ಪೋಷಕರೇ ನಿಮ್ಮ ಮಕ್ಕಳನ್ನು ರುಬೆಲ್ಲಾದಿಂದ ರಕ್ಷಿಸುವುದು ಹೇಗೆ ಎಂದು ತಿಳಿದುಕೊಳ್ಳಿ!!!

0
978

Kannada News | Health tips in kannada

ಮಕ್ಕಳನ್ನು ಕಾಡುವ ರುಬೆಲ

ರುಬೆಲ್ಲ ಮಕ್ಕಳನ್ನು ಕಾಡುವ ತೀವ್ರಸ್ವರೂಪದ ಸೋಂಕು. ಇದಕ್ಕೆ `ಜರ್ಮನ್ ದಡಾರ’ ಎನ್ನುತ್ತಾರೆ. ಪ್ರಪಂಚದೆಲ್ಲೆಡೆ ಇದರ ಹಾವಳಿಯಿದ್ದು, ಲಸಿಕೆ ವಂಚಿತರಾದ ಮಕ್ಕಳನ್ನು ಕಾಡುತ್ತದೆ. 6-8 ವರ್ಷಗಳಿಗೊಮ್ಮೆ ಸಾಂಕ್ರಾಮಿಕ ರೂಪ ತಾಳಿ ಸೌಮ್ಯ ಜ್ವರ, ಬೆವರುಸಾಲೆ ಯಂತಹ ಗುಳ್ಳೆಗಳು, ನಂತರ ಹಾಲ್ರಸಗ್ರಂಥಿಗಳ ಊತದಲ್ಲಿ ಅಂತ್ಯಗೊಳ್ಳುವ ಈ ಕಾಯಿಲೆಗೆ `ಮೂರು ದಿನಗಳ ಜ್ವರ’ವೆಂದೂ ಕರೆಯುತ್ತಾರೆ.ವೈದ್ಯವಿಜ್ಞಾನ 1941ರವರೆಗೆ ಈ ಕಾಯಿಲೆಯನ್ನು ಕಡೆಗಣಿಸಿತ್ತು. ಆ ವರ್ಷ ಪ್ರಖ್ಯಾತ ನೇತ್ರತಜ್ಞ ನಾರ್ಮೆನ್ ಗ್ರೆಗ್ ರುಬೆಲ್ಲ ಸೋಂಕಿತ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸಂಜಾತ ಕಣ್ಣ ಪೊರೆ ಸಾಂಕ್ರಾಮಿಕದ ಬಗ್ಗೆ ವರದಿ ಸಲ್ಲಿಸಿ ವೈದ್ಯಲೋಕದ ಗಮನ ಸೆಳೆದರು. ಗರ್ಭಿಣಿಯರಿಗೆ ಈ ತೊಂದರೆ ತಪ್ಪಿದ್ದಲ್ಲವೆಂದು ಎಚ್ಚರಿಸಿದರು.

ಇದು ರುಬೆಲ್ಲ ಬಗ್ಗೆ ಇದ್ದ ಕಲ್ಪನೆಗಳನ್ನು ಅಲ್ಲಾಡಿಸಿತು. ವೈದ್ಯವಿಜ್ಞಾನಿಗಳು 1962ರಲ್ಲಿ ರುಬೆಲ್ಲ ವೈರಸ್‍ಅನ್ನು ಕಂಡುಹಿಡಿದರು. 1965ರಲ್ಲಿ ಲಸಿಕೆ ಆವಿಷ್ಕಾರಗೊಂಡಿತು.ರುಬೆಲ್ಲ ತೊಗಾವೈರಸ್ ಕುಟುಂಬಕ್ಕೆ ಸೇರಿದ ಆರ್.ಎನ್.ಎ.ವೈರಸ್‍ನಿಂದ ಉಂಟಾಗುತ್ತದೆ. ಇದು ಸೋಂಕಿಗೀಡಾದವರ ಗಂಟಲು, ಗಂಟಲ ಅಂಗಳ, ರಕ್ತ ಮತ್ತು ಮೂತ್ರಗಳಿಂದ ಪ್ರತ್ಯೇಕಿಸಲಾಗಿದೆ. ರೋಗಿಗಳು, ರೋಗಪೂರ್ವ ಲಕ್ಷಣ ಹೊಂದಿದವರು ಮಾತ್ರ ಈ ಸೋಂಕಿನ ಮೂಲ. ರೋಗವಾಹಕರು ಇರದಿರುವುದೇ ಇದರ ವೈಶಿಷ್ಟ್ಯ. ಸಂಜಾತ ರುಬೆಲ್ಲದಿಂದ ಹುಟ್ಟಿದ ಮಕ್ಕಳು ಹಲವಾರು ತಿಂಗಳು ಈ ರೋಗಾಣುಗಳನ್ನು ವಿಸರ್ಜಿಸುತ್ತಾರೆ.

