ಗಣತಂತ್ರ ದಿನದ ಬಗ್ಗೆ ನಮ್ಮ ಕನ್ನಡ ಚಲನಚಿತ್ರದ ಹೊಸ ಪೀಳಿಗೆ ಏನ್ ಹೇಳುತ್ತೆ ಮುಂದೆ ನೋಡಿ…

0
992

ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸ೦ವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಂತಹ ವಿಷಯ ಅಂತ ನಾವು ಹೇಳಬಹುದು ಆದರೆ ವಾಸ್ತವಾನೆ ಬೇರೆ… ಯಾಕೆ ಅಂತ ಕೇಳತೀರ…?

ಈಗಿನ ಜನರೇಷನ್ ಗೆ ನಾವು ಗಣರಾಜ್ಯೋತ್ಸವ ಅಂದರೇನು?? ಈ ದಿನವನ್ನು ಆಚರಿಸುವ ಕಾರಣವೇನು…? ಅಂತ ಕೇಳಿದಾಗ ಪ್ರತಿಯೊಬ್ಬರಿಂದಲೂ ಬೇರೆ ಬೇರೆ ರೀತಿಯಲ್ಲಿ ಉತ್ತರ ಸಿಗುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು Naati Factory ಪ್ರೊಡಕ್ಷನ್ ನಲ್ಲಿ Sakkath Studio ವತಿಯಿಂದ ಈಗ ಒಂದು ವಿಡಿಯೋ youtube ನಲ್ಲಿ ಹರಿದಾಡುತ್ತಿದೆ.

ಹಾಗಾದರೆ ಬನ್ನಿ ಆ ವಿಡಿಯೋ ದಲ್ಲಿ ಅಂತಹ ವಿಶೇಷತೆ ಏನು ಅಂತ ನೋಡೋಣ…

ನೋಡಿದರಲ್ಲ ಗೆಳೆಯರೇ…..

ವಿಡಿಯೋದಲ್ಲಿ ಗಣರಾಜ್ಯೋತ್ಸವ ಒಂದು ಫೇಸ್ಬುಕ್ ನಲ್ಲಿ ಹೇಗೆ ಅದನ್ನ ಬರೀತಾರೆ ಮತ್ತು ಕೆಲವು ಮಹಿಳೆಯರಿಗೆ, Software ಉದ್ಯೋಗಿಗಳಿಗೆ ಪ್ರಶ್ನೆಯನ್ನ ಕೇಳಿದಾಗ ಹೇಗೆ ಉತ್ತರ ಕೊಡುತ್ತಾರೆ ಅನ್ನುವುದನ್ನು ವಿಡಿಯೋ ದಲ್ಲಿ ತೋರಿಸಲಾಗಿದೆ.

ಕೊನೆಯದಾಗಿ Raghu Dixit, Nirupa Bhandhari, Shruthi Hariharan ಹೀಗೆ ಅನೇಕ ಸಿನಿಮಾ ಜಗತ್ತಿನ ವ್ಯಕ್ತಿಗಳು ಬಂದು ಗಣರಾಜ್ಯೋತ್ಸವದ ಬಗ್ಗೆ ಜನರಿಗೆ ಅರಿಯುವಂತೆ ತಿಳಿಸುತ್ತಾರೆ. ಇದು ಕೇವಲ ಅವರ ಪ್ರಯತ್ನ. ಜನರಿಗೆ ಗಣರಾಜ್ಯೋತ್ಸವದ ಅರಿವನ್ನು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಇವರ ಈ ಪ್ರಯತ್ನಕ್ಕೆ ನಮ್ಮ ಅಭಿನಂದನೆಗಳು.