ರಾಷ್ಟ್ರಪತಿ ವಿರುದ್ಧವೇ ದೂರು: ತಬ್ಬಿಬ್ಬಾದ ಸುಪ್ರೀಂಕೋರ್ಟ್

0
2118

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರುದ್ಧವೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಂದಿದ್ದು ನೋಡಿ ಸುಪ್ರೀಂಕೋರ್ಟ್ ನ್ಯಾಯಾಧೀಶರೇ ತಬ್ಬಿಬ್ಬಾದ ಘಟನೆ ಸೋಮವಾರ ನಡೆದಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಆರ್. ಬಾನುಮತಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಸೋಮವಾರ ವಿಚಾರಣೆ ಆರಂಭಿಸಿದಾಗ ಈ ಹೊಸ ಅರ್ಜಿ ಬಂದಿದ್ದು ನೋಡಿ ವಿಚಲಿತವಾಯಿತು.

ಸಂವಿಧಾನದ ಪರಮೋಚ್ಛ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧದ ದೂರು ವಿಚಾರಣೆಗೆ ಅಂಗೀಕರಿಸುವುದು ಅಸಾಧ್ಯ. ಸುಪ್ರೀಂಕೋರ್ಟ್ ಗೂ ಮೇಲಿನ ಹುದ್ದೆಯ ವಿರುದ್ಧ ಆರೋಪ ಸರಿಯಲ್ಲ. ಸಂವಿಧಾನದ ವ್ಯವಸ್ಥೆಯನ್ನೇ ಪ್ರಶ್ನಿಸುವ ಅರ್ಜಿದಾರರ ವಿರುದ್ಧ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅರ್ಜಿದಾರರು ಇನ್ನು ಮುಂದೆ ಯಾವುದೇ ನ್ಯಾಯಾಲಯದಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸದಂತೆ ನಿಷೇಧ ಹೇರಿತು.

ಅನಿಂದಿತಾ ಎಂಬುವವರು ರಾಷ್ಟ್ರಪತಿ ಹುದ್ದೆಗೆ ಪ್ರಣಬ್ ಮುಖರ್ಜಿ ಅರ್ಹರಲ್ಲ ಎಂದು ಅದೇಶ ನೀಡುವಂತೆ ಕೋರಿ ಪಿಐಎಲ್ ಸಲ್ಲಿಸಿದ್ದರು.

ಇಂತಹ ಅರ್ಜಿಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಸುಪ್ರೀಂಕೊರ್ಟ್ ಅಭಿಪ್ರಾಯಪಟ್ಟಿತು.