ಸುಂದರ ಈ ಬದುಕು..ಬೇಡದ ಚಟಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡಿ.. ನಿಮ್ಮ ಕಣ್ಣಲ್ಲಿ ಹೆತ್ತವರನೊಮ್ಮೆ ನೋಡಿ

0
1253

Kannada News | kannada Useful Tips

ಬದುಕನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ಅವಲಂಬಿತವಾಗಿರುತ್ತದೆ.. ಜೀವನದಲ್ಲಿ ಗುರಿ ಸಾಧನೆ ಎಂದು ಹೊರಟವನ ಬಾಳು, ಹಾದಿಯಲ್ಲಿ ಕಲ್ಲು ಮುಳ್ಳುಗಳಿದ್ದರೂ ಗುರಿ ಮುಟ್ಟಿದ ಮೇಲೆ ನೆಮ್ಮದಿ ಮತ್ತು ಗೌರವದ ಜೀವನ ಅವನದ್ದಾಗಿರುತ್ತದೆ.. ಆದರೆ ವಯಸ್ಸಿನಲ್ಲಿ ಬೇಡದ ವಿಚಾರಗಳಿಗೆ ತಲೆ ಕೆಡಸಿಕೊಂಡು ಸುಂದರವಾದ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಹೆತ್ತವರು ಕೂಡ ನಮ್ಮ ವಿಷಯಗಳಿಗೆ ಕೊರಗುವಂತೆ ಮಾಡುತ್ತೇವೆ.. ವಯಸ್ಸಿನಲ್ಲಿ ದುಷ್ಚಟಗಳಿಗೆ ದಾಸರಾದರೆ ಬದುಕೆಂಬುದು ಯಮನ ಪಾಶದಂತಾಗುತ್ತದೆ..

ಹೌದು ಯಾವುದೇ ಅಭ್ಯಾಸವಾದರೂ ಒಂದು ಇತಿ ಮಿತಿಯಲ್ಲಿದ್ದರೆ ಒಳ್ಳೆಯದು.. ಆದರೆ ಚಟವಾಗಿ ಪರಿವರ್ತನೆಯಾದರೆ ಅದರಿಂದ ಹೊರಬರಬೇಕು ಎಂದು ಕೊಂಡರೂ ಸಾಧ್ಯವಾಗುವುದಿಲ್ಲ.. ಒಂದು ಕ್ಷಣ ಸಾಧ್ಯವಾದರೂ ಕೂಡ ಅಷ್ಟರಲ್ಲಿ ನಮ್ಮ ಅರ್ಧ ಆಯಸ್ಸು ಮುಗಿದು ಹೋಗಿರುತ್ತದೆ.. ಸಿಗರೇಟ್ ಕುಡಿತ ಇವೆಲ್ಲಾ ಈಗಿನ ಯೂತ್ಸ್ ಗೆ ಕಾಮನ್ ಆಗಿದೆಯಾದರೂ ಎಲ್ಲವೂ ಇತಿ ಮಿತಿಯಲ್ಲಿದ್ದರೆ ನಿಮ್ಮ ಜೀವನ ವಷ್ಟೇ ಅಲ್ಲದೇ ನಿಮ್ಮ ಹೆತ್ತವರ ಜೀವನವೂ ನೆಮ್ಮದಿಯಿಂದಿರುತ್ತದೆ..

Parents helping their children with their schoolwork

ಇನ್ನೂ ಪ್ರೀತಿ ಪ್ರೇಮದ ವಿಷಯಕ್ಕೆ ಬಂದರೆ.. ಇದು ಬಾಳಿನ ಒಂದು ಭಾಗ ನಿಜ.. ಆದರೆ ಯಾವುದು ಯಾವ ಸಮಯದಲ್ಲಾಗಬೇಕೊ ಆ ಸಮಯದಲ್ಲಾದರೆ ಒಳ್ಳೆಯದು.. ಹರೆಯವೆಂಬುದು ಪ್ರೀತಿ ಮೂಡುವ ಸಮಯವಾದರೂ ಅದು ಜೀವನದಲ್ಲಿ ಸೆಟಲ್ ಆದಮೇಲೆ ಆದರೆ ಇನ್ನೂ ಚೆಂದ.. ಪ್ರೀತಿ ಮಾಡುವುದು ತಪ್ಪಲ್ಲಾ.. ಆದರೆ ಬಿಸಿ ರಕ್ತದ ಮಂದಿ ಪ್ರೀತಿಯ ಪಾಶಕ್ಕೆ ಬೀಳುವ ಮೊದಲು ಸಮಾಜದಲ್ಲಿ ನಿಮ್ಮ ಸ್ಥಾನಮಾನ ಏನಿದೆ ಸ್ವಂತವಾಗಿ ಸಂಪಾದನೆ ಮಾಡಿರುವುದಾದರೂ ಏನೂ ಎಂಬುದನ್ನು ಅರಿತು ನಂತರ ಪ್ರೀತಿ ಮಾಡಿ..

ನಿಮ್ಮ ಜೀವನ ಸ್ವಲ್ಪ ಏರು ಪೇರಾದರೂ ಸಂಕಟ ಪಡುವ ಜೀವಗಳೆಂದರೆ ಅವು ಹೆತ್ತವರದ್ದು.. ಅವರನ್ನೊಮ್ಮೆ ನೋಡಿ ನಿಮ್ಮ ಭವಿಷ್ಯ ಯಾವ ರೀತಿ ಇರಬೇಕೆಂದು ರೂಪಿಸಿಕೊಳ್ಳಿ..

Also Read: ಈಗಲಾದರೂ ಕಣ್ಣು ತೆರೆಯಿರಿ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