ನೀವು ಭಾರತೀಯ ಜೀವ ವಿಮಾ ನಿಗಮದ ಗ್ರಾಹಕರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ ಇಲ್ಲದಿದ್ದರೆ ಭವಿಷ್ಯದಲ್ಲಿ ದಂಡ ಪಾವತಿಸಬೇಕಾಗುತ್ತೆ..

0
1019

ಭಾತದಲ್ಲಿ ಪ್ರತಿಯೊಂದು ವ್ಯವಹಾರಗಳು ಡಿಜಿಟಲ್ ನತ್ತ ಸಾಗುತ್ತಿದ್ದು, ಅದರಂತೆ ಭಾರತೀಯ ಅತೀದೊಡ್ಡ ಗ್ರಾಹಕರನ್ನು ಸಂಖ್ಯೆಯನ್ನು ಹೊಂದಿರುವ. ಭಾರತೀಯ ಜೀವ ವಿಮಾ ನಿಗಮ (LIC) ಹಲವು ಬದಲಾವಣೆಯೊಂದಿಗೆ ವಿಬ್ಬಿನ್ನ ಸ್ಕಿಮ್ ಗಳನ್ನು ತಂದು ಗ್ರಾಹಕರಿಗೆ ಇನ್ನು ಹತ್ತಿರವಾಗುತ್ತಿದೆ ಅಷ್ಟೇ ಅಲ್ಲದೆ ಕೆಲವೊಂದು ಮಾಹಿತಿಯನ್ನು ನೇರವಾಗಿ ಗ್ರಾಹಕರ ಮೊಬೈಲ್ ಸಂದೇಶ ಕಳುಹಿಸಲಾಗುತ್ತದೆ. ಇದರಿಂದ ಪಾಲಸಿ ಕಟ್ಟುವ ಮತ್ತು ಹೊಸ ಪಾಲಸಿ ಕುರಿತು ಮಹತ್ವದ ವಿಷಯಗಳು ಸರಳವಾಗಿ ತಿಳಿಯುತ್ತೆ. ಈ ಹಿನ್ನೆಲೆಯಲ್ಲಿ ನೀವು ಮೊಬೈಲ್ ನಂಬರ್​ ದಾಖಲಿಸದಿದ್ದರೆ, ಭವಿಷ್ಯದಲ್ಲಿ ದಂಡ ಪಾವತಿಸ ಬೇಕಾಗಬಹುದು.

ಏನಿದು LIC ಹೊಸ ನಿಮಯ?

ಹೌದು ಭಾರತೀಯ ಜೀವ ವಿಮಾ ನಿಗಮ (LIC) ಡಿಜಿಟಲೀಕರಣದತ್ತ ಮುಖ ಮಾಡಿದೆ. ಈ ಹಿನ್ನಲೆಯಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಎಸ್​ಎಂಎಸ್​ ಅನ್ನು ಕಳುಹಿಸಲಾಗುತ್ತಿದೆ. ಏಕೆಂದರೆ ಮಾರ್ಚ್​ 1, 2019ರಿಂದ ಎಲ್​ಐಸಿಯು ಸಂಪೂರ್ಣ ಡಿಜಿಟಲ್​ ರೂಪದಲ್ಲಿ ಸೇವೆ ಒದಗಿಸುವುದಾಗಿ ಹೇಳಿಕೊಂಡಿದೆ. ಅದರಂತೆ ಈಗಾಗಲೇ ಮೊಬೈಲ್​ ನಂಬರ್ ರಿಜಿಸ್ಟರ್ ಮಾಡಿರುವ ಪಾಲಿಸಿದಾರರಿಗೆ ಇದರ ಮಾಹಿತಿ ನೀಡಿದೆ. ಎಲ್​ಐಸಿಯ ಹೊಸ ಸೇವೆಯಿಂದ ಇನ್ನು ಮುಂದೆ ಗ್ರಾಹಕರಿಗೆ ಪಾಲಿಸಿ ಕುರಿತಾದ ಸಂಪೂರ್ಣ ಮಾಹಿತಿಗಳು ಸಂದೇಶಗಳ ಮೂಲಕ ಲಭ್ಯವಾಗಲಿದೆ. ನಿಮ್ಮ ಪಾಲಿಸಿ ಪಾವತಿ ದಿನ ಸೇರಿದಂತೆ, ಪಾವತಿಸಿದ ಮೊತ್ತ, ಒಟ್ಟು ಮೊತ್ತ ಎಲ್ಲವು ಎಸ್​ಎಂಎಸ್​ ಮೂಲಕ ನಿಮಗೆ ತಿಳಿಸುತ್ತೆ.

