ಸರಿಗಮಪದ ಋತ್ವಿಕ್ ಅವರ ಸಂಗೀತಕ್ಕೆ ಮನಸೋತು ಕಣ್ಣು ದಾನಮಾಡುತ್ತಿರುವ ವೃದ್ದನನ್ನು ನೋಡಿದರೆ ತಿಳಿಯುತ್ತೆ. ಸಂಗಿತದ ಶಕ್ತಿಯೆಂತದು ಅಂತ…

0
646

ಪ್ರತಿಯೊಂದು ಜೀವಿಗಳಿಗೂ ಕಣ್ಣುಗಳು ಬೇಕೇಬೇಕು ಅದರಲ್ಲಿ ಬುದ್ದಿಜೀವಿ ಮಾನವನಿಗೆ ಕಣ್ಣಿನ ಅವಶ್ಯಕತೆ ತುಂಬಾನೇ ಇದೆ. ಕಣ್ಣುಗಳು ಇಲ್ಲವೆಂದರೆ ಜೀವನ ಹೇಗಿರುತ್ತೆ ಅಂತ ನೆನಪಿಕೊಳ್ಳಲು ಭಯವಾಗುತ್ತೆ. ಆದರೆ ಕಣ್ಣು ಇಲ್ಲದ ಅಂಧರು ದೊಡ್ಡ ದೊಡ್ಡ ಹುದ್ದೆಯಲ್ಲಿದು ಸಾಧನೆಮಾಡಿ ಪ್ರಪಂಚವೇ ಬೆರಗಾಗುವಂತೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅಷ್ಟೇಅಲ್ಲದೆ ಅಂಧರಿಗೆ ಸಂಗಿತದ ಮೇಲೆ ಹೆಚ್ಚಿನ ಪ್ರೀತಿ ಇದಕ್ಕೆ ಉದಾಹರಣೆ ಪುಟ್ಟರಾಜು ಗಯಾಯಿಗಳು ಇವರಂತೆಯೇ ಇಂದು ಹಲವಾರು ಅಂಧರು ಸಂಗಿತದಲ್ಲಿ ಹೆಸರು ಮಾಡುತ್ತಿದ್ದಾರೆ. ಇಂತಹ ಪ್ರತಿಮೆಯನ್ನು ಹೊರ ಹಾಕಲು ಜೀ ವಾಹಿನಿ ಸರಿಗಮಪ ಸಂಗೀತ ಕಾರ್ಯಕ್ರಮ ಮುಖ್ಯವೇದಿಕೆಯಾಗಿದೆ.


Also read: ಯಶ್ ಮಗಳಿಗೆ ರೆಬೆಲ್ ಸ್ಟಾರ್ ಸ್ವರ್ಗದಿಂದ ಕಳುಹಿಸಿದ್ರು ಸರ್ಪ್ರೈಸ್ ಗಿಫ್ಟ್; ಇದನ್ನು ನೋಡಿದ್ರೆ ತಿಳಿಯುತ್ತೆ ಅಂಬಿಗೆ ಯಶ್ ಮೇಲೆ ಎಷ್ಟೊಂದು ಪ್ರೀತಿ ಅಂತ…

ಹೌದು ಈ ವೇದಿಕೆ ಬರಿ ಸಂಗೀತದಲ್ಲಿ ಹೆಸರು ಮಾಡಲು ಮತ್ತು ಪ್ರಶಸ್ತಿಯನ್ನು ಕೊಡಲು ಮಾತ್ರ ಸೀಮಿತವಾಗಿಲ್ಲ, ಅಂಧರಿಗೆ ಕಣ್ಣು ನೀಡಿ ಬೆಳಕನ್ನು ನೀಡುತ್ತಿದೆ. ಇದಕ್ಕೆ ಒಂದು ಸಾಕ್ಷಿ, ಸದ್ಯ ನಡೆಯುತ್ತಿರುವ ಸರಿಗಮಪ -ದಲ್ಲಿ ಪ್ರೇಕ್ಷಕರ ಮನಗೆದ್ದ ಋತ್ವಿಕ್ ಗೆ 74ರ ವೃದ್ಧರೊಬ್ಬರು ತಮ್ಮ ಕಣ್ಣುಗಳನ್ನು ದಾನಮಾಡುತ್ತಿದ್ದಾರೆ. ಇವರು ಋತ್ವಿಕ್ ಕಂಠಸಿರಿಗೆ ಮನೋಸೋತು ತನ್ನ ಎರಡು ಕಣ್ಣುಗಳನ್ನ ಅವರಿಗೆ ಹಾಕಲೇಬೇಕು ಅಂತಾ ಹಠಹಿಡದಿದ್ದಾರೆ. ಕನ್ನಡದ ಜೀ ವಾಹಿನಿ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಋತ್ವಿಕ ಸ್ಪರ್ಧಿಯಾಗಿದ್ದು, ದೃಷ್ಟಿ ವಿಕಲ ಚೇತನರಾಗಿದ್ದರೂ ತಮ್ಮ ಅದ್ಭುತ ಕಂಠಸಿರಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಹಾಡುಗಳನ್ನು ಕೇಳುತ್ತ ಅವರ ಅಭಿಮಾನಿಯಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಗ್ರಾಮದ ಸಿದ್ಧಲಿಂಗನಗೌಡ (74), ಕಣ್ಣುಗಳನ್ನ ದಾನ ಮಾಡಲು ಹಠ ಹಿಡಿದಿದ್ದಾರೆ. ಈ ವಿಷಯವನ್ನು ಸಿದ್ಧಲಿಂಗನಗೌಡ ಸಿಕ್ಕ ಸಿಕ್ಕವರಲ್ಲಿ ತನ್ನ ಕಣ್ಣು ದಾನದ ಆಸೆ ಹೊರಹಾಕುತ್ತಿದ್ದಾರೆ.


