ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಸರ್ಕಾರ ಅಧಿಕೃತ ಪತ್ರಕೊಟ್ಟರೆ ನಮ್ಮ ಪ್ಲ್ಯಾನ್ ಪ್ರಕಾರ 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುತ್ತೇವೆ ಎಂದ ಸುಧಾಮೂರ್ತಿ.!

0
326

ಸರಳತೆಗೆ ಹೆಸರುವಾಸಿಯಾದ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತರಿಗೆ 10 ಕೋಟಿ ರೂ. ನೆರವನ್ನು ನೀಡಿದ್ದರು ಅದರಂತೆ. ಸುಧಾಮೂರ್ತಿ ಅವರು ಪ್ರವಾಹಕ್ಕೊಳಗಾದ ಜಿಲ್ಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಸರ್ಕಾರ ಭೂಮಿ ತೋರಿಸಿದರೆ 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ.

source: livemint.com

ಸುಧಾಮೂರ್ತಿ ಅವರಿಂದ 10 ಲಕ್ಷದ ಮನೆ?

ಹೌದು ಕರ್ನಾಟಕ ಸರ್ಕಾರ ಭೂಮಿ ನೀಡಿದರೆ ಇನ್ಫೋಸಿಸ್ ವತಿಯಿಂದ ಸಂತ್ರಸ್ತರ ಕಟ್ಟಿಕೊಡುವುದಾಗಿ ಹೇಳಿದ ಮಾತೃಹೃದಯೇ ಸುಧಾಮೂರ್ತಿ. ಸರ್ಕಾರ ಜಾಗ ತೋರಿಸಿದರೆ ನಾವು ಮನೆ ಕಟ್ಟಿ ಕೊಡುತ್ತೇವೆ. ಒಂದು ಮನೆಗೆ ಸುಮಾರು 10 ಲಕ್ಷ ರೂ. ಖರ್ಚು ಬರುತ್ತದೆ. ಆದ್ದರಿಂದ ಸರ್ಕಾರ ಈ ಜಾಗ ಇವರದ್ದು ಎಂದು ತೋರಿಸಿದರೆ ನಾವು ಕಟ್ಟಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು ನೆರೆ ಸಂತ್ರಸ್ತರಿಗೆ ಸರ್ಕಾರ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಈಗಾಗಲೇ ನಾವು ಸುಮಾರು 5 ಕೋಟಿ ರೂ. ಸಾಮಾಗ್ರಿಗಳನ್ನು ಕರ್ನಾಟಕದಾದ್ಯಂತ ವಿತರಿಸಿದ್ದೇವೆ. ಎಂದು ಹೇಳಿದ್ದಾರೆ.

ಪ್ರವಾಹ ರಾಜ್ಯದಲ್ಲಿ ಬಾರಿ ಅನಾಹುತ ಮಾಡಿದ್ದು. ಜನರು ಎಲ್ಲವನ್ನು ಕಳೆದುಕೊಂಡಿದ್ದು, ಹೀಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಸರ್ಕಾರ ಎಷ್ಟು ಸೈಟ್ ಕೊಡುತ್ತದೋ ಅದರ ಮೇಲೆ ಮನೆ ಕಟ್ಟುತ್ತೇವೆ. ಸರ್ಕಾರ ಈ ಜಾಗ ಇವರದ್ದೇ ಎಂದು ಹೇಳಿದ ಮೇಲೆ ಮನೆ ಕಟ್ಟುತ್ತೇವೆ. ನಾವು ಮನೆ ಕಟ್ಟಿದ ನಂತರ ಬೇಡ ಎಂದರೆ ಕಷ್ಟವಾಗುತ್ತದೆ. ಅದೇ ರೀತಿ ಸಂತ್ರಸ್ತರೂ ಕೂಡ ಈ ಜಾಗ ನಮ್ಮದು, ಈ ಮನೆಯಲ್ಲಿ ನಾವು ಇರುತ್ತೇವೆ ಎಂದು ಪತ್ರವೊಂದನ್ನು ಕೊಡಬೇಕು. ಇಲ್ಲವೆಂದರೆ ಎಷ್ಟೋ ಜನರು ನಾವು ಮನೆ ಕಟ್ಟಿದೆ ಮೇಲೆ ಇಲ್ಲಿ ಇರಲ್ಲ ಎಂದು ಹೇಳುತ್ತಾರೆ.

source: worldtvnews.co.in

ಅದಕ್ಕಾಗಿ ಸರ್ಕಾರ ಅಧಿಕೃತ ಪತ್ರಕೊಟ್ಟರೆ ನಮ್ಮ ಪ್ಲ್ಯಾನ್ ಪ್ರಕಾರ ಮಾಡುತ್ತೇವೆ. ನಮ್ಮ ಗುತ್ತಿಗೆದಾರರೇ ಮನೆ ಕಟ್ಟುತ್ತಾರೆ. 10 ಕೋಟಿಗೆ 100 ಮನೆ ಕಟ್ಟಬಹುದು. ಅದೇ ರೀತಿ ಇನ್ನೂ 10 ಕೋಟಿ ಕೊಟ್ಟರೆ 200 ಮನೆ ನಿರ್ಮಾಣವಾಗುತ್ತದೆ ಎಂದು ಸುಧಾಮೂರ್ತಿ ಹೇಳಿದ್ದಾರೆ. ಇವರ ಕೊಡುಗೆ ರಾಜ್ಯದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಳೆದ ವರ್ಷ ಕೂಡ ಕೊಡಗಿನ ಜನರಿಗೆ ನೆರವು ನೀಡಿದ ಇವರು ಸರ್ಕಾರ ಮಾಡುವ ಯಾವುದೇ ಕೆಲಸದಲ್ಲಿ ನಾವು ಕೈಜೋಡಿಸುವುದು ನಮ್ಮ ಕೆಲಸವಾಗಿದೆ, ನಮಗೆ ಸಮಾಜದಿಂದ ಸಿಕ್ಕಿದ ಹಣ ಮತ್ತೆ ಸಮಾಜಕ್ಕೆ ಹೋಗಬೇಕು. ಹೀಗಾಗಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರ ಪುನರ್ವಸತಿಗೆ ಸರ್ಕಾರ ಸ್ಥಳ ಗುರುತಿಸಿದರೆ ಇನ್ಫೋಸಿಸ್ ವತಿಯಿಂದ 25 ಕೋಟಿ ರೂಪಾಯಿ ವೆಚ್ಚದಲ್ಲಿ ವಸತಿ ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದರು. ಇದನ್ನು ನಾನು ಕೊಡುಗೆ ಎಂದು ಭಾವಿಸದೆ ಕರ್ತವ್ಯ ಎಂದು ತಿಳಿಯುತ್ತೇನೆ ಎಂದು ಹೇಳಿದರು. ಇ ವರ್ಷವೂ ಕೂಡ ಪ್ರವಾಹಕ್ಕೆ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನೇರವಾಗಿದ್ದಾರೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..