ಹಳ್ಳಿಗಳಲ್ಲೇ ಬಿ.ಪಿ.ಓ. ಶುರು, ಯುವಕರು ಪಟ್ಟಣಕ್ಕೆ ಬಂದು ಕಷ್ಟ ಪಡಬೇಕಾಗಿಲ್ಲ!!

0
796

ಉತ್ತಮ ಶಿಕ್ಷಣ ಹಾಗೂ ಉದ್ಯೋಗದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಬಹುತೇಕ ಎಲ್ಲರ ಗುರಿ. ಈ ಸದುದ್ದೇಶದಿಂದಾಗಿ ಹಳ್ಳಿಗಳಿಂದ ನಗರಕ್ಕೆ ಶಿಕ್ಷಣ ಪಡೆಯಲು ಮತ್ತು ಉದ್ಯೋಗ ಗಿಟ್ಟಿಸಿಕೊಳ್ಳಲು ಆಗಮಿಸುವ ಮತ್ತು ಇಲ್ಲೇ ನೆಲೆಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿಗೆ ಉದ್ಯೋಗ ಅರಿಸಿಕೊಂಡು ಬರುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಸಿಗದಂತಾಗಿದೆ.

Image result for indian village youth

2001ರಲ್ಲಿ 4.3 ಮಿಲಿಯನ್ ಇದ್ದ ಬೆಂಗಳೂರಿನ ಜನಸಂಖ್ಯೆ 2017ರಂತ್ಯದೊಳಗೆ 14.5 ಮಿಲಿಯನ್ ದಾಟಲಿದೆ ಎಂಬ ಆಘಾತಕಾರಿ ವರದಿ ಕೇಳಿ ಬಂದಿದೆ. ಮರಳಿ ಹಳ್ಳಿಯತ್ತ ಸೂಕ್ತ ಶಿಕ್ಷಣ ಹಾಗೂ ಉದ್ಯೋಗದ ಅನುಕೂಲ ಹಳ್ಳಿಗಳಲ್ಲಿ ಇಲ್ಲದಿರುವುದರಿಂದ ಶೇ.88 ರಷ್ಟು ಯುವ ಜನತೆ ಹಳ್ಳಿಗಳನ್ನು ತೊರೆದು ನಗರಗಳಿಗೆ ಆಗಮಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ಪುನಃ ತಮ್ಮ ಹಳ್ಳಿಗಳಿಗೆ ಹೋಗಲು ಮನಸ್ಸು ಮಾಡುವುದಿಲ್ಲ. ಹೀಗಾಗಿ ಈಗ ಬಹುತೇಕ ಗ್ರಾಮಗಳಲ್ಲಿ ಬರೀ ವೃದ್ಧರು, ಮಹಿಳೆಯರು ಹಾಗೂ ಚಿಕ್ಕಮಕ್ಕಳುಗಳು ಉಳಿದಿದ್ದು, ಯುವ ಜನತೆ ಕಣ್ಣಿಗೆ ಬೀಳುವುದೇ ಇಲ್ಲ.

Image result for indian village industry

`ಯುವ ಜನತೆಯಿಂದಲೇ ಅಭಿವೃದ್ಧಿ ಸಾಧ್ಯ’ ಎನ್ನುವುದು ನಿಜ. ಆದರೆ ಯುವಜನಾಂಗವೇ ಇಲ್ಲದ ಹಳ್ಳಿಗಳು ಅಭಿವೃದ್ಧಿ ಕಾಣಲು ಹೇಗೆ ಸಾಧ್ಯ? ಹೀಗಾಗಿ ಯುವಕರನ್ನು ಹಳ್ಳಿಗಳಲ್ಲಿಯೇ ಉಳಿಸುವ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡುವಂಥ ಯೋಜನೆಗಳನ್ನು ರೂಪಿಸಬೇಕಾದುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇಂತಹ ಒಂದು ವಿಶಿಷ್ಟ ಯೋಜನೆಯನ್ನು `ಉಲ್ಲಾನೆ ಬ್ಯುಸಿನೆಸ್ ಕನ್ಸ್‍ಲ್ಟೆನ್ಸಿ’ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಆರಂಭಿಸಿದೆ.ಡಾಕ್ಟರ್, ಇಂಜಿನಿಯರ್, ಅಕೌಂಟೆಂಟ್ ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕನಸಿನ ಉದ್ಯೋಗ ಪಡೆದುಕೊಳ್ಳಲು ಹಂಬಲಿಸುತ್ತಿರುತ್ತಾರೆ. ಕಲಾವಿದ ಕಲೆಯಲ್ಲಿಯೇ ಭವಿಷ್ಯ ಕಾಣಲು ನಿರ್ಧರಿಸಿದ್ದರೇ, ಕೆಲವೊಬ್ಬರು ಶಿಕ್ಷಕರಾಗುವ ಬಯಕೆ ಹೊಂದಿರುತ್ತಾರೆ. ಹೀಗೆ ತಮ್ಮ ಎಲ್ಲ ಕನಸುಗಳನ್ನು ಹೊತ್ತುಕೊಂಡು ಹಳ್ಳಿ ತೊರೆದು ನಗರಕ್ಕೆ ಆಗಮಿಸುತ್ತಾರೆ. ಯಾವುದೋ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ತಾವು ಬಯಸಿದ ಉದ್ಯೋಗ ಸಿಗದೇ ಹಲವರು ನಿರಾಶೆ ಕೂಡ ಹೊಂದುತ್ತಾರೆ.