Also read: ಇನ್ಮುಂದೆ ಮಾತ್ರೆ ಕೊಂಡುಕೊಳ್ಳಲು ಮೆಡಿಕಲ್ ಶಾಪ್-ಗೆ ಹೋಗೋ ಬದಲು ಜನಔಷಧಿ ಕೇಂದ್ರಕ್ಕೆ ಹೋಗಿ, ನೂರಾರು ರುಪಾಯಿ ಇರುವ ಔಷಧಿ ಹತ್ತು ರೂಪಾಯಿಯೊಳಗೆ ಸಿಗುತ್ತೆ!

ಸುದ್ದಿಗಾರರ ಜೊತೆ ಮಾತನಾಡಿದ ಸಿದ್ಧಲಿಂಗನಗೌಡ, ನಾನು ಋತ್ವಿಕ್ ಹಾಡಿಗೆ ಮನಸೋತ್ತಿದ್ದೇನೆ. ನನಗೆ ಯಾರೂ ಇಲ್ಲ. ಈಗ ನನಗೆ 74 ವರ್ಷ. ನಾನು ಸಾಯುವ ಮುನ್ನ ಶ್ರೇಷ್ಠವಾದ ಕೆಲಸ ಮಾಡು ಎಂದು ನಮ್ಮ ಅಪ್ಪ ಹೇಳಿದ್ದಾರೆ. ಅದರಂತೆ ನಾನು ಅಂಧ ಹಾಡುಗಾರ ಋತ್ವಿಕ್ ಗೆ ಕಣ್ಣುದಾನ ಮಾಡಲು ಸಿದ್ಧನಾಗಿದ್ದೇನೆ. ಒಂದು ತಿಂಗಳ ಹಿಂದೆ ನನ್ನ ದೇಹ, ಕಣ್ಣುಗಳನ್ನ ಬಳ್ಳಾರಿ ಸರಕಾರಿ‌ ಆಸ್ಪತ್ರೆಯಲ್ಲಿ ಬರೆದುಕೊಟ್ಟಿದ್ದೇನೆ. ನನ್ನ ಸಾವಿನ ನಂತರ ನನ್ನ ಕಣ್ಣುಗಳನ್ನು ಋತ್ವಿಕ್​ಗೆ ಅಳವಡಿಸಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.


Also read: ಗಂಡು ಮಕ್ಕಳ ವ್ಯಾಮೋಹದಿಂದ ಹರಕೆ ಮಾಡಿಕೊಳ್ಳುವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಒಂದು ನಿಜ ಸಂಗತಿ ಇಲ್ಲಿದೆ ಓದಿ..

ಇಂತಹ ನಿರ್ಧಾರ ಮಾಡಿದ ಸಿದ್ಧಲಿಂಗನಗೌಡರ ಒಳ್ಳೆಯ ಗುಣ ದೇಶವೇ ಮೆಚ್ಚುತ್ತಿದೆ. ಏಕೆಂದರೆ ಪ್ರತಿದಿನ ಸಾಯಿವರ ಸಂಖ್ಯೆ ದೇಶದಲ್ಲಿರುವ ಅಧರಿಗಿಂತ ಎರಡರಷ್ಟಿದೆ. ದೂರದುಷ್ಟಯೆಂದರೆ ಇಷ್ಟೊಂದು ಸಂಖ್ಯೆಯಲ್ಲಿ ಸಾಯಿವ ಜನರ ಕಣ್ಣುಗಳು ಕೂಡ ಸತ್ತು ಹೋಗುತ್ತಿವೆ. ಅದೇ ಕಣ್ಣುಗಳನ್ನು ದಾನಮಾಡಿದರೆ ದೇಶದಲ್ಲಿ ಅಂಧರ ಸಂಖ್ಯೆ ಕಡಿಮೆಯಾಗುತ್ತದೆ. ಇದನ್ನು ತಿಳಿದ ಜನರು ಕಣ್ಣುಗಳನ್ನು ದಾನಮಾಡಲು ಮುಂದೆ ಬಂದರೆ, ತಾವು ಸತ್ತಮೇಲು ನಿಮ್ಮ ಕಣ್ಣುಗಳು ಜೀವಂತವಾಗಿ ಇನ್ನೂಂದು ಜೀವಿಗೆ ಆಧಾರ ವಾಗುತ್ತೇವೆ.
ಒಟ್ಟಾರೆಯಾಗಿ: ಸರಿಗಮಪದಲ್ಲಿ ಹಾಡಿ ಪ್ರಶಸ್ತಿ ಗೆಲ್ಲಲು ಬಂದ ಋತ್ವಿಕ್​ಗೆ ಪ್ರಶಸ್ತಿಗಿಂತ ದೊಡ್ಡ ಆಸ್ತಿಯೇ ಸಿಕ್ಕಿದೆ. ಇಂತಹ ಮಹಾನ ದಾನವನ್ನು ಪ್ರತಿಯೊಬ್ಬರೂ ಮಾಡಿದರೆ ಬದುಕ್ಕಿದ ದಿನಗಳಿಗೊಂದು ಅರ್ಥ ಸಿಗುತ್ತದೆ.