆಚ್ಚಾಗಿ ಮಹಿಳೆಯರು ಅನಗತ್ಯ ಕೂದಲುಗಳನ್ನು ತೆಗೆಯಲು ವ್ಯಾಕ್ಸಿಂಗ್ ಕ್ರೀಮ್ ಬಳಸುತ್ತಾರೆ. ಹೀಗೆ ವ್ಯಾಕ್ಸಿಂಗ್ ಕ್ರೀಮ್ ಬಳಸುವುದರಿಂದ ಚರ್ಮದಲ್ಲಿ ಗುಳ್ಳೆ ಅಥವಾ ತುರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದೆಂದು ಕೆಲವರು ವ್ಯಾಕ್ಸಿಗ್ ಮಾಡಿಸಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಕೆಲವು ನೈಸರ್ಗಿಕ ವಸ್ತುಗನ್ನು ಬಳಸಿ ತಯಾರಿಸಿದ ವ್ಯಾಕ್ಸ್ ಬಳಸಿದರೆ ಚರ್ಮದ ಸಮಸ್ಯೆ ಉಂಟಾಗುವುದಿಲ್ಲ, ಅದರಲ್ಲೂ ಮನೆಯಲ್ಲಿಯೇ ತಯಾರಿಸಿದ ಸಕ್ಕರೆಯ ಸ್ಕ್ರಬ್ಬರ್‌ನ್ನು ಬಳಸಿಕೊಂಡು ಮುಖದಲ್ಲಿನ ಬೇಡವಾದ ಕೂದಲುಗಳನ್ನು ತೆಗೆದು ಹಾಕಬಹುದು.

1. ಸಕ್ಕರೆ ಮತ್ತು ನಿಂಬೆರಸ

ದಪ್ಪ ತಳದ ಪಾತ್ರೆಯಲ್ಲಿ ಸಕ್ಕರೆ ಮತ್ತು ನಿಂಬೆರಸ ಬೆರೆಸಿ, ಸಣ್ಣ ಉರಿಯಲ್ಲಿ ಇಟ್ಟು ಕೈಯಾಡಿಸುತ್ತಿರಿ. ಸಕ್ಕರೆ ಕರಗಿದಾಗ, ಮಿಕ್ಸ್ ಬೆಳ್ಳಗಿರುತ್ತದೆ. ಈ ನೊರೆಯ ಮಿಶ್ರಣ ಕಂದು ಬಣ್ಣಕ್ಕೆ ತಿರುಗಿದಾಗ ಒಂದೆರಡು ಹನಿ ತೆಗೆದು ನೀರಿಗೆ ಹಾಕಿ, ಅದು ಹರಡದೆ ಉಂಡೆ ಯಂತೆ ಮುಳುಗಿದರೆ ವ್ಯಾಕ್ಸ್ ತಯಾರಿದೆ ಎಂದು ಅರ್ಥ. ಈ ರೀತಿ ಮನೆಯಲ್ಲಿ ತಯಾರಿಸಿದ ವ್ಯಾಕ್ಸ್ ಒಂದು ವರ್ಷದ ತನಕ ಕೆಡುವುದಿಲ್ಲ. ಉಪಯೋಗಿಸುವಾಗ ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಉಪಯೋಗಿಸಬೇಕು.

ವಾರಕ್ಕೆ 2 ರಿಂದ 3 ಬಾರಿ ಪ್ರಕ್ರಿಯೆಯನ್ನು ಪುನರಾವರ್ತಿಸಿ.

2. ಸಕ್ಕರೆ ಮತ್ತು ಕಬ್ಬಿನ ಜ್ಯೂಸ್

ಕಬ್ಬಿನ ರಸದ ಪ್ರಮಾಣದ ಅರ್ಧದಷ್ಟು ನಿಂಬೆರಸ ಸೇರಿಸಬೇಕು. ಈ ಮಿಶ್ರಣಕ್ಕೆ ಜೇನು ಮತ್ತು ಕಡಲೆ ಹಿಟ್ಟು ಹಾಕಿ ಮೈಗೆ ಹಚ್ಚಿ ವ್ಯಾಕ್ಸಿಂಗ್ ಸ್ಟ್ರಿಪ್ ಬಳಸಿ ವ್ಯಾಕ್ಸ್ ಮಾಡಬಹುದು.

ವಾರಕ್ಕೆ 4 ರಿಂದ 5 ಬಾರಿ ಪ್ರಕ್ರಿಯೆಯನ್ನು ಪುನರಾವರ್ತಿಸಿ.

3. ಸಕ್ಕರೆ ಮತ್ತು ಜೇನುತುಪ್ಪ

ಮೈಕ್ರೋವೇವ್‍ನಲ್ಲಿ ಸಕ್ಕರೆ ಮತ್ತು ಜೇನುತುಪ್ಪವನ್ನು ಕರಗಿಸಿ ಒಂದು ಮೇಣದ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಅನಗತ್ಯ ಕೂದಲಿನ ಮೇಲೆ ಅನ್ವಯಿಸಿ. ವಿರುದ್ಧ ದಿಕ್ಕಿನಿಂದ ವ್ಯಾಕ್ಸಿಂಗ್ ಬಟ್ಟೆಯನ್ನು ಬಳಸಿ ಎತ್ತಿದರೆ ಕೂದಲ ನಿರ್ಮೂಲನೆ ಆಗುತ್ತದೆ.

ಅಗತ್ಯವಿದ್ದಾಗ ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸಿ.

Watch:

4. ಎಗ್ ವೈಟ್ ಜೊತೆಗೆ ಸಕ್ಕರೆ

ಎಗ್ ವೈಟ್ ಜೊತೆಗೆ ಸಕ್ಕರೆ ಸೇರಿಸಿ ಅನಗತ್ಯ ಕೂದಲಿನ ಮೇಲೆ ಅನ್ವಯಿಸಿ. ಎಗ್ ವೈಟ್ ಚರ್ಮ ಟೈಟ್ ಆಗೋಕೆ ಸಹಾಯ ಮಾಡುತ್ತದೆ. ಇದು ಕೂದಲನ್ನು ಬೇರುಗಳಿಂದ ತೆಗೆಯುತ್ತದೆ. ಮುಖದ ಕೂದಲು ತೆಗೆದುಹಾಕುವುದು ಇದು ಒಂದು ಪರಿಣಾಮಕಾರಿ ಮಾರ್ಗವಾಗಿದೆ.

ಅನಗತ್ಯ ಮುಖದ ಕೂದಲನ್ನು ಸಂಪೂರ್ಣವಾಗಿ ತೆಗೆದುಹಾಕುವವರೆಗೆ ವಾರಕ್ಕೆ 2 ರಿಂದ 3 ಬಾರಿ ಪ್ರಕ್ರಿಯೆಯನ್ನು ಪುನರಾವರ್ತಿಸಿ.