Image result for indian BPO

ಇಂತಹ ಯುವಕರಿಗೆ ತಮ್ಮ ಹಳ್ಳಿಯಲ್ಲಿಯೇ ಬಯಸಿದ ಉದ್ಯೋಗ ಸಿಗುವಂತೆ ಮಾಡುತ್ತಿದೆ “ಉಲ್ಲಾನೆ ಬ್ಯುಸಿನೆಸ್ ಕನ್ಸ್‍ಲ್ಟೆನ್ಸಿ’.ಹಳ್ಳಿಗಳ ಅಭಿವೃದ್ಧಿ ಸಾಧ್ಯಪ್ರಪಂಚದ ಪ್ರಭಾವಿ ರಾಷ್ಟ್ರಗಳೆಂದು ಗುರುತಿಸಿಕೊಂಡಿರುವ ಅಮೆರಿಕಾ, ಜರ್ಮನ್, ಯುರೋಪ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತೀಯ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚು. ಹೊರದೇಶದವರಾಗಿರುವುದರಿಂದ ಭಾರತೀಯರಿಗೆ ಸ್ಥಳೀಯರಿಗಿಂತ ಕಡಿಮೆ ಸಂಬಳ ಸಿಗುತ್ತಿದ್ದರು ಸುಮ್ಮನೆ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಆ ರಾಷ್ಟ್ರಗಳಲ್ಲಿನ ಗ್ರಾಮಗಳು ಹಾಗೂ ಪಟ್ಟಣ ಪ್ರದೇಶಗಳು ಅಭಿವೃದ್ಧಿಯತ್ತ ಸಾಗಿವೆ. ಸ್ಥಳೀಯರು ಉದ್ಯೋಗ ಅರಿಸಿಕೊಂಡು ಬೇರೆಡೆ ಹೋಗುವುದು ವಿರಳ.

Image result for indian rich village

ಆದರೆ ಭಾರತದಲ್ಲಿ ಉದ್ಯೋಗ ಮಾತ್ರ ಮುಖ್ಯವಾಗಿದ್ದರಿಂದ ಉಳಿದೆಲ್ಲ ವಿಷಯಗಳು ಮಹತ್ವ ಕಳೆದುಕೊಂಡಿವೆ. ಇದೇ ಕಾರಣದಿಂದ ಹಳ್ಳಿಗಳು ಹಿಂದುಳಿದಿವೆ. `ಉಲ್ಲಾನೆ ಬ್ಯುಸಿನೆಸ್ ಕನ್ಸ್‍ಲ್ಟೆನ್ಸಿಯ ಯೋಜನೆಯಿಂದ ಮತ್ತೆ ಹಳ್ಳಿಗಳ ಮಹತ್ವ ಹೆಚ್ಚಲಿದೆ ಎಂಬ ಆಶಾಕಿರಣ ಮೂಡಿದೆ.ಗ್ರಾಮಗಳಲ್ಲಿ ಬಿಪಿಒ/ಕೆಪಿಒ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಹಳ್ಳಿಯಿಂದ ಮಾಡುವ ಪರಿಕಲ್ಪನೆ ಇಲ್ಲಿದ್ದು, ಯುವಕರಿಗೆ ಮೊದಲು ಕಂಪ್ಯೂಟರ್ ತರಬೇತಿ ನೀಡಲು ಹೆಚ್ಚು ಒತ್ತು ನೀಡಲಾಗಿದೆ. ಇದರಿಂದ ಹಳ್ಳಿಗಳಲ್ಲಿಯೇ ಕುಟುಂಬದೊಡನೆ ಇದ್ದು ಕೆಲಸ ಮಾಡುವ ಅವಕಾಶ ಒದಗಲಿದೆ. ಲೆಕ್ಕಪರಿಶೋಧಕ, ತೆರಿಗೆಗೆ ಸಂಬಂಧಿ, ವ್ಯಾಟ್, ಜಿಎಸ್‍ಟಿ, ಇ-ಟಿಡಿಎಸ್, ಸ್ಟಾರ್ಟ್ ಅಪ್, ಮಾರ್ಕೆಟಿಂಗ್, ಎನ್‍ಜಿಒ, ಡಾಟಾ ಎಂಟ್ರಿ, ವೆಬ್‍ಸೈಟ್ ಹಾಗೂ ಮೊಬೈಲ್ ತಂತ್ರಾಂಶ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಉದ್ಯೋಗ ಒದಗಿಸಲಾಗುತ್ತದೆ. ಹಳ್ಳಿಗಳಲ್ಲೇ ಬಿಪಿಒ ಹಾಗೂ ಕೆಪಿಒಗಳನ್ನು ತೆರೆಯ ಲಾಗುತ್ತಿದ್ದು, ನಗರದಲ್ಲಿ ಹೇಗೆ ಕೆಲಸಗಳಾಗು ತ್ತಿದ್ದವೋ ಅದೇ ರೀತಿಯಲ್ಲಿ ಹಳ್ಳಿಗಳಲ್ಲಿ ಕೆಲಸಗಳಾಗಲಿವೆ. ಸಾಫ್ಟ್‍ವೇರ್ ಸಂಸ್ಥೆ ಗಳೆಂದರೆ ನಗರಕ್ಕೆ ಮಾತ್ರ ಸೀಮಿತ ಎಂದು ಕೊಳ್ಳುವವರಿಗೆ ಗ್ರಾಮಗಳಲ್ಲಿಯೂ ಸಾಫ್ಟ್ ವೇರ್ ಸಂಸ್ಥೆಗಳು ಕಾಣಲು ಸಿಗಲಿವೆ.