ನಿಮ್ಮ ಪತಿ/ಬಾಯ್ ಫ್ರೆಂಡ್ ನ ಉಂಗುರದ ಬೆರಳು ಏನು ಹೇಳುತ್ತದೆ?

0
4169

ಮದುವೆಯಾಗದ ಗಂಡು ಮತ್ತು ಹೆಣ್ಣು ಜೀವಿಗಳಿಗೆ ಸಂಬಂಧಿಸಿದ ವಿಷಯವಿದು. ಇಂಥವರಿಗೆ ಯಾರಾದರೂ ಹೊಸಬರು ಪರಿಚಿತರಾದರೆ ಉಂಗುರದ ಬೆರಳನ್ನು ಮೊದಲು ನೋಡುತ್ತಾರೆ ಎನ್ನುತ್ತಿದೆ ಹೊಸ ಸಂಶೋಧನೆಯ ಸಮೀಕ್ಷೆ.

ಮಾನವರಿಗೆ ಸಹಜವಾಗಿ ಬಂದಿರುವ ಒಂದು ಗುಣವೆಂದರೆ ಕುತೂಹಲ. ಅದರಲ್ಲೂ ಅಚ್ಚರಿ ಸಂಗತಿ ಏನೆಂದರೆ, ತೋರು ಬೆರಳು ಹಾಗೂ ಉಂಗುರ ಬೆರಳಿನ ಉದ್ದ ಸಮವಾಗಿರುವವರು ದೀರ್ಘಕಾಲೀನ ಹೆಣ್ಣು-ಗಂಡಿನ ಬೆಸುಗೆಯ ನೆಲೆನಿಲ್ಲುವುದೆಂಬ ಸ್ವಾರಸ್ಯಕರ ಸಂಗತಿ ತಿಳಿದುಬಂದಿದೆ. ಉಂಗುರ ಧರಿಸಿದ ಬೆರಳು ಮತ್ತು ಸತಿಪತಿಯರ ದಾಂಪತ್ಯಸುಖದ ಪ್ರಮಾಣ ಇವೆರಡಕ್ಕೂ ನೇರಸಂಬಂಧವಿದೆ ಎಂದರ್ಥ.

ಅಬ್ರಹಾಂ ಲಿಂಕನ್ ಪ್ರಕಾರ, ನೀವು ಸಂಪೂರ್ಣವಾಗಿ ಮೇಲಿನ ಮಾತನ್ನು ಎಲ್ಲವನ್ನೂ ನಂಬಬೇಕು. ಹೊಸ “ಸಂಶೋಧನೆ” ಪ್ರಕಾರ ಮನುಷ್ಯನ ಬೆರಳಿನ ಉದ್ದ ಅವರವರ ಲೈಂಗಿಕ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿವರಗಳನ್ನು ಹೇಳುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.

• ಬಲಗೈಯ ಉಂಗುರ ಬೆರಳು, ತೋರುಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ ಅಂಥವರು ಸಂಗಾತಿಗೆ ಹೆಚ್ಚು ನಿಷ್ಠರಾಗಿರುವುದಿಲ್ಲ
• ತೋರು ಬೆರಳು ಹಾಗೂ ಉಂಗುರ ಬೆರಳಿನ ಉದ್ದ ಸಮವಾಗಿರುವವರು ದೀರ್ಘಕಾಲೀನ ಸಂಬಂಧ ಬಯಸುತ್ತಾರೆ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈಗಳಲ್ಲಿ ಇರುವ ಬೆರಳುಗಳ ತುಲನಾತ್ಮಕ ಗಾತ್ರ ವ್ಯಕ್ತಿಯ ಸ್ವಭಾವಗಳನ್ನು ನಿರ್ಧರಿಸುತ್ತದೆ. ಜ್ಯೋತಿಷಿಗಳ ಪ್ರಕಾರ ಓರ್ವ ವ್ಯಕ್ತಿಯ ವ್ಯಕ್ತಿತ್ವ ಆತನ ದೈಹಿಕ ಆಕಾರದಿಂದ ಬಹುವಾಗಿ ಪ್ರಭಾವಿತವಾಗಿರುತ್ತದೆ. ಅದರಲ್ಲೂ ನಮ್ಮ ಹಸ್ತ ಮತ್ತು ಬೆರಳುಗಳು ಬಹಳಷ್ಟನ್ನು ತಿಳಿಸುತ್ತವೆ. ಹಸ್ತರೇಖಾಶಾಸ್ತ್ರ ಎಂದೇ ಪ್ರಸಿದ್ಧಿ ಪಡೆದಿರುವ ಈ ಜ್ಞಾನದಲ್ಲಿ ಬೆರಳುಗಳ ಉದ್ದವನ್ನೂ ಪರಿಗಣಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

