ಕನ್ನಡದ ಸ್ಟಾರ್ ನಟನ ಹತ್ಯಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ; ಯಾವ ನಟನನ್ನು ಕೊಲಲ್ಲು ಸಂಚು ನಡೆದಿತ್ತು ಎಂದು ಬಾಯಿಬಿಟ್ಟ ಆರೋಪಿಗಳು..

0
508

ಕೆಲವು ದಿನಗಳಿಂದ ಕನ್ನಡ ಚಿತ್ರರಂಗವನ್ನೇ ಬೆಚ್ಚಿಬಿಳಿಸಿದ್ದ ಸ್ಟಾರ್ ನಟನ ಹತ್ಯ ಸಂಚು ಪ್ರಕರಣ. ಮತ್ತೆ ತಿರುವು ಪಡೆದುಕೊಂಡಿದೆ. ಈ ಸಂಬಂಧ CCB ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳನ್ನು ಬಂಧಿಸಿದ್ದಾರೆ. ಮುಖ್ಯವಾಗಿ ಸ್ಲಂ ಭರತ ನಟನನ್ನು ಮುಗಿಸಲು ಸುಪಾರಿ ಪಡೆದಿದ್ದ ಅದರಂತೆ ಈ ನಾಲ್ವರು ಆರೋಪಿಗಳು ಸಂಚು ನಡೆಸಿದ್ದರು ಎಂದು ಸಿಸಿಬಿ ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ನಟನೊಬ್ಬನನ್ನ ಹತ್ಯೆ ಮಾಡಲು ಸಿದ್ಧತೆ ನಡೆಸಿ ಬಂದಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

Also read: ರಾಕಿಂಗ್ ಸ್ಟಾರ್ ಯಶ್ ಬರಿ ಸಿನಿಮಾದಲ್ಲಿ ಮಾತ್ರವಲ್ಲ ರೈತರ ಪಾಲಿಗೆ ಆಧುನಿಕ ‘ಭಗೀರಥ’..!!

ಸ್ಟಾರ್ ನಟನ ಹತ್ಯಗೆ ಸಂಚು?

ಪೊಲೀಸರಿಗೆ ಜೀವ ಬೆದರಿಕೆ ಕುರಿತು ಈ ನಾಯಕ ನಟ ಸಹ ಲಿಖಿತ ದೂರು ಕೊಟ್ಟಿದ್ದರು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಸಿಗದ ಕಾರಣ ಪ್ರಕರಣವು ತನಿಖೆ ನಡೆಯದೆ ತಣ್ಣಗಾಗಿತ್ತು. ನಗರದಲ್ಲಿ ಫೆ.18 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್ ಕುಮಾರ್ ಅವರು, ನಟನ ಹತ್ಯೆಗೆ ರೌಡಿಶೀಟರ್ ಭರತ ಸುಪಾರಿ ಪಡೆದಿರುವ ಕುರಿತು ವಿಚಾರಣೆ ನಡೆಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ. ನಂತರ ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ ಸ್ಥಳದಲ್ಲಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳೆಲ್ಲ ಸ್ಲಂ ಭರತನ ಸಹಚರರು ಎಂದು ಗುರುತಿಸಲಾಗಿದೆ. ಇವರಲ್ಲಿ ವಿಚಾರಣೆ ನಡೆಸಿದ್ದಾಗ ನಿತೇಶ್ ಎಂಬುವನ್ನು ಸ್ಪೋಟಕವಾದ ಮಾಹಿತಿ ಬಾಯಿಬಿಟ್ಟಿದ್ದು ಆ ನಟ ಯಶ್ ಎಂದು ಹೇಳಿದ್ದಾನೆ.

Also read: ಯಶ್ ಗೆ tong ಕೊಡಲು ನೆಡೆಯಿತು ಹೈಡ್ರಾಮಾ…!! ಓದಿ ಈ ಎಂಟು ವಿಚಾರಗಳನ್ನು

ರಾಕಿಂಗ್ ಸ್ಟಾರ್ ಯಶ್ ಹತ್ಯಗೆ ಸಂಚು?

ಹೌದು ಸಿಸಿಬಿ ಪೊಲೀಸ್ ನಟನ ಹತ್ಯಯ ಬಗ್ಗೆ ಸುಳಿವು ತಿಳಿದ ನಂತರ ಸ್ಲಂ ಭರತನನ್ನು ಬೆನ್ನುಹತ್ತಿದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ ಆರೋಪಿ ನಿತೇಶ್ ಎನ್ನುವನು ಹೇಳುವ ಪ್ರಕಾರ ಕೆಜಿಫ್ ನಟ ಯಶ್ ಅವರನ್ನು ಹತ್ಯ ಮಾಡಲು ಸುಪಾರಿ ನೀಡಿದ್ದಾರೆ ಅದನ್ನು ನೀಡಿದ್ದು ಒಬ್ಬ ನಟ ಎಂದು ಬಾಯಿಬಿಟ್ಟಿದ್ದಾನೆ. ಯಾರು ಸುಪಾರಿ ಕೊಟ್ಟಿದು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕಿಡಿ ಹತ್ತುವ ಲಕ್ಷಣಗಳು ಕೇಳಿ ಬರುತ್ತಿವೆ.

