ಬಾಡಿಗೆ ಕರಾರು ಪಾತ್ರದಲ್ಲಿರುವ ಈ ಸೂಕ್ಷ್ಮ ಸಂಗತಿಗಳನ್ನು ನಿರ್ಲಕ್ಷ್ಯ ಮಾಡಿದರೆ ನಿಮ್ಮ ಹಣ ಕೈತಪ್ಪುವುದಂತೂ ಗ್ಯಾರೆಂಟಿ…

0
3067

ಬದಲಾದ ಜಾಗತಿಕ ಆರ್ಥಿಕ ಮಟ್ಟದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳು ನಿರೀಕ್ಷೆಗೆ ಮೀರಿ ಬೃಹದಾಕಾರವಾಗಿ ಬೆಳೆಯುತ್ತಿವೆ. ಜೊತೆಗೆ ಉದ್ಯೋಗ ಅರಸಿ, ಗ್ರಾಮೀಣ ಪ್ರದೇಶದಿಂದ ನಗರ/ಪಟ್ಟಣ ಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗೆ ಸಾಮಾನ್ಯವಾಗಿ ಮಹಾನಗರಗಳಲ್ಲಿ ಮನೆ ಬಾಡಿಗೆ ಹಿಡಿಯುವುದು ಅನೇಕರಿಗೆ ದೊಡ್ಡ ತಲೆನೋವು ಆಗಿದೆ. ಸೂಕ್ತ ಬಾಡಿಗೆದಾರ ಬರಲಿ ಎಂದು ಮಾಲೀಕರು ಬಯಸುತ್ತಾರೆ, ಅದೇ ರೀತಿ ತಮ್ಮ ನಿರೀಕ್ಷೆಗೆ ತಕ್ಕಂತೆ ಬಾಡಿಗೆದಾರರು ಬರಬೇಕೆಂದು ಮಾಲೀಕರು ಬಯಸುತ್ತಾರೆ. ಆದರೆ ಈಗಿನ ಕಾಲದಲ್ಲಿ ನಿರ್ದಿಷ್ಟ ಕಾರಣವಿಲ್ಲದೆ ಬಾಡಿಗೆದಾರರನ್ನು ಮನೆ ಅಥವಾ ಸ್ಥಳದಿಂದ ಹೊರಹಾಕಲಾಗುತ್ತದೆ ಅಷ್ಟೇ ಯಾಕೆ ನಿರ್ದಿಷ್ಟ ಬಾಡಿಗೆಗಿಂತ ಅಧಿಕ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಹೀಗೆ ಮನೆ ಮಾಲೀಕರಿಗೆ ಯಾವುದೇ ಅಂಕೆ ಅಥವಾ ಕಾನೂನಿನ ನಿಯಂತ್ರಣ ಇಲ್ಲದಿರುವುದರಿಂದ, ಬಾಡಿಗೆಯನ್ನು ಮನಬಂದಂತೆ ಏರಿಕೆ ಮಾಡುತ್ತಿದ್ದಾರೆ. ಆದರೆ ಕೆಲವರು ಅನಿವಾರ್ಯ ಕಾರಣಗಳಿಂದಾಗಿ ಮಾಲೀಕರು ಹಾಕುವ ಷರತ್ತುಗಳಿಗೆ ತಲೆಬಾಗಿ ಮನೆ ಬಾಡಿಗೆ ತೆಗೆದುಕೊಳ್ಳುವವರು ಅದೆಷ್ಟೋ ಜನ.

ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾಲೀಕರು ಬಾಡಿಗೆದಾರರನ್ನು ಮೋಸಮಾಡುವುದು ಸಾಮಾನ್ಯ ಅದು ಈಗ ಇತರೆ ನಗರ/ಪಟ್ಟಣಗಳಿಗೂ ಅದು ಹರಡಿದೆ. ಬಾಡಿಗೆ ಮನೆ ನೀಡುವುದು ಉದ್ದಿಮೆಯೋಪಾದಿಯಾಗಿ ಬೆಳೆಯುತ್ತಿದೆ. ಅದು ಪ್ರಮುಖ ಆದಾಯದ ಮೂಲವೂ ಆಗಿದೆ. ಬಾಡಿಗೆ ನಿಯಂತ್ರಣ ಕಾಯ್ದೆ ಎಲ್ಲರಿಗೂ ಗೊತ್ತಿರುವುದಿಲ್ಲ ಹಾಗೆ ಇದ್ದರು ಅದು ಹೆಸರಿಗೆ ಮಾತ್ರ ಕಾಯಿದೆ ಇರುವುದು ಶೋಚನೀಯ. ಇದೆಲ್ಲದರ ಬಗ್ಗೆ ನೀವು ಇನ್ನು ಒಂದು ಅಂಶದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅದೇ “ಬಾಡಿಗೆ ಕರಾರು ಪಾತ್ರ(Rental Agreement)”. ಬಾಡಿಗೆ ಕರಾರಿನಲ್ಲಿನ ಸೂಕ್ಷ್ಮ ಸಂಗತಿಗಳನ್ನು ನಿರ್ಲಕ್ಷ್ಯ ಮಾಡಬೇಡಿ.