ಇದು ದಡಾರದಷ್ಟು ಬಲಿಷ್ಠ ಸೋಂಕುಗುಣ ಹೊಂದಿರುವುದಿಲ್ಲ. ನಿಖರವಾದ ಸೋಂಕಿನ ಅವಧಿ ನಿರ್ಧಾರವಾಗಿಲ್ಲವಾದರೂ ರೋಗಲಕ್ಷಣ ಕಾಣಿಸಿಕೊಳ್ಳುವ ವಾರ ಮುಂಚೆ, ಬೆವರುಸಾಲೆಯಂತಹ ಗುಳ್ಳೆಗಳು ಎದ್ದನಂತರ ಒಂದುವಾರದವರೆಗೆ ಬೇರೆಯವರಿಗೆ ಸೋಂಕು ಉಂಟಾಗಬಹುದು. ಗುಳ್ಳೆಗಳು ಏಳುವ ಸಂದರ್ಭದಲ್ಲಿ ಸೋಂಕು ನೀಡುವ ಶಕ್ತಿ ಉಗ್ರಸ್ವರೂಪದ್ದಾಗಿರುತ್ತದೆ.ರೋಗ ಸಾಮಾನ್ಯವಾಗಿ ಚಳಿಗಾಲದ ಅಂತ್ಯ-ಬೇಸಿಗೆಯ ಆರಂಭದಲ್ಲಿ ಹರಡುತ್ತದೆ. ಹೆಚ್ಚಾಗಿ 3-10 ವರ್ಷದೊಳಗಿನ ಮಕ್ಕಳು ರೋಗಕ್ಕೊಳಗಾಗುತ್ತಾರೆ. ಮೂಗು-ಗಂಟಲಿನಿಂದ ವಿಸರ್ಜಿತವಾಗುವ ತುಂತುರು ಹನಿಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ.

ರುಬೆಲ್ಲ ರೋಗಾಣುಗಳು ತಾಯಿಯಿಂದ ಮಗುವಿಗೆ ಮಾಸು ಮೂಲಕ ಹರಡಿ ಹಲವು ಆಜನ್ಮ ದೋಷಗಳನ್ನುಂಟುಮಾಡುತ್ತದೆ. ಒಮ್ಮೆ ರೋಗವುಂಟಾದರೆ ಅದರಿಂದ ಬರುವ ರೋಗ ನಿರೋಧಕ ಶಕ್ತಿ ಜೀವನಪರ್ಯಂತ ಇರುತ್ತದೆ. ರೋಗದಿಂದ ರಕ್ಷಣೆ ಪಡೆದ ಗರ್ಭಿಣಿಗೆ ಹುಟ್ಟಿದ ಮಗು ಮೊದಲ ಆರು ತಿಂಗಳವರೆಗೆ ತಾಯಿಯಿಂದ ದೊರೆತ ಪ್ರತಿ-ಕಾಯಗಳಿಂದಾಗಿ ರಕ್ಷಣೆ ಪಡೆಯುತ್ತದೆ. ಲಕ್ಷಣಗಳುರೋಗ ಅವಧಿ 2-3 ವಾರಗಳಿದ್ದು ಸರಾಸರಿ 18 ದಿನಗಳಷ್ಟಿರುತ್ತದೆ. ಶೇ. 50-65 ರೋಗಿಗಳು ಯಾವುದೇ ಲಕ್ಷಣಗಳನ್ನು ಪ್ರಕಟಿಸುವುದಿಲ್ಲ. ರೋಗ ಲಕ್ಷಣಗಳು ಪ್ರಕಟವಾಗುವ ಮೊದಲು ನೆಗಡಿ, ಗಂಟಲುನೋವು, ಕೆರೆತ, ಸೌಮ್ಯಜ್ವರವಿರುತ್ತದೆ. ಹಾಲ್ರಸ ಗ್ರಂಥಿಗಳ ಊತ ಇನ್ನೊಂದು ಲಕ್ಷಣವಾಗಿದ್ದು ಎಲ್ಲರಲ್ಲೂ ಕಾಣಿಸಿಕೊಳ್ಳುವುದಿಲ್ಲ.

