ಲೋಕಸಭಾ ಚುನಾವಣೆಯಲ್ಲಿ ಸಚಿವ ರೇವಣ್ಣನವರ ಸೆಕ್ಯೂರಿಟಿ ವಾಹನದಲ್ಲಿ ಸಿಕ್ಕ ಹಣದ ವೀಡಿಯೊ ಸಾಕ್ಷಿ ರಾತ್ರೋ ರಾತ್ರಿ ಡಿಲೀಟ್ ಏನಿದು ಜಾದು??

0
286

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಾಹನಗಳ ತಪಾಸಣೆ ವೇಳೆ ಕೋಟಿ ಕೋಟಿ ಹಣ ಸಿಕ್ಕಿದೆ, ಈ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಗಳಲ್ಲಿ ಬರುವ ಪ್ರತಿಯೊಂದು ವಾಹನಗಳನ್ನು ಚಕ್ ಮಾಡಲಾಗುತ್ತಿತು, ಅದರಂತೆ ಹಲವು ರಾಜಕೀಯ ನಾಯಕರ ಹಣವು ಪತ್ತೆಯಾಗಿತ್ತು, ಈ ಬಾರಿ ಚುನಾವಣೆಯಲ್ಲಿ ಎಚ್ಡಿಕೆ ಕುಟುಂಬದ ರಾಜಕೀಯ ಜೋರಾಗಿತ್ತು ಇದೆ ಕುಟುಂಬದ ಇಬ್ಬರು ಮಕ್ಕಳನ್ನು ಹೊಸದಾಗಿ ರಾಜಕೀಯಕ್ಕೆ ಇಳಿಸಲಾಗಿತ್ತು. ಅದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಹಿಡಿದು ಸಚಿವ ರೇವಣ್ಣನ ಕಾರುಗಳನ್ನು ಹೋದಲೆಲ್ಲ ತಪಾಸಣೆ ಮಾಡಲಾಗಿತ್ತು. ಈ ವೇಳೆ ರೇವಣ್ಣನಿಗೆ ಸಂಬಂಧಿಸಿದ ವಾಹನದಲ್ಲಿ ನಗದು ಪತ್ತೆ ಯಾಗಿತ್ತು, ಅದನ್ನು ಚುನಾವಣೆ ಅಧಿಕಾರಿಗಳು ವಶಪಡಿಸಿಕೊಂಡಿದರು. ಈಗ ಅದಕ್ಕೆ ಇರುವ ಸಾಕ್ಷಿಯನ್ನು ಡಿಲೀಟ್ ಮಾಡಲಾಗಿದ್ದು ಬಾರಿ ಚರ್ಚೆಗೆ ನಡೆಯುತ್ತಿದೆ.

Also read: SSLC ಪರೀಕ್ಷೆಯಲ್ಲಿ ಹಾಸನ ಮೊದಲು ಬರಲು ನನ್ನ ಹೆಂಡತಿ ಮಾಡಿದ ಪಾಠವೇ ಕಾರಣ: ಎಚ್.ಡಿ.ರೇವಣ್ಣ; ಇದು ಒಪ್ಪುವಂತಹ ಮಾತೇ?

ಹೌದು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ಹೋಗುತ್ತಿರುವ ಲೋಕೋಪಯೋಗಿ ಸಚಿವ ರೇವಣ್ಣ ಅವರ ಬೆಂಗಾವಲು ಪಡೆಯ ವಾಹನವನ್ನು ತಪಾಸಣೆ ನಡೆಸಿ ಹಣ ಸೀಜ್ ಮಾಡಲಾಗಿತ್ತು. ಈ ವೇಳೆ ಹಣ ಸೀಜ್ ಮಾಡಿದ್ದನ್ನು ತಪಾಸಣಾ ತಂಡ ವಿಡಿಯೋ ಮಾಡಿತ್ತು. ಆದರೆ ಇದೀಗ ರಾತ್ರೋರಾತ್ರಿ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಅದು ರಾತ್ರಿವೇಳೆ ಹುಡಿಕಿ ಡಿಲೀಟ್ ಮಾಡಲಾಗಿದ್ದು ಇದರ ಹಿಂದೆ ದೊಡ್ಡ ಪ್ಲಾನ್ ಇಟ್ಟುಕೊಂಡು ಮಾಡಲಾಗಿದೆ. ಸಚಿವರ ರಕ್ಷಣೆಗಾಗಿ ಈ ವಿಡಿಯೋ ಡಿಲೀಟ್ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದೆ.

ಏನಿದು ರೇವಣ್ಣನ ಹಣದ ಕೇಸ್?

@publictv.in

Also read: ಮತ್ತೆ ಜ್ಯೋತಿಷ್ಯ ನುಡಿದು ನಿಂಬೆಹಣ್ಣಿನ ರಹಸ್ಯ ಬಿಚ್ಚಿಟ್ಟ ಎಚ್.ಡಿ ರೇವಣ್ಣ; ಮತ್ತೆ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಘೋಷಣೆ..

