ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಇನ್ನಿಲ್ಲ..!

0
695

ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಅವರು ಅನಾರೋಗ್ಯದ ಕಾರಣ ಇಂದು ವಿಧಿವಶರಾಗಿದ್ದಾರೆ.

ಬೆಂಗಳೂರಿನ ನಾಗರಬಾವಿಯಲ್ಲಿರುವ ನಿವಾಸದಲ್ಲಿ ಎಲ್.ಎನ್.ಶಾಸ್ತ್ರಿ ಕೊನೆಯುಸಿರೆಳೆದಿದ್ದಾರೆ. ಶಾಸ್ತ್ರಿ ಅವರು ದೀರ್ಘ ಕಾಲದಿಂದ ಕರುಳು ಕ್ಯಾನ್ಸರ್ ರೋಗದಿಂದ ನರುಳುತ್ತಿದ್ದರು.

ಕನ್ನಡದ ಸ್ಟಾರ್ ನಟರ ಚಿತ್ರಗಳ ಸೂಪರ್ ಹಿಟ್ ಹಾಡುಗಳಿಗೆ ಶಾಸ್ತ್ರಿ ಧ್ವನಿಯಾಗಿದ್ದರು. ‘ಎ’, ‘ಜನುಮದ ಜೋಡಿ’, ‘ಸಿಪಾಯಿ’, ‘ಜೋಡಿ ಹಕ್ಕಿ’ ಚಿತ್ರದ ಹಾಡುಗಳು ಸೇರಿದಂತೆ 3000ಕ್ಕೂ ಅಧಿಕ ಹಾಡನ್ನು ಎಲ್.ಎನ್.ಶಾಸ್ತ್ರಿ ಹಾಡಿದ್ದಾರೆ. ಸಂಗೀತ ನಿರ್ದೇಶಕರೂ ಆಗಿದ್ದ ಅವರು 15ಕ್ಕೂ ಅಧಿಕ ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ…’ ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

ಶಾಸ್ತ್ರಿ ಅವರ ಸಾವಿಗೆ ಸ್ಯಾಂಡಲ್‍ವುಡ್ ಗಣ್ಯರು ಮತ್ತು ಕೆಲ ನಾಯಕರು ಕಂಬನಿ ಮಿಡಿದಿದ್ದಾರೆ.