ಡಿ.ರೂಪಾ ಮೇಲೆ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್….!

0
927

ಡಿಐಜಿ ಡಿ.ರೂಪ ಅವರಿಗೆ ಕಾರಾಗೃಹ ಡಿಜಿಪಿ ಸತ್ಯನಾರಾಯಣ್ ರಾವ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಮೂರು ದಿನಗಳಲ್ಲಿ ಬೇಷಾರತ್ ಕ್ಷಮೆ ಕೇಳದಿದ್ದರೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟಿಸ್’ನಲ್ಲಿ ಎಚ್ಚರಿಕೆ ನೀಡಲಾಗಿದೆ. ಹಿರಿಯ ವಕೀಲ ರಮೇಶ್ ಪುತ್ತಿಗೆ ಅವರ ಮೂಲಕ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Rs 50 Crore Defamation

ಸತ್ಯನಾರಾಯಣ್ ಅವರು ಶಶಿಕಲಾ ಹಾಗೂ ಮತ್ತು ಹಲವು ಕೈದಿಗಳಿಗೆ ಲಂಚ ಪಡೆದು ರಾಜಾಥಿತ್ಯ ನೀಡಿದ್ದರು ಎಂದು ಡಿ.ರೂಪ ಆರೋಪಿಸುವುದರ ಜೊತೆಗೆ ಮೇಲಧಿಕಾರಿಗಳಿಗೂ ಪತ್ರ ಬರೆದಿದ್ದರು. ಇದು ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ಆರೋಪಕ್ಕೆ ಪೂರಕವೆಂಬಂತೆ ದೃಶ್ಯಗಳು ಹಾಗೂ ಭಾವಚಿತ್ರಗಳು ಬಿಡುಗಡೆಯಾಗಿದ್ದವು. ತದ ನಂತರ ರೂಪ ಅವರನ್ನು ಟ್ರಾಫಿಕ್ ಇಲಾಖೆಯ ಆಯುಕ್ತರನ್ನಾಗಿ ಹಾಗೂ ಸತ್ಯನಾರಾಯಣ್ ಅವರನ್ನು ರಜೆಯ ಮೇಲೆ ತೆರಳುವಂತೆ ಸರ್ಕಾರ ಆದೇಶ ಮಾಡಿತ್ತು.

Rs 50 Crore Defamation-2

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರೂಪಾ ಅವರು, ನನ್ನ ವಿರುದ್ಧ ಯಾವುದೇ ಮಾನನಷ್ಟ ಮೊಕದ್ದಮೆ ದಾಖಲಾಗಿಲ್ಲ ಎಂದ ಮೇಲೆ ನಾನೇಕೆ ಕ್ಷಮೆಯಾಚಿಸಬೇಕೆಂದು ಹೇಳುತ್ತಿದ್ದಾರೆ.

Rs 50 Crore Defamation-3
source:Kannada Prabha

ರಾವ್ ಅವರ ನೀಡಿರುವ ನೋಟಿಸ್’ನ್ನು ನೋಡಿದ್ದೇನೆ. ನಾನು ನನ್ನ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೇನೆ. ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ಯಲ್ಲಿ ಪ್ರಕರಣ ದಾಖಲಾಗಿದೆ. ಅದರ ಕಡೆಗೂ ಅವರು ಗಮನ ಕೊಡಬೇಕಿದೆ. ಚುನಾವಣಾ ಆಯೋಗ ಭ್ರಷ್ಟಾಚಾರ ಪ್ರಕರಣ ಸಂಬಂಧ ಆಸ್ಟ್ರೇಲಿಯಾ ಪ್ರಕಾಶ್ ಅವರು ದೆಹಲಿ ಪೊಲೀಸರ ಬಳಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರಕಾಶ ಅವರಿಗೆ ಜೈಲಿನ ಅಧಿಕಾರಿಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ನಾನು ಮಾಡಿದ್ದ ಭ್ರಷ್ಟಾಚಾರ ಆರೋಪಕ್ಕೆ ಇದು ಬೆಳಕು ಚೆಲ್ಲಿದೆ. ತನಿಖೆ ಸಂದರ್ಭದಲ್ಲಿ ಎಸಿಬಿ ಇದನ್ನೂ ಕೂಡ ಪರಿಗಣಿಸಬೇಕು ಎಂದು ಹೇಳಿದ್ದಾರೆ.