ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ; ನವಂಬರ್ ಅಂತ್ಯದೊಳಗೆ ಜಾರಿಗೆ ತರುವಂತೆ ಒತ್ತಾಯ…

0
514

ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ

ಖಾಸಗಿ ವಲಯಲ್ಲಿನ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ವರ್ಷದ ಬಜೆಟ್​ನಲ್ಲಿ ಘೋಷಿಸಿದ್ದರು. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರೋಜಿನಿ ಮಹಿಷಿ ವರದಿಯನ್ನು ತಿದ್ದುಪಡಿ ಮಾಡಿದರು. ಆದರೆ ಕಾನೂನು ಇಲಾಖೆ ಇದು ಸಂವಿಧಾನದ ಸಮಾನ ಅವಕಾಶಗಳಿಗೆ ವಿರುದ್ಧವೆಂದು ಅಭಿಪ್ರಾಯಪಟ್ಟಿತ್ತು.


Also read: ಇಲ್ಲಿವೆ 3 ಸಾವಿರ ವರ್ಷಗಳ ಹಿಂದಿನ ಹುಣಸೆ ಮರಗಳು; ಬೇಡಿಕೊಂಡ ವರವನ್ನು ಪಾಲಿಸುವ ಕಲ್ಪವೃಕ್ಷದ ಹಣ್ಣನ್ನು ಸೇವಿಸಿದರೆ ಗುಪ್ತರೋಗಗಳು ಮಾಯವಾಗುತ್ತೆ..

ಇಂದಿಗ ಈ ವಿಷಯವಾಗಿ ಮೇಲೆ ಬಂದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ ಸಿದ್ದರಾಮಯ್ಯ ಸರೋಜಿನಿಯವರ ವರದಿಯಂತೆ ನವೆಂಬರ್ ಅಂತ್ಯದೊಳಗೆ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಕ್ರಮ ಕೈಗೊಳಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿಮಾಡಿಕೊಂಡಿದ್ದಾರೆ. ಸರೋಜಿನಿ ಮಹಷಿ ಪರಿಷ್ಕ್ರತ ವರದಿಯನ್ವಯ 2017 ರ ಬಜೆಟ್ ನಲ್ಲಿ ಕಾಯಿದೆ ರೂಪಿಸುವ ಘೋಷಣೆ ಮಾಡಲಾಗಿದೆ. ಈ ಎಲ್ಲ ವಿಷಯವಾಗಿ ಕಾರ್ಮಿಕ ಇಲಾಖೆ ಕಾಯಿದೆ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಆದಷ್ಟು ವೇಗವಾಗಿ ಜಾರಿಗೊಳ್ಳಬೇಕು ಎಂದು ಪ್ರೊ. ಎಸ್. ಜಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿನ್ನೆಯಲ್ಲಿ ಮಿಸಲಾತಿ ವರದಿವೂ ಆದಷ್ಟು ಕಾಲಮಿತಿಯೊಳಗೆ ಜಾರಿಗೆ ಬರುವ ಸಾದ್ಯತೆ ಇದೆ ಇದರಿಂದ ನಿರುದ್ಯೋಗಿ ಕನ್ನಡಿಗರಿಗೆ ಉದ್ಯೋಗ ಸಿಗುವುದು ಬಹುತೇಕವಾಗಿ ಖಚಿತವಾಗಿದೆ.

ಏನಿದು ಖಾಸಗಿ ಉದೋಗ ಮಿಸಲಾತಿ?

Also read: ಕಂದಾಯ ಇಲಾಖೆ ಕೋಲಾರ ಜಿಲ್ಲಾ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..
ಕಾರ್ಖಾನೆ ಹಾಗೂ ಐಟಿ ಕಂಪನಿಗಳಲ್ಲಿ, ಎ ಗುಂಪಿನ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 65, ಬಿ ದರ್ಜೆ ಹುದ್ದೆಗಳಲ್ಲಿ ಶೇ.80, ಸಿ, ಡಿ ದರ್ಜೆ ಹುದ್ದೆಗಳಲ್ಲಿ ಶೇ.100 ನೀಡಬೇಕು ಎಂದು ಕಳೆದ ವರ್ಷ ರಾಜ್ಯದ ತುಂಬೆಲ್ಲ ಹೋರಾಟಕ್ಕೆ ಇಳಿದಿದ್ದರು ಈ ವಿಷಯವಾಗಿ ಹಲವಾರು ಚರ್ಚೆಗಳು ನಡೆದವು, ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಮಾಡಲಾಗಿರುವ ವರದಿಯ ಶಿಫಾರಸ್ಸಿನಂತೆ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಸಲ್ಲಿಸಿದ ವರದಿಯನ್ನು ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.


Also read: ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿವಾದಕ್ಕೆ; ಚಿಕ್ಕ ಬಾಲಕಿಯ ಸಂದೇಶ ನಿಜವಾಗುತ್ತ..?
ಕನ್ನಡಿಗರಿಗೆ ಹೆಚ್ಚು ಉದ್ಯೋಗ ಕೊಡಿಸಲು ಮಾಡಿರುವ ಶಿಫಾರಸುಗಳನ್ನು ಕಾನೂನನ್ನಾಗಿ ಮಾಡಬೇಕು ಎಂಬ ಒತ್ತಾಯ ಬಂದಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಮೊದಲಿಗೆ ಈ ವಿಚಾರವನ್ನು ಸಂಪುಟದಲ್ಲಿ ಚರ್ಚೆ ಮಾಡಿ ಕಾನೂನು ರಚನೆ ಸಂಬಂಧ ಸೂಕ್ತ ನಿರ್ಧಾರಕೈಗೊಳ್ಳಲಾಗುವುದು ಎಂದು ಹೇಳಿದ ಅವರು ಇದಕ್ಕೆ ಸ್ವಲ್ಪ ಸಮಯ ಕೋರಿದರು ಈಗ ಅವರು ಹೇಳಿದ ಸಮಯ ಬಂದಿದೆ ಆದರಿಂದ ಹಾಲಿ ಮುಖ್ಯಮಂತ್ರಿಗಳು ಆದಷ್ಟು ನವಂಬರ್ ತಿಂಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.