ಸಚಿವ ರೇವಣ್ಣನಗೆ ಸಂಬಂಧಿಸಿದ ಹಣವನ್ನು ತಪಾಸಣಾ ತಂಡ ಸೀಜ್ ಮಾಡಿಕೊಂಡಿತ್ತು. ಅದು ಪೊಲೀಸ್ ವಾಹನದಲ್ಲಿ 1.20 ಲಕ್ಷ ರೂ. ಹಣ ಸೀಜ್ ಆಗಿತ್ತು. ಆಗ ಮನೀಷ್ ಮೌದ್ಗಿಲ್ ಅವರ ಮೇರೆಗೆ ದೂರ ದಾಖಲಾಗಿತ್ತು. ಈ ವೇಳೆ ಹಣ ಸೀಜ್ ಮಾಡುವಾಗ ಕಂಪ್ಲೀಟ್ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಅದನ್ನು ಸ್ಥಳೀಯ ಚುನಾವಣಾ ಕಚೇರಿಯಲ್ಲಿ ಸೇವ್ ಮಾಡಲಾಗಿದ್ದು, ಅಲ್ಲಿನ ಚುನಾವಣಾ ಅಧಿಕಾರಿಗಳು ವಿಡಿಯೋ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಆದರೆ ಮನೀಷ್ ಮರುದಿನ ಆಫೀಸ್‍ಗೆ ಬರುವಷ್ಟರಲ್ಲಿ ವಿಡಿಯೋ ಡಿಲೀಟ್ ಆಗಿತ್ತು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈ ವಿಡಿಯೋವನ್ನು ತಾಲೂಕು ಆಫೀಸಿನಲ್ಲಿ ಚುನಾವಣಾ ಅಧಿಕಾರಿಗಳು ಸೇವ್ ಮಾಡಿದ್ದರು. ನಂತರ ಅದರ ಬಗ್ಗೆ ತನಿಖೆ ನಡೆಸಲು ಚುನಾವಣಾ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಅದರಂತೆ ಸಚಿವರ ಕಾವಲು ವಾಹನದಲ್ಲಿ ಹಣ ಸಿಕ್ಕ ವಿಡಿಯೋ ಸೇವ್ ಮಾಡಿದ ನಂತರ ಈ ಬಗ್ಗೆ ವಿಶೇಷ ಚುನಾವಣಾ ಅಧಿಕಾರಿ ಮನೀಷ್ ಮೌದ್ಗಿಲ್‍ಗೂ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದರು ಅದರಂತೆ ವಿಡಿಯೋ ತಪಾಸಣೆ ಮಾಡಲು ಮನೀಷ್ ಮೌದ್ಗಿಲ್ ಆಫೀಸ್‍ಗೆ ಬಂದಿದ್ದಾರೆ. ಆದರೆ ಸೇವ್ ಮಾಡಿದ್ದ ಕಂಪ್ಯೂಟರ್ ನಲ್ಲಿ ವಿಡಿಯೋನೇ ಇಲ್ಲ. ಇದರಿಂದ ವಿಡಿಯೋ ತಪಾಸಣೆಗೆ ಬಂದ ಮನೀಷ್ ಮೌದ್ಗಿಲ್‍ಗೆ ಶಾಕ್ ಆಗಿದೆ. ಕೂಡಲೇ ವಿಡಿಯೋ ಡಿಲೀಟ್ ಬಗ್ಗೆ ತನಿಖೆ ನಡೆಸುವಂತೆ ಮನೀಷ್ ಮೌದ್ಗಿಲ್ ಆದೇಶ ಹೊರಡಿಸಿದ್ದಾರೆ.

@publictv.in

Also read: ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ ನನ್ನದು ಸ್ವಾತಿ ನಕ್ಷತ್ರ ನನಗೆ ದೈವಾನುಗ್ರಹವಿದೆ; ಐಟಿ ಶಾಕ್‌ ನೀಡಲು ಹೋದ್ರೆ ಮಾಡಿಸಿದವ್ರಿಗೇ ಶಾಕ್‌ ತಿರುಗಿ ತಟ್ಟುತ್ತದೆ..

ಈ ಘಟನೆಯ ಸಂಬಂಧ ಮನೀಷ್ ಅಂದಿನ ದಿನ ಅಧಿಕಾರದಲ್ಲಿದ್ದ ಅಧಿಕಾರಿಗಳು, ಸೆಕ್ಯೂರಿಟ್ ಗಾರ್ಡ್ ಮುಂತಾದವರ ಮೇಲೆ ಸೂಕ್ತ ಕ್ರಮಗೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ಅಧಿಕಾರಿಗಳು ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಇದರ ಹಿಂದೆ ಬಹಳಷ್ಟು ಅನುಮಾನಗಳು ಮೂಡಿದ್ದು ಸಚಿವರ ಮೇಲೆ ಆಗುವ ಕೇಸ್ ಕುಲ್ಲಾ ಮಾಡಲು ಈ ಸಾಕ್ಷಿಯನ್ನು ಮಾಯ ಮಾಡಲಾಗಿದೆ ಎನ್ನುವ ಟೀಕೆಗಳು ಕೇಳಿಬರುತ್ತಿವೆ. ಇಂತಹ ಮಾಸ್ಟರ್ ಪ್ಲಾನ್ ಹಿಂದೆ ಯಾರ ಯಾರ ಕೈವಾಡವಿದೆ ಎನ್ನುವುದು ತಿಳಿಯಬೇಕಿದೆ. ಒಂದು ವೇಳೆ ವೀಡಿಯೊ ಡಿಲೀಟ್ ಮಾಡಿದ್ದು ಪಕ್ಕಾ ಆದರೆ ಸಚಿವರ ಮೇಲೆ ಅಧಿಕಾರಿಗಳ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ವಿರೋಧ ಪಕ್ಷದ ನಿರೀಕ್ಷೆಯಾಗಿದೆ.