ತುಕ ಕಳೆದುಕೊಳ್ಳಲು ಸಹಕಾರಿ ಹೀರೆಕಾಯಿ

0
2989

ಹೀರೆಕಾಯಿ ಹಿರಿಮೆ

*ಅತ್ಯಧಿಕವಾಗಿ ಫೈಬರ್ ಹಾಗೂ ವಿಟಮಿನ್ ಸಿ ಜಿಂಕ್, ಐರನ್, ಮೆಗ್ನೀಷಿಯಂ, ಥೈಮಿನ್ ಹಾಗೂ ಇತರೆ ಮಿನರಲ್ ಗಳನ್ನು ಹೊಮದಿದೆ.

*ತುಕ ಕಳೆದುಕೊಳ್ಳಲು ಸಹಕಾರಿ.

* 8ನೀರಿನಂಶ ಹೆಚ್ಚಾಗಿರುವುದರಿಂದ ಮೂಲವ್ಯಾಧಿ ನಿವಾರಣೆಯಲ್ಲಿ ಸಹಕಾರಿ.

Health-Benefits-Of-Ridge-Gourd

*ಇದರಲ್ಲಿರುವ ಬೀಟಾ ಕೆರೋಟಿನ್ ದೃಷ್ಟಿಯನ್ನು ಆರೋಗ್ಯ ದಿಂದಿಡುತ್ತದೆ.

*ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗಟ್ಟಿ ರಕ್ತವನ್ನು ಶುದ್ಧಗೊಳಿಸುತ್ತದೆ.

*ಮುಖದಲ್ಲಿರುವ ಚರ್ಮ ನೀಡುತ್ತದೆ.

*ಚರ್ಮದಲ್ಲಿ ಬಿಳಿ ಚಿಬ್ಬುಗಳಾಗಿದ್ದರೆ ಹೀರೆಕಾಯಿ ಸಿಪ್ಪೆಯನ್ನು ಬೆಳ್ಳುಳ್ಳಿ ಜೊತೆಯಲ್ಲಿ ಅರೆದು ಚಿಬ್ಬುಗಳ ಮೇಲೆ ಲೇಪಿಸಿದರೆ ಗುಣವಾಗುತ್ತದೆ.

*ಸಿಪ್ಪೆ ಸಹಿತ ಹೀರೆಕಾಯಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಯನ್ನು ನೀರಿನೊಂದಿಗೆ ಕಲಸಿ ಕೂದಲಿಗೆ ಹಚ್ಚಿದರೆ ಬಾಲನೆರೆ ಕಡಿಮೆಯಾಗಿ, ಕೂದಲು ಸೊಂಪಾಗಿ ಬರುತ್ತದೆ.

*ಹೀರೆಕಾಯಿಯ ತಿರುಳನ್ನು ತುಪ್ಪದಲ್ಲಿ ಬೇಯಿಸಿ ಮೊಸರಿನ ಜೊತೆ ಸೇವಿಸಿದರೆ ಅಂತರ್ ದಾಹ ಕಡಿಮೆಯಾಗುತ್ತದೆ.

*ಒಂದು ಕಪ್ ಹೀರೆಕಾಯಿಯ ರಸಕ್ಕೆ ಎರಡು ಚಮಚ ಸಕ್ಕರೆ ಸೇರಿಸಿ ಸೇವಿಸಿದರೆ ಕಾಮಾಲೆ ನಿವಾರಣೆ ಯಾಗುತ್ತದೆ.

*ಮೂತ್ರ ವಿಸರ್ಜನೆಯಲ್ಲಿ ನೋವು ಮತ್ತು ಉರಿ ಇದ್ದರೆ ಬಲಿತ ಹೀರೆಕಾಯಿಯ ಬೀಜವನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು, ಅದಕ್ಕೆಜೀರಿಗೆ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ನೋವು ಮತ್ತು ಉರಿ ಗುಣವಾಗುತ್ತದೆ.

*ಹೀರೆಕಾಯಿಯ ತಿರುಳನ್ನು ಜಜ್ಜಿ ಗಾಯದ ಮೇಲೆ ಲೇಪಿಸಿದರೆ ರಕ್ತಸ್ರಾವ ನಿಲ್ಲುತ್ತದೆ.