ಕೆಲವರಲ್ಲಿ ಬೆವರುಸಾಲೆಯಂತಹ ಗುಳ್ಳೆಗಳು ಮಾಯವಾಗಿ 10-14 ದಿನಗಳವರೆಗೂ ಊದಿಕೊಂಡಿರುತ್ತವೆ.ರೋಗಪೂರ್ವ ಲಕ್ಷಣಗಳು ಕಾಣಿಸಿದ 24 ಗಂಟೆಯಲ್ಲಿ ಮುಖದ ಮೇಲೆ ನಸುಗೆಂಪು ಗುಳ್ಳೆಗಳು ತೋರಬಹುದು. ಇವು ಗಾತ್ರದಲ್ಲಿ ಚಿಕ್ಕವಾಗಿದ್ದು, ಅಲ್ಲಲ್ಲಿ ಚದುರಿರುತ್ತವೆ. ಕಂಜೆಕ್ಟಿವಿಟಿಸ್ ಕಾಣಿಸಿಕೊಳ್ಳಬಹುದು. ಗುಳ್ಳೆಗಳು ಬೇಗನೆ ದೇಹ-ಕೈಕಾಲುಗಳಿಗೆ ಹರಡುತ್ತವೆ. ಆ ವೇಳೆಗೆ ಮುಖದ ಮೇಲಿನ ಗುಳ್ಳೆಗಳು ಮಾಯವಾಗಿರುತ್ತವೆ. ಶೇ.25ರಷ್ಟು ರೋಗಿಗಳಲ್ಲಿ ಗುಳ್ಳೆಗಳು ಗೋಚರಿಸುವುದಿಲ್ಲ. ಚಿಕಿತ್ಸೆಗಾಳಿ-ಬೆಳಕು ಇರುವ ಕೋಣೆಯಲ್ಲಿ ಆರೈಕೆ ಮಾಡಬೇಕು. ದ್ರವರೂಪಿ ಆಹಾರ ಕೊಡಬೇಕು. ಜ್ವರಶಮನ ಗುಳಿಗೆಗಳನ್ನು ನೀಡಬೇಕು.

watch :

ಆರಂಭದಲ್ಲಿ ಜೀವವಿರೋಧಕಗಳನ್ನು ಕೊಟ್ಟರೆ ರೋಗದ ಅವಧಿಯನ್ನು ಕಡಿಮೆ ಮಾಡಿ, ತೊಂದರೆಗಳಿಗೆ ಕಡಿವಾಣ ಹಾಕುವುದು.ಸಂಜಾತ ರುಬೆಲ್ಲಗರ್ಭಿಣಿಗೆ ರುಬೆಲ್ಲ ಕಾಯಿಲೆಯಾದರೆ ಗರ್ಭದಲ್ಲಿರುವ ಮಗುವಿಗೂ ರೋಗಾಣು ಹರಡಿ ಸಂಜಾತ ರುಬೆಲ್ಲ ಉಂಟಾಗುತ್ತದೆ. ಸೋಂಕು ಜೀವಕೋಶಗಳ ವೃದ್ಧಿಯನ್ನು ತಡೆದ ಅನೇಕ ರೀತಿಯ ಅಂಗವಿಕಲತೆಗಳುಂಟಾಗುತ್ತವೆ. ಕಡಿಮೆ ತೂಕ, ಕಿವುಡುತನ, ಹೃದಯ ದೋಷ, ಕಣ್ಣಿನ ಪೊರೆ, ಗ್ಲುಕೊಮ, ಅಕ್ಷಿಪಟಲದ ಬೇನೆ, ಚಿಕ್ಕಗಾತ್ರದ ತಲೆ, ಮಿದುಳಿನ ಬಲಹೀನತೆಯಿಂದಾಗುವ ಲಕ್ವ, ಯಕೃತ್ ಹಿಗ್ಗುವಿಕೆ, ಬುದ್ಧಿಮಾಂದ್ಯತೆ, ದೈಹಿಕ ಬಲಹೀನತೆ ಮೊದಲಾದ ತೊಂದರೆಗಳಾಗುತ್ತವೆ. ಇವೆಲ್ಲ ಸೇರಿ `ಸಂಜಾತ ರುಬೆಲ್ಲ ಲಕ್ಷಣಕೂಟ’ ಎಂದು ಗುರುತಿಸಲ್ಪಡುತ್ತದೆ.ಸೋಂಕು ತಗಲಿದ ಗರ್ಭಾವಧಿಯ ಮೇಲೆ ಭ್ರೂಣದ ಮೇಲಾಗುವ ದುಷ್ಪರಿಣಾಮ ಮತ್ತು ಸೋಂಕಿನ ಸ್ವರೂಪ ಅವಲಂಬಿತವಾಗುತ್ತದೆ.

