ನೀವು ಕೆಲಸದ ಹುಡುಕಾಟದಲ್ಲಿದ್ದರೆ, Resume ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಮಾಹಿತಿ!!

0
1765

 ರೆಸ್ಯೂಮೆ ಮಾಡಬೇಕಾದರೆ ಈ ಕೆಳಗಿನ ವಿಷಯಗಳನ್ನು ಗಮನದಲ್ಲಿರಿಸಿ:

ಇದು ಉದ್ಯೋಗ ನೇಮಕಾತಿಯ ಸಮಯ , ಕಾಲೇಜ್ ಗಳಿಗೆ ಕಂಪನೀಗಳು ಬಂದು ಅಭ್ಯರ್ಥಿಗಳನ್ನು ಆರಿಸುವ ಸಮಯ . ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ರೆಸ್ಯೂಮೆ . ರೆಸ್ಯೂಮೆ ಅಂದರೆ ನಮ್ಮ ಶಿಕ್ಷಣಿಕ ಹಾಗೂ ಉದ್ಯೋಗಕ್ಕೆ ಸಂಬಂಧ ಪಡುವ ವಿಷ್ಯಗಳ ಸಂಗ್ರಹ. ಅಭ್ಯರ್ಥಿಗಳನ್ನು ಆರಿಸುವ ನಿರ್ಧಾರ ಎಷ್ಟೋ ಬಾರಿ ಅವರ ರೆಸ್ಯೂಮೆ ಯ  ಮೇಲೆ ಅವಲಂಬಿತ ವಾಗಿರುತ್ತದೆ . ಎಷ್ಟೋ ಬಾರಿ ಅಭ್ಯರ್ಥಿಗಳಿಗೆ ಏನನ್ನು ಸೇರಿಸಬೇಕು , ಏನನ್ನು ಬಿಡಬೇಕು ಎಂಬುದೇ ತಿಳಿದಿರುವುದಿಲ್ಲ .

ಇಲ್ಲಿದೆ ನೋಡಿ ರೆಸ್ಯೂಮೆ ಯಲ್ಲಿ ಇರಲೇ ಬೇಕಾದ 5 ಅವಶ್ಯ ವಿಷಯಗಳು –

  1. ಆಬ್ಜೆಕ್ಟಿವ್ : ಇದು ಬಹಳ ಸ್ಪಷ್ಟವಾಗಿರಬೇಕು . ಆಬ್ಜೆಕ್ಟಿವ್ ಅಂದರೆ ನಿಮ್ಮ ಉದ್ಯೋಗ ಜೀವನದಿಂದ ನೀವು ಏನನ್ನು ಬಯಸುತ್ತೀರೀ ಎಂದು . ಇದನ್ನು ನೀವು ಹೋಗುತಿರುವ ಕಂಪನೀ ಗೆ ಅನುಗುಣವಾಗಿ ಬದಲಿಸಬಹುದು .
  2. ನಿಮ್ಮನ್ನು ಸಂಪರ್ಕಿಸಲು ಬೇಕಾದ ಮಾಹಿತಿ :ನಿಮ್ಮ ರೆಸ್ಯೂಮೆಯಲ್ಲಿ ನಿಮ್ಮ ಈಗಿನ ವಿಳಾಸ ಹಾಗೂ ಫೋನ್ ನಂ ಇರಬೇಕು . ಈಮೇಲ್ ಐಡಿಯನ್ನು ಸಹ ಸೇರಿಸಬೇಕು . ನೀವು ಸೇರಿಸುವ ಈಮೇಲ್ ಐಡಿ ಬಾಲಿಶವಾಗಿ ಇರಬಾರದು ಬದಲಾಗಿ ವೃತಿಪರವಾಗಿರಬೇಕು.
  1. ನಿಮ್ಮ ಶೈಕ್ಷಣಿಕ ಮಾಹಿತಿ: ನಿಮ್ಮ ಎಲ್ಲ ಪದವಿಯ ಬಗ್ಗೆಗಿನ ಮಾಹಿತಿ ಹಾಗೂ ಅದರಲ್ಲಿ ಪಡೆದಿರುವ ಅಂಕವನ್ನು ಸೇರಿಸಬೇಕು . ಇದು ಬಹಳ ಮುಖ್ಯ
  2.  ನಿಮ್ಮ ಮುಂಚಿನ ಉದ್ಯೋಗದ ಬಗ್ಗೆ ಮಾಹಿತಿ: ನೀವು ಈ ಕೆಳಗೆ ಬೇರೆ ಕಡೆ ಕೆಲಸ ಮಾಡಿದ್ದಾರೆ , ಅದರ ಬಗ್ಗೆ , ಅಲ್ಲಿ ಮಾಡಿದ ಕೆಲಸದ ಬಗೆಯ ಬಗ್ಗೆ ಮಾಹಿತಿಯನ್ನು ಸೇರಿಸಬೇಕು. ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವವರು ಇದನ್ನೆಲ್ಲ ಗಮನಿಸುತ್ತಾರೆ

  1. ಕೀ ವರ್ಡ್ ಗಳನ್ನು ಸೇರಿಸಿ : ನೀವು ಕೆಲಸಕ್ಕೆ ಇಂಟರ್‌ವ್ಯೂ ಗೆ ಹೋಗುವ ಕಂಪನೀ ಯ ಉದ್ಯೋಗಾವಕಾಶದ ಅಡ್ವೆರ್ಟಿಸೆಮೆಂಟ್‌ನಲ್ಲಿ ಇರುವ ಕೆಲವೊಂದು ಕೀವರ್ಡ್ಸ್ ಅನ್ನು ನಿಮ್ಮ ರೇಸುಮೆಯಲ್ಲಿ ಸೇರಿಸಿದರೆ ನಿಮ್ಮನ್ನು ಆಯ್ಕೆಮಾಡುವ ಸಾದ್ಯತೆ ಹೆಚ್ಚು