ನಮ್ಮ ಮಾತ್ ಅಂದ್ರೆ ಮುಖ್ಯಮಂತ್ರಿ ಅಷ್ಟೇ ಅಲ್ಲ, ಅವರಪ್ಪನೂ ಕೇಳಬೇಕು: ಇಲ್ಲ ಮುಖ್ಯಮಂತ್ರಿ ಗೊಟಕ್ ಅಂದುಬಿಡ್ತಾರೆ. ಪ್ರಸನ್ನಾನಂದಪುರಿ ಸ್ವಾಮೀಜಿ..

0
277

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಾಲ್ಮೀಕಿ ಸಮುದಾಯದ ಪ್ರತಿಭಟನೆ ಜೋರಾಗಿದ್ದು, ಸುಮಾರು 14 ದಿನಗಳ ಪಾದಯಾತ್ರೆ ಬಳಿಕ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಪ್ರಸನ್ನಾನನಂದ ಪುರಿ ಸ್ವಾಮೀಜಿ ನಾವ್ ಹೇಳಿದ್ರೆ ಕುಮಾರಸ್ವಾಮಿನೂ ಕೇಳಬೇಕು. ಅವರಪ್ಪನೂ ಕೇಳಬೇಕು. ಎಲ್ಲಾ ಶಾಸಕರು ರಾಜೀನಾಮೆ ಕೊಟ್ರೆ ಕುಮಾರಸ್ವಾಮಿ ಅಷ್ಟೇ ಅಲ್ಲ ಅವರಪ್ಪನು ಮಾತು ಕೇಳ್ತಾರೆ ಎಂದು ಹೇಳಿದ್ದಾರೆ.

Also read: ಕರ್ನಾಟಕದಲ್ಲಿರುವ ಕೇಂದ್ರೀಯ ವಿದ್ಯಾಲಯ ಶಾಲೆಗಳು ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕಾದ ನಿಯಮವನ್ನು ಗಾಳಿಗೆ ತೂರಿವೆ: ಕನ್ನಡ ಅಭಿವೃದ್ದಿ ಪ್ರಾಧಿಕಾರ!!

ಹೌದು ನಗರದ ಪ್ರಿಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಹೋರಾಟದಲ್ಲಿ 17 ಮಂದಿ ವಾಲ್ಮೀಕಿ ಸಮುದಾಯದ ಶಾಸಕರು ಇದ್ದಾರೆ. ಇವರು ರಾಜೀನಾಮೆ ನೀಡಿದರೆ ಸರ್ಕಾರ ಉರುಳುತ್ತದೆ ಎಂದು ಸ್ವಾಮೀಜಿ, ಮುಖ್ಯಮಂತ್ರಿಗಳ ವಿರುದ್ಧ ಸಿಡಿಮಿಡಿಗೊಂಡು ಸಿಎಂ ಸರ್ಕಾರ ಉಳಿಸಲು ಕಾಲು ಹಿಡಿಯುತ್ತಾರೆ ಅನ್ನೋದು ನಂಗೆ ಗೊತ್ತಿದೆ. ಅವರು ಸಿಎಂ ಆಗಿ ಮುಂದುವರೆಯಬೇಕೇ? ಬೇಡವಾ ಎಂದು ಇವತ್ತು ನಿರ್ಧಾರವಾಗಲಿ. ಎಂದು ಸ್ವಾಮೀಜಿ ಅವರು ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಿದ್ದಾರೆ. ಈ ಭರವಸೆ ಈಡೇರಿಸುವಲ್ಲಿ ವಿಫಲರಾದರೆ ಸರ್ಕಾರವನ್ನು ಉರುಳಿಸುವ ಹಾಗೂ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಸಿಎಂ ಅಲ್ಲ ಅವರಪ್ಪನೂ ಕೇಳಬೇಕು;

Also read: ವಾಹನ ಸವಾರರೆ ಎಚ್ಚರ; ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಬಿಳ್ಳಲಿದೆ ಲಕ್ಷ ಲಕ್ಷ ದಂಡ!..

ಮೀಸಲಾತಿ ವಿಚಾರದಲ್ಲಿ ಸರ್ಕಾರ ನಮ್ಮ ಮಾತು ಕೇಳಬೇಕು. 17 ಜನ ಶಾಸಕರು ನಮ್ಮ ಸಮುದಾಯದವರಿದ್ದಾರೆ. ಬೇಡಿಕೆ ಈಡೇರಿಸದೆ ಇದ್ದರೆ ಶಾಸಕರಿಂದ ಸಾಮೂಹಿಕ ರಾಜೀನಾಮೆ ನೀಡುತ್ತಾರೆ. ಸಮುದಾಯದ ಶಾಸಕರು ನನ್ನ ಕೈಗೆ ರಾಜೀನಾಮೆ ಪತ್ರ ನೀಡಲಿ. 17 ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರ ಉಳಿಯುತ್ತದೆಯೇ? ಎಲ್ಲ ಶಾಸಕರೂ ರಾಜೀನಾಮೆ ಕೊಟ್ಟರೆ ಕುಮಾರಸ್ವಾಮಿ ಮಾತ್ರ ಅಲ್ಲ, ಅವರಪ್ಪ ಸಹ ಮಾತು ಕೇಳುತ್ತಾರೆ. ಸರ್ಕಾರ ಉಳಿಯಬೇಕೇ ಅಥವಾ ಬೇಡವೇ ಎಂಬುದು ಅವರೇ ಅರಿತುಕೊಳ್ಳಲಿ ಎಂದರು. ಅದರಂತೆ ವಾಲ್ಮೀಕಿ ಸಮುದಾಯದ ಎಲ್ಲ ಶಾಸಕರೂ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೇಡಿಕೆಯ ಕುರಿತು ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಸ್ವಾಮೀಜಿ ಹೇಳಿದರೆ ಶ್ರೀರಾಮುಲು ರಾಜೀನಾಮೆ?

Also read: ಗ್ರಾಮ ವಾಸ್ತವ್ಯ ನಡೆಸಿರುವ ಸಿಎಂ ಅವರ ಒಂದು ದಿನದ ವಾಸ್ತವ್ಯಕ್ಕೆ ಖರ್ಚಾದ ಹಣ ಕೋಟಿ ರೂ ಅಂತೆ, ಇದೇನಾ ದುಂದು ವೆಚ್ಚವಿಲ್ಲದೆ ಗ್ರಾಮ ವಾಸ್ತವ್ಯ??

ಮೀಸಲಾತಿ ಹೋರಾಟಕ್ಕೆ ನಾನು ಬದ್ಧ. ಸ್ವಾಮೀಜಿ ಅದೇಶ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾಧ್ಯ ಎಂದು ಬಿ. ಶ್ರೀರಾಮುಲು ಹೇಳಿದ್ದರು. ಶಾಸಕ ಸ್ಥಾನದಲ್ಲಿ ಇರಲು ಸ್ವಾಮೀಜಿ ಕಾರಣ. ಇದು ಅವರು ಕೊಟ್ಟ ಭಿಕ್ಷೆ. ನೀವು ಆದೇಶಿಸಿದರೆ ಇದೇ ವೇದಿಕೆಯಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಬೆಳಿಗ್ಗೆ ರಾಜೀನಾಮೆ ವಿಚಾರವನ್ನು ಅವರು ಮೊದಲ ಪ್ರಸ್ತಾಪಿಸಿದ್ದರು.