ಈ ಪ್ರಕರಣ ಹೊರಬಿದಿದ್ದು ಹೇಗೆ?

ಮೊದಲಿಗೆ ಸ್ಲಂ ಭರತ ಮತ್ತು ಶೇಪಿ ಎನ್ನುವರಿಗೆ ಯಶ್ ಕೊಲ್ಲಲು ಸುಪಾರಿ ಸಿಕ್ಕಿರುತ್ತೆ. ಆ ವಿಚಾರವಾಗಿ ಫ್ಲಾನ್ ನಡೆಯುತ್ತಿರುತ್ತದೆ. ಈ ವೇಳೆ ಸ್ಲಂ ಭರತ ಮತ್ತು ಶೇಪಿ ಎನ್ನುವರು ಬಾರಿನಲ್ಲಿ ಕುಳಿತು ಕುಡಿಯಿವ ವೇಳೆ ಸಂಭಾಷಣೆಯಲ್ಲಿ ತೊಡಗುತ್ತಾರೆ. ಅದರಂತೆ ಒಬ್ಬ ಕನ್ನಡದ ಸ್ಟಾರ್ ಅವರನ್ನು ಹತ್ಯ ಮಾಡಲು ಸುಫಾರಿ ಸಿಕ್ಕಿದೆ ಎಂದು ಮಾತನಾಡುತ್ತಾರೆ. ಅದೇ ಸಮಯಕ್ಕೆ ಸಿಸಿಬಿ ಪೊಲೀಸ್-ರ ಅತ್ಮಿದಾರ ಒಬ್ಬ ಪೊಲೀಸ್-ರಿಗೆ ಮಾಹಿತಿ ನೀಡುತ್ತಾನೆ. ಅದನ್ನೇ ಬೆನ್ನೆಟ್ಟಿದ ಸಿಸಿಬಿ ತಂಡ ಸ್ಲಂ ಭರತನನ್ನು ಹಿಡಿಯಲು ಹುಡುಕಾಟ ನಡೆಸುತ್ತಾರೆ. ಈ ವೇಳೆ ಆರೋಪಿಯನ್ನು ಹಿಡಿಯಲು ಹೋದಾಗ ಪೋಲೀಸರ ಮೇಲೆ ಹಲ್ಯ ಮಾಡಲು ಮುಂದಾಗುತ್ತಾನೆ. ಪೊಲೀಸರು ಕಾಲಿಗೆ ಗುಂಡು ಹೊಡೆದು ಭರತನನ್ನು ಬಂಧಿಸುತ್ತಾರೆ. ಆದರೆ ಇವನಿಂದ ಯಾವುದೇ ಮಾಹಿತಿ ಲಭ್ಯವಾಗುವುದಿಲ್ಲ.

Also read: ರಾಧಿಕಾಗೆ ಯಶ್ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?

ಸಂಪೂರ್ಣ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ನಂತರ ಮಾರ್ಚ್ 7 ನೇ ತಾರೀಕು ಬಿಡಿಎ ಕಛೇರಿಯ ಬಳಿ ನಾಲ್ವರನ್ನು ಬಂಧಿಸುತ್ತಾರೆ. ಅವರು ನಿತೇಶ್, ನಿತ್ಯಾನಂದ, ಮದುಸುಧನ ಸೇರಿದಂತೆ ನಾಲ್ಕು ಜನರನ್ನು ಬಂದಿಸುತ್ತಾರೆ. ಈ ಮೊದಲೇ ಭರತ ಹೇಳಿದ ರೀತಿಯಲ್ಲಿ ನಾಲ್ವರು ಆರೋಪಿಗಳಿಗೆ ವಿಚಾರಣೆ ನಡೆಸುತ್ತಾರೆ. ಈ ವೇಳೆ ನಿತೇಶ್ ಈ ಕೆಲಸವನ್ನು ಸ್ಲಂ ಭರತ್ ಮತ್ತು ಶೇಪಿ ಒಪ್ಪಿಸಿದರು. ಕನ್ನಡ ನಟ ಯಶ್ ಅವರನ್ನು ಕೊಲ್ಲಲು ಸ್ಕೆಚ್ ನೀಡಿದರು ಎಂದು ಹೇಳುತ್ತಾನೆ. ಈ ಮಾಹಿತಿಯಂತೆ ಭರತ, ಶೇಪಿಗೆ ಸುಪಾರಿ ಕೊಟ್ಟವರು ಯಾರು ಎನ್ನುವದು ಸಿಸಿಬಿ ಪೊಲೀಸ್-ರರಿಗೆ ದೊಡ್ಡ ತಲೆನೋವು ಆಗಿದ್ದು. ಅದಕ್ಕಾಗಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ. ಸೋಮವಾರ ಬಂಧಿತ ಭರತ ಮತ್ತು ಶೆಪಿಯನ್ನು ಕೋರ್ಟ್- ನಲ್ಲಿ ವಿಚಾರಣೆ ಮಾಡಿದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ.