ಕ್ಯಾನ್ಸರ್ ಕಾರಕ ಗುಟ್ಕಾದಿಂದ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಿದ್ದ ಮಾನಿಕಚಂದ್ ಕೊನೆಗೆ ಗಂಟಲು ಕ್ಯಾನ್ಸರ್-ನಿಂದ ಸಾವನಪ್ಪಿದ್ದಾರೆ.. ಕಾಲಾಯ ತಸ್ಮಯ್ ನಮಃ..

0
607

ಮಗಾ: ಅಪ್ಪಾ ಆತ ಸತ್ತನಂತೆ
ಅಪ್ಪಾ: ಯಾರು
ಮಗಾ: ಅದೇ ಅಪ್ಪ ಆತ
ಅಪ್ಪಾ: ಯಾರೋ
ಮಗಾ: ಗುಟ್ಕಾ ಕಂಪನಿಯ ಮಾಲೀಕ ಸತ್ತನಂತೆ
ಅಪ್ಪಾ: ಹೌದಾ
ಮಗ: ಕ್ಯಾನ್ಸರ್​​ನಿಂದ ಸತ್ತನಂತೆ


ಆರ್ ​ಎಂಡಿ ಕಂಪನಿಯ ಓನರ್​​ ರಸಿಕ್‍ಲಾಲ್ ಮಾಣಿಕ್‍ಚಂದ್ ಧರಿವಾಲ್ (80) ಸಾವನಪ್ಪಿದ್ದಾರೆ. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಗಂಟಲು ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ.
ಮಾಹಾರಾಷ್ಟ್ರದ ಶಿರೂರಿನಲ್ಲಿ ಧರಿಲಾಲ್​ ಜನನ. ಇವರ ಪತ್ನಿಯ ತಂದೆ ನಡೆಸುತ್ತಿದ್ದ 20 ಬಿಡಿ ಕಾರ್ಖಾನೆಗಳನ್ನು, ಅನುವಂಶಿಕವಾಗಿ ಪಡೆದಿದ್ದರು. ನಂತರ ಗುಟ್ಕಾ ಕಂಪನಿ ತೆರೆದ್ರು. ಇವರ ವಿರುದ್ಧ 2004ರಲ್ಲಿ ಮುಂಬೈ ಪೊಲೀಸರು ಮಾಹಾರಾಷ್ಟ್ರ ಸಂಘಟಿತ ಅಪರಾಧಗಳ ಕಾಯ್ದೆಯ ಅಡಿ ದೂರು ದಾಖಲಿಸಿದ್ದರು. ಈಗ ಅವರು ಮರಣ ಹೊಂದಿದ್ದರಿಂದ ಅವರ ಮೇಲಿನ ಎಲ್ಲ ದೂರುಗಳು ವಿಚಾರಣೆ ಸ್ಥಗಿತಗೊಳಿಸಲಾಗಿದೆ.

ಅಲ್ಲದೆ ಇವರ ವಿರುದ್ಧ ಕರಾಚಿಯಲ್ಲಿ ಗುಟ್ಕಾ ಉತ್ಪಾದನಾ ಘಟಕ ಸ್ಥಾಪನೆಯ ಆರೋಪ ಇತ್ತು. ಅಲ್ಲದೆ ದೂರು ನೀಡಲಾಗಿತ್ತು. ಇವರು ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಪರ ಕಾರ್ಯ ನಿರ್ವಹಿಸುತ್ತಿರುವ ಕುರಿತು ಆರೋಪವನ್ನು ಮಾಡಲಾಗಿತ್ತು.
ಮಾಹಾರಾಷ್ಟ್ರದಲ್ಲಿ ಗುಟ್ಕಾ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸಲಾಗಿತ್ತು. ಧರೀಲಾಲ ಗುಟ್ಕಾ ಅಲ್ಲದೆ ಬೇರೆ ಬೇರೆ ವ್ಯವಹಾರ ನಡೆಸುತ್ತಿದ್ದರು. ಧರಿವಾಲ್ ಫೌಂಡೇಶನ್ ಮೂಲಕ, ಆರೋಗ್ಯ, ಪರಿಸರ ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಪಾರ ಧನ ಸಹಾಯವನ್ನು ಮಾಡಿದ್ದರು.