ನಿಮ್ಮ ನಂಬರ್​ ದಾಖಲಾಗದಿದ್ದರೆ?

ನೀವು ನಂಬರ್​ ದಾಖಲಿಸದಿದ್ದರೆ, ಭವಿಷ್ಯದಲ್ಲಿ ದಂಡ ಪಾವತಿಸಬೇಕಾಗಿ ಬರಬಹುದು. ಏಕೆಂದರೆ ಪಾಲಿಸಿಯ ಕುರಿತಾದ ಮಾಹಿತಿಗಳು ನಿಮಗೆ ಲಭ್ಯವಾಗುವುದಿಲ್ಲ. ಇದರಿಂದ ಪಾವತಿ ದಿನಾಂಕ ಸೇರಿದಂತೆ ಹಲವು ವಿಚಾರಗಳು ನಿಮಗೆ ತಿಳಿಯದಿರಬಹುದು. ಹಾಗಾಗಿ ಕಂಪೆನಿಯ ನಿಯಮದಂತೆ ಹೆಚ್ಚುವರಿ ಹಣ ಪಾವತಿಸುವ ಸಂದರ್ಭಗಳು ಸೃಷ್ಟಿಯಾಗಬಹುದು ಎಂದು ಸಂಸ್ಥೆ ತಿಳಿಸಿದೆ. ಸದ್ಯ ಎಲ್​ಐಸಿಯಲ್ಲಿ ಮೊಬೈಲ್​ ನಂಬರ್ ರಿಜಿಸ್ಟರ್​ ಮಾಡಿಕೊಂಡಿರುವ ಗ್ರಾಹಕರಿಗೆ- ಪ್ರಿಯ ಗ್ರಾಹಕ, ನಾವು ಪ್ರೀಮಿಯಂ ಪಾವತಿ ದಿನಾಂಕ, ನಿಮ್ಮ ಪಾಲಿಸಿಯನ್ನು 1.03.2019 ಎಸ್ಎಂಎಸ್ ಮೂಲಕ ನಿಮಗೆ ತಿಳಿಸುತ್ತೇವೆ ಮತ್ತು ಅಲ್ಲದೆ ಪಾಲಿಸಿಯ ಕುರಿತಾದ ಮಾಹಿತಿಗಳನ್ನು ಒದಗಿಸಲಿದ್ದೇವೆ ಎಂದು ಸಂದೇಶ ಕಳುಹಿಸಲಾಗುತ್ತಿದೆ.

ನಂಬರ್ ನೋಂದಾಯಿಸುವುದು ಹೇಗೆ?

ನಿಮ್ಮ ಮೊಬೈಲ್​ ನಂಬರ್​ ಅನ್ನು ನೋಂದಾಯಿಸಲು ಸ್ಥಳೀಯ ಏಜೆಂಟ್​ಗೆ ಕರೆ ಮಾಡಬಹುದು. ಇಲ್ಲ ಎಲ್​ಐಸಿಯ ಅಧಿಕೃತ ವೆಬ್​​ಸೈಟ್​ www.licindia.in/Customer-Services/Help-Us-To-Serve-You-Better ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಇದರ ಹೊರತಾಗಿ ಸಹಾಯವಾಣಿ ಸಂಖ್ಯೆ- 022-68276827 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.

Also read: LIC ತಂದ ಹೊಸ ಪಾಲಿಸಿ’ ತಿಂಗಳಿಗೆ 420 ರೂ ಕಟ್ಟಿ 15 ಲಕ್ಷದವರೆಗೆ ವಿಮೆ ಪಡೆಯರಿ..