ಮೊದಲ ಮೂರು ತಿಂಗಳಲ್ಲಿ ಸೋಂಕಿಗೀಡಾದರೆ ಮಗುವಿಗೂ ಸುಲಭವಾಗಿ ಹರಡಿ ಅಂಗವೈಕಲ್ಯವಾಗುವ ಸಾಧ್ಯತೆ ಹೆಚ್ಚು. ತ್ರಿವಳಿ ತೊಂದರೆಗಳದ ಕಣ್ಣಿನ ಪೊರೆ, ಕಿವುಡುತನ, ಹೃದ್ರೋಗ ಸರ್ವೇಸಾಮಾನ್ಯ.ಗರ್ಭಾವಧಿಯ 3-6 ತಿಂಗಳಿನಲ್ಲಿ ರೋಗಕ್ಕೊಳಗಾದರೆ ಮಗುವಿಗೆ ಕಿವುಡುತನ ಸಾಮಾನ್ಯ. ಹದಿನಾರು ವಾರಗಳಾಗಿದ್ದರೆ ಮಗುವಿಗೆ ಯಾವುದೇ ತೊಂದರೆಯಾಗದು. ಮೊದಲ ಮೂರು ತಿಂಗಳಲ್ಲಿ ರೋಗಕ್ಕೊಳಗಾದರೆ, ತೀವ್ರವಾಗಿದ್ದರೆ ಗರ್ಭಪಾತವಾಗಬಹುದು, ಇಲ್ಲವೇ ಗರ್ಭದಲ್ಲೇ ಮಗು ಅಸು ನೀಗಬಹುದು.ನಿಯಂತ್ರಣನಿಯಂತ್ರಣಕ್ಕೆ ಹಲವು ಬಗೆಯ ಲಸಿಕೆಗಳಿವೆ.

ಮುಖ್ಯ ಉದ್ದೇಶ ಗರ್ಭಿಣಿಯರಿಗೆ ಕಾಯಿಲೆ ಬರದಂತೆ ತಡೆಗಟ್ಟುವುದು. 1979ರಲ್ಲಿ ತಯಾರಾದ ಆರ್‍ಎ 27/3 ಉತ್ತಮ ಲಸಿಕೆಯಾಗಿದ್ದು, 0.5 ಮಿ.ಲೀ. ಚರ್ಮದಡಿಯಲ್ಲಿ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ. ಇತ್ತೀಚೆಗೆ ರುಬೆಲ್ಲ ಲಸಿಕೆ ಎಂ.ಎಂ.ಆರ್. ಲಸಿಕೆ ರೂಪದಲ್ಲೂ ದೊರೆಯುತ್ತದೆ. ಇದರಲ್ಲಿ ದಡಾರ, ಮಂಗನಬಾವು( ಗದ್ದಕಟ್ಟು), ರುಬೆಲ್ಲ ಈ ಮೂರೂ ಘಟಕಗಳು ಇರುತ್ತವೆ. ಮಗುವೆಗೆ ಹದಿನೈದು ದಿನಗಳಾದಾಗ ಈ ಲಸಿಕೆ ಕೊಡುತ್ತಾರೆ. ಒಮ್ಮೆ ಕೊಟ್ಟ ಲಸಿಕೆ ಜೀವನಪರ್ಯಂತ ರಕ್ಷಣೆ ನೀಡುವುದು. ಲಸಿಕೆಯನ್ನು ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಕೊಡಬಾರದು. ಲಸಿಕೆ ಪಡೆದ ಮಹಿಳೆ ಮುಂದಿನ ಮೂರು ತಿಂಗಳ P ಕಾಲ ಗರ್ಭ ಧರಿಸಬಾರದು.

Also Read: ಆರೋಗ್ಯದ ಜೊತೆ ಜೊತೆಗೆ ಲವಂಗದಿಂದ ಹಲವಾರು ಲಾಭಗಳಿವೆ ಅನ್ನೋದು ನಿಮಗೆ ಗೊತ್ತೇ?