೧೧ ಆರ್ ಎಸ್ಎಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

0
956

ಅಖಿಲ ಭಾರತ ಡೆಮಾಕ್ರೆಟಿಕ್‍ ಯೂತ್‍ ಫೆಡರೇಷನ್‍ನ ಕಾರ್ಯಕರ್ತ ವಿಷ್ಣು ಅವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರ್‍ಎಸ್‍ಎಸ್‍ನ 11 ಕಾರ್ಯಕರ್ತರಿಗೆ ಕೇರಳದ ಹೆಚ್ಚುವರಿ ಸೆಷನ್ಸ್‍ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ, ಒಬ್ಬನಿಗೆ 3 ವರ್ಷ ಶಿಕ್ಷೆ ಹಾಗೂ 51 ಸಾವಿರ ರೂ. ದಂಡ ವಿಧಿಸಿದೆ.

ಕೈಥಮುಕ್ಕುನ ಸಂತೋಷ್‍ , ಕೇರಳದಿತ್ಯಪುರಂನ ಮನೋಜ್‍ ಆಲಿಯಾಸ್‍ ಕಕ್ಕೊಟ್‍ ಮತ್ತು ಬಿಜು ಕುಮಾರ್‍, ಮನಕೋಡ್‍ನ ರಂಜಿತ್‍ ಕುಮಾರ್‍, ಮಲಪ್ಪರೊಕೊನಮ್‍ನ ಬಾಲು ಮಹೇಂದ್ರ ಅನಯಾರದ ವಿಬಿನ್‍ ಮತ್ತು ಸತೀಶ್‍, ಪೆಟ್ಟಾಶ್‍ನ ಬೋಸ್‍, ವಟ್ಟಿಯೂರ್‍ ಕಾವುನ ಸತೀಶ್‍, ನಲಂಚಿರಾದ ವಿನೋದ್ ಕುಮಾರ್‍ ಮತ್ತು ಶ್ರೀಕಾರ್ಯಂನ ಸುಭಾಷ್‍ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿಪಿಐ-ಎಂ ಕಾರ್ಯಕರ್ತನ ಕೊಲೆ ಹಿನ್ನೆಲೆಯಲ್ಲಿ 16 ಮಂದಿಯನ್ನು ಬಂಧಿಸಲಾಗಿತ್ತು. 2001ರಲ್ಲಿ ವಿಷ್ಣು ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದರು. ಇದೇ ತಿಂಗಳ ಆರಂಭದಲ್ಲಿ ಇವರನ್ನೆಲ್ಲಾ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಪ್ರಕರಣದಲ್ಲಿ 77 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ 162 ಸಾಕ್ಷ್ಯಗಳ ಸಂಗ್ರಹ ಮಾಡಲಾಗಿತ್ತು.