ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಈವರೆಗೆ ಸಿಕ್ಕಿರೋ ಹಣ 3,274 ಕೋಟಿ ರೂ. ಆಯೋಗದ ಕಣ್ ತಪ್ಪಿಸಿ ನಡೆದಿರೋ ಹಣ ಹಂಚಿಕೆ ಇನ್ನೆಷ್ಟೋ??

0
215

ದೇಶದಲ್ಲಿ ಬಿರುಸಿನಿಂದ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ 4ನೇ ಹಂತದ ಮತದಾನದ ವೇಳೆ ಅಪಾರ ಪ್ರಮಾಣದ ನಗದು, ಮದ್ಯ ಮತ್ತು ಬೆಲೆ ಬಾಳುವ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದು, ಒಟ್ಟು 3274 ಕೋಟಿ ರೂ. ಮೌಲ್ಯದ ಅಕ್ರಮ ಹಣ, ಅಕ್ರಮ ಮದ್ಯ, ಮತದಾರರಿಗೆ ನೀಡುವ ನಗದು, ಚಿನ್ನಾಭರಣ, ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.

Also read: ಜಿಲ್ಲಾವಾರು ಎಸ್.ಎಸ್..ಎಲ್.ಸಿ ಫಲಿತಾಂಶದಲ್ಲಿ ಕಳೆದ ಬಾರಿ 31ನೇ ಸ್ಥಾನದಲ್ಲಿದ್ದ ಹಾಸನವನ್ನು ಮೊದಲನೇ ಸ್ಥಾನಕ್ಕೆ ಬಂದ ಕಥೆ ಬಿಚ್ಚಿಟ್ಟ IAS ಅಧಿಕಾರಿ ರೋಹಿಣಿ ಸಿಂಧೂರಿ!!

ಹೌದು ದೇಶದಲ್ಲಿ 7 ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ ನಾಲ್ಕನೆ ಹಂತದ ಮತದಾನದ ಪ್ರಕ್ರಿಯೆ ಮುಗಿದಿದ್ದು. 785.26 ಕೋಟಿ ರೂ ನಗದು, 249.038 ಕೋಟಿ ರೂ. ಮೌಲ್ಯದ ಮದ್ಯ, 1214.46 ಕೋಟಿ ರೂ. ಬೆಲೆಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಅಲ್ಲದೇ 972.253 ಕೋಟಿ ಮೌಲ್ಯದ ಚಿನ್ನ ಮತ್ತು ಅಮೂಲ್ಯ ಸಾಮಗ್ರಿಗಳು 53.167 ಕೋಟಿ ರೂ. ಒಟ್ಟು 3274.18 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಎಂದು ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಆಯೋಗದ ಒಟ್ಟು 97 ವೀಕ್ಷಕರು 72 ಲೋಕಭಾ ಕ್ಷೇತ್ರದಲ್ಲಿ, 42 ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದೆ ಈ ಪ್ರಕಾರ ಎಂದು ಇಸಿ ಹೇಳಿದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ಸೂಚನೆಗಳನ್ನು ಜಾರಿಗೆ ತರಲು ಮತ್ತು ಅಕ್ರಮ ಹಣ, ಕಾನೂನುಬಾಹಿರ ಮದ್ಯ, ಔಷಧಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳನ್ನು ನೇಮಿಸಲಾಯಿತು ಎಂದು ತಿಳಿಸಿದೆ.

Also read: ರಮ್ಯಾ ನಂತರ ಸಿನೆಮದವರು ಟ್ರೋಲ್ ಆದ ಸಾಲಿಗೆ ಸೇರಿದ ಜಗ್ಗೇಶ್, ಕಾರಣ ಏನು ಗೊತ್ತಾ?

ಚುನಾವಣಾ ಸಮಯದಲ್ಲಿ ಹಣದ ಶಕ್ತಿಯನ್ನು ದುರ್ಬಳಕೆ ಮಾಡುವ ಸಲುವಾಗಿ ANI ವರದಿ ಮಾಡಿದೆ, ಪ್ರತಿಯೊಂದು ಸೂಕ್ಷ್ಮ ಕ್ಷೇತ್ರವು ಎರಡು ಖರ್ಚು ವೀಕ್ಷಕರನ್ನು ಹೊಂದಿರುತ್ತದೆ ಎಂದು ಆಯೋಗವು ತಿಳಿಸಿತ್ತು. ಕೆಲವೊಂದು ದೊಡ್ಡ ಮತ್ತು ಹಿಂದುಳಿದ ಕ್ಷೇತ್ರಗಳಲ್ಲಿ ಮತ್ತು ಕಷ್ಟ ಭೂಪ್ರದೇಶ ಹೊಂದಿರುವ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ನೇಮಿಸಲಾಗಿದೆ, ಇದರಿಂದಾಗಿ ಉತ್ತಮ ಗೋಚರತೆ ಮತ್ತು ಲಭ್ಯತೆ ಇರುತ್ತದೆ.

Also read: ಮಕ್ಕಳ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಜನಪ್ರಿಯವಾಗಿರುವ ಜಾನ್ಸನ್ ಬೇಬಿ ಶಂಪೂ ಮಕ್ಕಳಿಗೆ ಹಾನಿಕಾರಕ ಎಂದು ರದ್ದಾಗಿದೆ, ಇದು ಇನ್ನೂ ನಿಮ್ಮ ಮನೆಯಲ್ಲಿದ್ದರೆ ಬಿಸಾಡಿ!!

ಫ್ಲೈಯಿಂಗ್ ಸ್ಕ್ವಾಡ್ಸ್, ಸ್ಥಾಯೀ ಕಣ್ಗಾವಲು ತಂಡಗಳು ಮತ್ತು ಸಂಸತ್ ಕ್ಷೇತ್ರದ ಎಲ್ಲಾ ಕ್ಷೇತ್ರಗಳಲ್ಲಿ ವೀಡಿಯೊ ಕಣ್ಗಾವಲು ತಂಡಗಳ ನೇಮಕ ಮಾಡಲಾಗಿದೆ. ಅಸ್ಸಾಂನಿಂದ ಹಿಡಿದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತನಕ ಒಟ್ಟು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಅಂತು ಹಣ, ಮದ್ಯ, ಮಾದಕ ವಸ್ತು ಮತ್ತು ಉಡುಗೊರೆಗಳನ್ನು ನೀಡಿ ಮತದಾರರನ್ನು ಓಲೈಸಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಯತ್ನಿಸಿದ್ದರು. ಇವುಗಳನ್ನು ವಶಪಡಿಸಿಕೊಂಡು ಅನೇಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಏಳು ಹಂತಗಳ ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ.