ರಾಜಕಾಲುವೆ ಪುನರುಜ್ಜೀವನಕ್ಕೆ ೧೦೦೦ ಕೋಟಿ ಖರ್ಚು ಮಾಡಿತ್ತು, ಆದರೂ ಮನೆಗಳಿಗೆ ನೀರು ನುಗ್ಗುವುದು ತಪ್ಪಲಿಲ್ಲ…!!

0
489

ಬೆಂಗಳೂರಿನ ವಾಸಿಗಳಿಗೆ ಮಳೆ ರಗಳೆಯುಂಟುಮಾಡಿದೆ. ಮಳೆಯಾದ್ರೆ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ನೀರು ತುಂಬುತ್ತದೆ. ಅಷ್ಟೇ ಅಲ್ಲ ತಗ್ಗು ಪ್ರದೇಶಗಳಿಗೆ ನೀರು ಆವರಿಸುತ್ತದೆ. ಇದು ಬೆಂಗಳೂರು ವಾಸಿಗಳ ನಿದ್ದೆ ಗೆಡಿಸಿದೆ. ಈ ಪರಿಸ್ಥಿತಿಯನ್ನು ತಪ್ಪಿಸಲು ಸರ್ಕಾರ ಸುಮಾರು ೮೦೦ ಕೋಟಿ ಹಣ ನೀಡಬೇಕು. ಅಂದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ತಿಳಿಸಿದ್ದಾರೆ.

source: thenewsminute.com

ಅಲ್ಲದೆ ಪಾಲಿಕೆ ಈಗಿನ ಸಮಸ್ಯೆಯಿಂದ ಹೊರ ಬರಲು ಮುಂದಿನ ದಿನಗಳಲ್ಲಿ ಸೂಕ್ಯತ ಪರಿಹಾರವನ್ನು ಹೆಣೆಯಲಾಗುವುದು ಎಂದು ತಿಳಿದು ಬಂದಿದೆ. ಇನ್ನು ಮಳೆ ಬರುವ ಮುನ್ನವೆ ಪಾಲಿಕೆಯು ಸಹ ಮುನ್ನೆಚರಿಕೆ ಕ್ರಮಕೈಗೊಂಡಿಲ್ಲ. ಒಳಚರಂಡಿಯನ್ನು ಶುಚಿ ಮಾಡಿಸುವುದಾಗಲಿ, ನೀರು ನಿಲ್ಲದಂತೆ ನೋಡಿಕೊಳ್ಳುವದಾಗಲಿ ಯಾವ ಕ್ರಮ ಕೈಗೊಂಡಿಲ್ಲ.

source: thenewsminute.com

ಇನ್ನು ಈ ಬಗ್ಗೆ ೨೦೧೫ರ ಜೂನ್‌ನಲ್ಲಿ ಎಸ್‌ಡಬ್ಲ್ಯೂಡಿಗೆ ೧೦೦೦ ಕೋಟಿ ಹಣವನ್ನು ನೀಡುವದಾಗಿ ತಿಳಿಸಿತ್ತು. ಆದ್ರಂತೆ ೮೦೦ ಕೋಟಿ ಹಣ ಬಿಡುಗಡೆ ಮಾಡಿತ್ತು. ಸಂಪೂರ್ಣ ಮಳೆ ನೀರು ಗಾಲುವೆಗಳನ್ನು ಅಭಿವೃದ್ಧಿ ಪಡಿಸಲು ಮುಂದಿನ ೨ ವರ್ಷ ಸರ್ಕಾರ ಹಣ ನೀಡಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೇ ೨೦೦೬ ರಿಂದ ೧೩ ವರೆಗೆ ೬೬೪.೨೧ ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ೨೦೧೩ ರಿಂದ ೧೭ ರ ವರೆಗೆ ೯೯೧ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಸುಮಾರು ೨೦೪ ಕಿ.ಮೀ ನೀರು ಹರಿದು ಹೋಗುವ ಕಾಲುವೆ ದುರಸ್ಥಿಗೊಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಒಳಚರಂಡಿ ೮೪೦ ಕಿ.ಮಿ ಉದ್ದವಿದ್ದು, ಮಳೆ ಬಂದು ರಸ್ತೆಯಲ್ಲಿ ನಿಂತಾಗ ಚರಂಡಿಗೆ ಹೋಗುತ್ತಿಲ್ಲ ಪರಿಣಾಮ. ಸುಮಾರು ೪೧೫.೫ ಕಿಲೊ ಮೀಟರ್ ಪ್ರೈಮರಿ ಹಾಗೂ ೪೨೪.೫ ಕಿ.ಮಿ ಸೆಕೆಂಡ್ರಿ ಒಳಚರಂಡಿಗಳಿವೆ. ಪಾಲಿಕೆ ಒಳಚರಂಡಿ ಕಾಮಗಾರಿಯನ್ನು ಈ ವರ್ಷ ಆರಂಭಿಸುವುದಾಗಿ ತಿಳಿಸಿದೆ.

source: thenewsminute.com

ಇನ್ನು ರಾಜ್ಯಧಾನಿಯ ನಿವಾಸಿಗಳನ್ನು ಕಂಗೆಡಿಸಿ ಮತ್ತೊಂದು ಸಮಸ್ಯೆ ಕಸದ್ದಾಗಿದೆ. ಈ ಸಮಸ್ಯೆಗೆ ಪರಿಹಾರಕ್ಕಾಗಿ ಬಿಬಿಎಂಪಿ ಪ್ಲಾನ್ ಮಾಡಿಕೊಂಡಿದೆ. ಇದರಂತೆ ಕಸದಿಂದ ವಿದ್ಯುತ್ ಉತ್ಪಾದನೆಗಾಗಿ, ನಾಲ್ಕೈದು ಕಂಪನಿಗಳ ಜೊತೆ ಮಾತುಕತೆ ನಡೆದಿದೆ. ಕೆಲವೇ ದಿನಗಳಲ್ಲಿ ಕಂಪನಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.

ಮಾಹಿತಿ ಕೃಪೆ: the news minute