ಈ ಎರಡು ಸೀಡಿ-ಗಳನ್ನು ಬಿಡುಗಡೆ ಮಾಡಿದರೆ, ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಸಂಚಲನ ಮೂಡಲಿದೆಯಂತೆ, ಅಂತಹುದೇನಿದೆ ಸೀಡಿಯಲ್ಲಿ?

0
500

ಈಗ ಸಿಡಿ ಬಿಡುಗಡೆ ಮಾಡುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ, ಯಾವ ಸಿನಿಮಾದ ಸಿಡಿ ಅಂತೀರಾ? ನಾವು ಹೇಳುತ್ತಿರುವುದು ಸಿನಿಮಾದ ಸಿಡಿ ಬಗ್ಗೆ ಅಲ್ಲ, ಹಗರಣ, ಭ್ರಷ್ಟಾಚಾರ, ರಾಸಲೀಲೆ ಎಂತಹ ಸಿಡಿಗಳು. ಈಗ ರಾಮಮೂರ್ತಿ ಗೌಡ ಎಂಬುವವರ ಬಳಿ ಇಂತಹ ಎರಡು ಸಿಡಿಗಳಿವೆಯಂತೆ ಅವನ್ನು ಬಿಡುಗಡೆ ಮಾಡಿದರೆ ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ಸಂಚಲನ ಮೂಡಲಿದೆಯಂತೆ.

ಹೌದು, ಹೀಗಂತ ಸ್ವತಃ RTI ಕಾರ್ಯಕರ್ತರಾಗಿರುವ ರಾಮಮೂರ್ತಿ ಗೌಡರೇ ಹೇಳಿದ್ದಾರೆ. ಫೆ.3 ರಂದು ಸುದ್ದಿ ಮಾಧ್ಯಮಗಳಿಗೆ ಮತ್ತು ಪತ್ರಿಕಾ ಪ್ರಕಟಣೆಯಲ್ಲಿ ಸಿಡಿ ಬಿಡುಗಡೆ ಮಾಡಲಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಮೂಲಗಳ ಪ್ರಕಾರ ಬ್ಲೂಫಿಲಂನಲ್ಲಿರುವ ನಾಯಕರು, ರಾಜ್ಯದ ಪ್ರಮುಖ ಹುದ್ದೆಯಲ್ಲಿರುವ ಮತ್ತು ಜನಪ್ರಿಯ ನಾಯಕರು ಅಂತೇ. ಈ ಸಿಡಿ ಬಿಡುಗಡೆಯಾದರೆ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಏಳಲಿದೆ ಎಂದಿದ್ದಾರೆ.

ಇವರ ಬಳಿ ಒಟ್ಟು ಎರಡು ಸಿಡಿಗಳಿವೆಯಂತೆ, ಅದರಲ್ಲಿ ಒಂದು ಸಿಡಿಯ ಮೂಲ ಕೇರಳ ರಾಜ್ಯದ ಕೊಚ್ಚಿನ್ ನಗರದಾಗಿದ್ದರೆ, ಮತ್ತೊಂದು ಸಿಡಿ ರಾಜ್ಯದ ಪ್ರಮುಖ ನಗರಕ್ಕೆ ಸಂಭಂದಿಸಿದ್ದಂತೆ. ಸಿಡಿ ಬಿಡುಗಡೆಯ ಸಮಾರಂಭಕ್ಕೆ ಮಾಧ್ಯಮದವರನ್ನು ಸಮಾಜ ಕಾರ್ಯಕರ್ತರು ಹಾಗೂ ಬುದ್ಧಿಜೀವಿಗಳನ್ನು ಸ್ವಾಗತಿಸಿದ್ದಾರೆ, ಸಾಮಾಜಕ್ಕೆ ಮಾರಕವಾಗಿರುವ ಇಂತಹ ರಾಜಕಾರಿಣಿಗಳನ್ನು ಜನ ಇನ್ನು ಮುಂದೆ ದ್ವೇಷಿಸಲಿದ್ದಾರೆ ಎಂದು ಹೇಳಿದ್ದಾರೆ.

ರಾಮಮೂರ್ತಿ ಗೌಡ ಈ ಪ್ರಕಟಣೆ ಮತ್ತು ಸಿಡಿ ಬಗ್ಗೆ ಹೇಳಿದಾಗಿನಿಂದ ಅವರನ್ನು ಯಾರು ಸಂಪರ್ಕಿಸಲು ಆಗುತ್ತಿಲ್ಲ. ಇನ್ನು ಒಂದು ಅಚ್ಚರಿಯ ಸಂಗತಿ ಏನಂದರೆ ರಾತ್ರಿಯಿಂದ ಅವರ ದೂರವಾಣಿ ಅಥವಾ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಂಜುನಾಥ್ ಮುಲಾಲಿ ಎಂಬುವರು ತಮ್ಮ ಫೇಸ ಬುಕ್ ಖಾತೆಯಲ್ಲಿ ತನಗೂ ಈ ವಿಷಯಕ್ಕೂ ಸಂಬಂಧವಿಲ್ಲ, ಸಿಡಿ ಬಿಡುಗಡೆಗೆ ರಾಮಮೂರ್ತಿ ಹಾಜರಾಗಲಿದ್ದಾರೆ ಎಂದು ಬರೆದಿದ್ದಾರೆ.

ಒಟ್ಟಿನಲ್ಲಿ ಈ ಸಿಡಿ ಬಿಡುಗಡೆಗೆ ಈಗ ಕ್ಷಣಗಣನೆ ಶುರುವಾಗಿದೆ, ಅಂತಹುದೇನಿದೆ ಯಾವ ವ್ಯಕ್ತಿಗಳು ಆ ಸಿಡಿಯಲ್ಲಿದ್ದಾರೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ..!!