ಕೆನಡಾದಲ್ಲಿ ಗಿಲ್ ವಿಶ್ವವಿದ್ಯಾನಿಲಯದ ನಡೆಸಿದ ಅಧ್ಯಯನದ ಪ್ರಕಾರ ಹುಟ್ಟಿಗೂ ಮೊದಲೇ ಬೆರಳಿನ ಉದ್ದ ನಿರ್ಧಾರವಾಗಿರುತ್ತದೆ. ತಾಯಿಯ ಗರ್ಭದಲ್ಲಿರುವ ಮಗುವಿನ ಮೇಲೆ ಲೈಂಗಿಕ ಹಾರ್ಮೋನ್ ಮಟ್ಟ ಬೀರುವ ಪರಿಣಾಮವನ್ನು ಅದು ಆಧರಿಸುತ್ತದೆ. ಉಂಗುರ ಬೆರಳು ಹೆಚ್ಚು ಉದ್ದವಿರುವ ಮಹಿಳೆಯರು ಹಾಗೂ ಪುರುಷರು, ಬಹುಶಃ ಹೆಚ್ಚು ಪ್ರಮಾಣದ ಟೆಸ್ಟಸ್ಟಿರೋನ್(ಲೈಂಗಿಕ ಹಾರ್ಮೋನ್) ಹೀರಿಕೊಂಡಿರಬಹುದು. ಒಬ್ಬರಿಗಿಂತ ಹೆಚ್ಚು ಮಂದಿ ಜತೆಗೆ ಸಾಂಗತ್ಯ ಬಯಸಲು ಈ ಅಂಶ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

“It is fascinating to see that moderate variations of hormones before birth can actually influence adult behavior in a selective way,” ಎಂದು ನಿವೃತ್ತ ಪ್ರೊಫೆಸರ್ ಸೈಮನ್ ಯಂಗ್, ಸೈಕಿಯಾಟ್ರಿ ಮತ್ತು ಅಧ್ಯಯನದ ಸಹ ಲೇಖಕ ಹೇಳುತ್ತಾರೆ.

ಸಂಗಾತಿ ನಿಮಗೆ ನಿಷ್ಠರೇ, ಇಲ್ಲವೇ ಎಂದು ತಿಳಿಯುವುದು ಹೇಗೆ ಅಂತ ಈಗ ಗೊತ್ತಾಯಿತಲ್ಲ. ಈಗೊಂದು ಸಣ್ಣ ಪರೀಕ್ಷೆ ಮಾಡಿ. ನಿಮ್ಮ ಬಲಗೈಯ ಎಲ್ಲ ಬೆರಳುಗಳನ್ನೊಮ್ಮೆ ಸೂಕ್ಷ್ಮವಾಗಿ ನೋಡಿ. ತೋರುಬೆರಳು (Index finger) ಮತ್ತು ಉಂಗುರದ ಬೆರಳು (Ring finger) ಇವೆರಡರ ಉದ್ದವನ್ನು ಗಮನಿಸಿ. ಯಾವುದರ ಉದ್ದ ಹೆಚ್ಚು ಇದೆ? ತೋರುಬೆರಳಿನದೇ ಅಥವಾ ಉಂಗುರಬೆರಳಿನದೇ?