ಭಾರತೀಯ ರೈಲ್ವೆ (RRB) 1.3 ಲಕ್ಷ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
1544

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಭಾರತೀಯ ರೈಲ್ವೆ (RRB) 1.3 ಲಕ್ಷ ನಾನ್ – ಟೆಕ್ನಿಕಲ್ ಪಾಪುಲರ್ ಕ್ಯಾಟಗರೀಸ್, ಪ್ಯಾರಾ- ಮೆಡಿಕಲ್ ಸ್ಟಾಫ್, ಮಿನಿಸ್ಟರಿಯಲ್ ಮತ್ತು ಐಸೋಲೇಟೆಡ್ ಕ್ಯಾಟಗರೀಸ್, ಲೆವೆಲ್ 1ಹುದ್ದೆಗಳನನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು February 28, 2019 ರಿಂದ ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕವನ್ನು ಇನ್ನು ತಿಳಿಸಿಲ್ಲ.

Also read: ಕರ್ನಾಟಕ ಲೋಕಸೇವಾ ಆಯೋಗ 713 ಪ್ರಥಮ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು: (Name Of The Posts): NTPC, Para-Medical Staff, Ministerial and Isolated & Level -1

ಸಂಸ್ಥೆ (Organisation): ಭಾರತೀಯ ರೈಲ್ವೆ

ವಿದ್ಯಾರ್ಹತೆ (Educational Qualification): ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಗಳಿದ್ದು ಆರ್ ಆರ್ ಬಿಯ ಅಧಿಕೃತ ವೆಬ್ ಸೈಟ್ ನಲ್ಲಿ ಒಮ್ಮೆ ಚೆಕ್ ಮಾಡಿ ನಂತರ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯ ಅನ್ವಯ ವಯೋಮಿತಿ ಹೊಂದಿರಬೇಕು.ವಯೋಮಿತಿಯ ಸಡಿಲಿಕೆ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದೆಲ್ಲೆಡೆ ನೇಮಕ ಮಾಡಲಾಗುವುದು.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು ಎಲ್ಲಾ ಅಭ್ಯರ್ಥಿಗಳೂ 500/-ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಅಂಗವಿಕಲ/ಮಾಜಿಸೈನಿಕ / ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಶುಲ್ಕವನ್ನು ಪಾವತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:

STEP 1: ಆರ್ ಆರ್ ಬಿಯ ಅಧಿಕೃತ ವೆಬ್ ಸೈಟ್ http://indianrailways.gov.in/ ಗೆ ಹೋಗಿ
STEP 2: ಈ ಹುದ್ದೆಗಳ ಬಗೆಗೆ ನೀಡಲಾದ ಮಾಹಿತಿಯನ್ನು ಹುಡುಕಿ
STEP 3: ಈ ಹುದ್ದೆಗಳ ಬಗೆಗೆ ಕೇಳಲಾಗಿರುವ ಅರ್ಹತೆಯನ್ನು ಒಮ್ಮೆ ಗಮನಿಸಿ
STEP 4: ನಂತರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಭರ್ತಿ ಮಾಡಿ ನಂತರ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ
STEP 5: ಎಲ್ಲವೂ ಮುಗಿದ ನಂತರ submit button ಮೇಲೆ ಕ್ಲಿಕ್ ಮಾಡಿ ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಿ.

ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ http://rrbbnc.gov.in/ ಅನ್ನು ಬಳಸಿ

ಹೆಚ್ಚಿನ ಮಾಹಿತಿಗಾಗಿ: http://indianrailways.gov.in/ ಕ್ಲಿಕ್ ಮಾಡಿ.