ಕರಾರಿಗೆ ಸಹಿ ಹಾಕುವ ಮುನ್ನ ಕೆಳಕಂಡ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಿ.

  • ವಾರ್ಷಿಕವಾಗಿ ಬಾಡಿಗೆ ಹೆಚ್ಚಳ ಕುರಿತು ಏನಾದರೂ ಸಂಗತಿಯಿದೆಯೇ ಅನ್ನುವುದನ್ನು ಗಮನಿಸಿ. ಇಲ್ಲವಾದಲ್ಲಿ ಮಾಲೀಕನು ಕೆಲವು ತಿಂಗಳಲ್ಲಿಯೇ ಹೆಚ್ಚಿನ ಬಾಡಿಗೆಗೆ ಒತ್ತಾಯಿಸುವ ಸಾಧ್ಯತೆಗಳಿರುತ್ತದೆ.
  • ಬಾಡಿಗೆ ನೀಡಬೇಕಾದ ದಿನಾಂಕ, ತಡವಾದರೆ ಎಷ್ಟು ದಂಡ ತೆರಬೇಕು, ಅಲ್ಲದೇ ಜಿಮ್‌, ಪಾರ್ಕಿಂಗ್‌, ಕ್ಲಬ್‌, ಸ್ವಿಮ್ಮಿಂಗ್‌ ಪೂಲ್‌ ಸೇರಿದಂತೆ ಯಾವುದಾದರೂ ಸೌಲಭ್ಯಗಳಿಗೆ ಹೆಚ್ಚುವರಿ ಶುಲ್ಕವಿದೆಯಾ ಎನ್ನುವ ಅಂಶಗಳೇನಾದರೂ ಇರಬಹುದು ಗಮನಿಸಿ. ಈ ಎಲ್ಲ ಅಂಶಗಳ ಬಗ್ಗೆ ಸ್ಪಷ್ಟತೆ ಇರಲಿ.
  • ಮುಖ್ಯವಾಗಿ ಬಾಡಿಗೆ ಮನೆಯ ಅಸಲಿ ಮಾಲೀಕ ಯಾರು? ಮಾಲೀಕನ ಪರವಾಗಿ ಆತನ ಆಪ್ತರು ಬಾಡಿಗೆ ನೀಡುತ್ತಿದ್ದಾರೆಯೇ? ಈ ಅಂಶ ಮನೆ ಮಾಲೀಕನಿಗೆ ತಿಳಿದಿದೆಯೇ ಎನ್ನುವ ಸಂಗತಿಗಳನ್ನೆಲ್ಲ ನೀವು ತಿಳಿದುಕೊಳ್ಳುವುದು ಅತ್ಯಗತ್ಯ.
  • ಮನೆಯ ಗೋಡೆ, ಪೆಯಿಂಟ್‌ ವರ್ಕ್‌, ಸ್ವಿಚ್‌ ಬೋರ್ಡ್‌, ವೈರಿಂಗ್‌, ನೀರಿನ ಸಂಪರ್ಕ ವ್ಯವಸ್ಥೆ, ಫ್ಲೋರಿಂಗ್‌, ಅಡುಗೆ ಮನೆ, ವಾಷ್‌ರೂಮ್‌ ಎಲ್ಲವೂ ಸುಸ್ಥಿತಿಯಲ್ಲಿವೆಯೇ ಅನ್ನುವುದನ್ನು ಪರೀಕ್ಷಿಸಿ. ಮನೆಯನ್ನು ವಿವರವಾಗಿ ನೋಡದೇ ಕರಾರು ಪತ್ರಕ್ಕೆ ಸಹಿ ಹಾಕಬೇಡಿ.
  • ಮನೆಯಲ್ಲಿ ಮಾಲೀಕರ ವಸ್ತುಗಳು ಅಂದರೆ ಫ್ಯಾನ್‌, ವಿದ್ಯುತ್‌ ಉಪಕರಣಗಳಿದ್ದರೆ ಅಥವಾ ವಸ್ತುಗಳಿದ್ದರೆ ಅವುಗಳ ವಿವರ ಎಲ್ಲವನ್ನೂ ಕರಾರಿನಲ್ಲಿ ನಮೂದಿಸಿರಬೇಕು. ಈ ಅಂಶಗಳೆಲ್ಲವೂ ನಿಮ್ಮ ಕರಾರಿನಲ್ಲಿದೆಯಾ ಗಮನಿಸಿ.