ಮಹಿಳೆಯರಿಗೆ ಬಸ್ಸಿನಲ್ಲಿ ಮಾತ್ರವಲ್ಲ, ಈಗ ಪಾರ್ಕಿಂಗ್ ಜಾಗದಲ್ಲೂ ಮೀಸಲಾತಿ. ಬಿ.ಬಿ.ಎಂ.ಪಿ.ಯ ಹೊಸ ನಿಯಮದಿಂದ ನಿಜವಾಗಿಯೂ ಮಹಿಳೆಯರಿಗೆ ಸಹಾಯವಾಗಲಿದ್ಯಾ??

0
516

ಸರಿತಾ: ಏ ಹೇಗಿದ್ದೀಯಾ ಏನ್ ಮಾಡ್ತಾ ಇದ್ದೀಯಾ ಯಾಕೇ ಇಷ್ಟು ಲೇಟು..?
ಶೋಭಾ: ಏನಿಲ್ಲಾ ಇಲ್ಲಿ ಗಾಡಿ ನಿಲ್ಲಿಸೋದೆ ಪ್ರಾಬ್ಲಮ್ ಹಾಗಾಗಿ ಹೊತ್ತಾಯಿತು..
ಸರಿತಾ: ಹೌದು..ಬೀಡು ಇದು ಎಲ್ಲಾ ಊರಿನಲ್ಲೂ ಇರೋದೆ.
ಶೋಭಾ: ಸರಿತಾ ನಿಮ್ಮ ಬೆಂಗಳೂರಿನಲ್ಲಿ ಮಹಿಳೆಯರಿಗೆ ಪಾರ್ಕಿಂಗ್ ಮಾಡುವ ಸಮಸ್ಯೆ ಇಲ್ಲವೇ ಇಲ್ಲ ಅಂತಲ್ಲ
ಸರಿತಾ: ಹಾಗೆನಿಲ್ಲಪ್ಪ… ನಮ್ಮಲ್ಲೂ ತುಂಬಾ ಸಮಸ್ಯೆ ಇದೆ.
ಶೋಭಾ: ಸರಿತಾ ಹಾಗಿದ್ರೆ ನೀನು ಇತ್ತೀಚಿನ ಪೇಪರ್ ಸರಿಯಾಗಿ ಓದಿಲ್ಲಾ ಅಂತಾ ಆಯ್ತು.
ಸರಿತಾ: ಏನ್ ಆಯ್ತು..?

ಶೋಭಾ: ಏನಿಲ್ಲ ಸರಿತಾ ಬೆಂಗಳೂರಿನಲ್ಲಿ ಹೊಸ ನಿಯಮ ಬರೋದಿದೆ ಅಂತೆ
ಸರಿತಾ: ಏನದು ನಿಯಮ
ಶೋಭಾ: ಏನಿಲ್ಲಾ ಪಾರ್ಕಿಂಗ್‌ನಲ್ಲೂ ಮಹಿಳೆಯರಿಗೆ ಶೇಕಡಾ ೨೦ ರಷ್ಟು ಮೀಸಲಾತಿ ಸಿಗಲಿದೆ ಎಂತೆ
ಸರಿತಾ: ಹೌದಾ ಎಲ್ಲಿ ಓದಿದ್ದು ನೀನು ತೋರಿಸು
ಶೋಭಾ: ಇದೋ ಇಲ್ಲಿದೆ ನೋಡು…
ಇನ್ನು ಮುಂದೆ ಮಹಿಳೆಯರಿಗೆ ಪಾರ್ಕಿಂಗ್ ಕಿರಿ ಕಿರಿ.. ಇರುವುದಿಲ್ಲ. ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹೊಸ ನಿಯಮ ಮಾಡಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಜಾರ್ಜ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಮಹಿಳೆಯರಿಗೆ ವಾಹನ ಪಾರ್ಕಿಂಗ್ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಜಾರ್ಜ್ ತಿಳಿಸಿದ್ದಾರೆ. ಬಿಬಿಎಂಪಿ ಪಾರ್ಕಿಂಗ್ ಸ್ಥಳದಲ್ಲಿ ಶೇ.೨೦ ರಷ್ಟು ಮಹಿಳೆಯರ ವಾಹನಕ್ಕೆ ಮೀಸಲಾತಿ ನೀಡಲಾಗುವುದೆಂದು ಟ್ವೀಟ್ ಮಾಡಿದ್ದಾರೆ. ಇಂದಿರಾನಗರ, ಕೋರಮಂಗಲ, ಜೆಸಿ ರೋಡ್, ಸಿಐಡಿ, ವಿಧಾನಸೌಧ ಸುತ್ತಮುತ್ತಾ ಸೇರಿದಂತೆ ಹಲವು ಸ್ಥಳದಲ್ಲಿ ಮಹಿಳೆಯರಿಗೆ ಪಾರ್ಕಿಂಗ್ ಸೌಲಭ್ಯದಲ್ಲಿ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.