ನರೇಂದ್ರ ಮೋದಿಯವರು ಪ್ರಧಾನಿಯಾಗಿ ಮಾಡಿದ ಸಾಧನೆಗಾಗಿ ರಷ್ಯಾದವರು ಮೆಚ್ಚಿ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದ್ದಾರೆ!!

0
434

ಭಾರತದ ಹೆಮ್ಮೆಯ ಪ್ರಧಾನಿಯಾದ ನರೇಂದ್ರ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್‌ ಆಫ್‌ ಸೇಂಟ್‌ ಆಂಡ್ರ್ಯೂ ದ ಅಪೋಸ್ಲ್’ ಪ್ರಶಸ್ತಿಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಘೋಷಿಸಿದ್ದಾರೆ. ಅದರಂತೆ ರಷ್ಯಾ ಮತ್ತು ಭಾರತದ ನಡುವೆ ವಿಶೇಷ ಮತ್ತು ಮಹತ್ವದ ಕಾರ್ಯತಂತ್ರ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಅಮೋಘ ಸೇವೆ ಸಲ್ಲಿಸಿದ್ದಕ್ಕಾಗಿ ಈ ಗೌರವ ನೀಡಲಾಗಿದೆ ಎಂದು ರಷ್ಯಾದ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Also read: ಪ್ರಧಾನಿ ಮೋದಿಗೆ ಮತ್ತೊಂದು ಪ್ರಶಸ್ತಿ; ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ, ಯುಎಇ ಅಧ್ಯಕ್ಷ ಝಾಯದ್ ಮೆಡಲ್’ ಘೋಷಣೆ..

ಆರ್ಡರ್ ಆಫ್ ಸೇಂಟ್ ಆಂಡ್ರೂ ದಿ ಅಪೋಸ್ಟಲ್’ ರಷ್ಯಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಪ್ರಧಾನಿ ಮೋದಿ ಅವರು ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆಯುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 2017ರಲ್ಲಿ ಈ ಪ್ರಶಸ್ತಿಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್, ಅಜರ್ ಬೈಜಾನ್ ಪ್ರಧಾನಿ ಹೈದರ್ ಅಲಿಯಾವ್, ಕಜಕಿಸ್ತಾನದ ಅಧ್ಯಕ್ಷ ನುರ್ಸುಲ್ಟಾನ್ ನಜರ್ಬಯೆವ್ ಅವರಿಗೆ ಈ ಗೌರವ ನೀಡಲಾಗಿತ್ತು. ಈ ಪ್ರಶಸ್ತಿಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಳು ಉನ್ನತ ಜಾಗತಿಕ ಪ್ರಶಸ್ತಿಗಳು ದೊರೆದಂತಾಗಿವೆ.

Also read: ನರೇಂದ್ರ ಮೋದಿಯವರ ಪ್ರಶಸ್ತಿಯ ಮೇಲೆ ಪಾಕ್ ಕರಿನೆರಳು; ವಿಶ್ವಸಂಸ್ಥೆಯಿಂದ ‘ಚಾಂಪಿಯಲ್‌ ಆಫ್‌ ಅರ್ಥ್’| ಪ್ರಶಸ್ತಿ ಹಿಂಪಡೆಯಲು ಪಾಕ್ ಕೋರಿಕೆ..

ರಷ್ಯಾ ಒಕ್ಕೂಟದ ಅತ್ಯುನ್ನತ ಪ್ರಶಸ್ತಿಯಾಗಿರುವ ಇದು, ಅಲ್ಲಿನ ಅತ್ಯಂತ ಪ್ರಾಚೀನ ಪ್ರಶಸ್ತಿಯೂ ಆಗಿದೆ. 1698ರಲ್ಲಿ ಇದನ್ನು ರಷ್ಯಾದ ರಾಜಪ್ರಭುತ್ವ ಸ್ಥಾಪಿಸಿತ್ತು. ಸೋವಿಯತ್ ಆಡಳಿತದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ಒಕ್ಕೂಟ ವಿಭಜನೆಯಾದ ನಂತರ 1998ರಲ್ಲಿ ಅದನ್ನು ಪುನಃ ಆರಂಭಿಸಲಾಯಿತು. ಇದೆ ತಿಂಗಳ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದ ಅತ್ಯುನ್ನತ ನಾಗರಿಕ ಪ್ರಶಸ್ತಿ ಝಾಯದ್​ ಮೆಡಲ್​ಗೆ ಪ್ರಧಾನಿ ನರೇಂದ್ರ ಮೋದಿಯವರು ಭಾಜನರಾಗಿದ್ದರು. ನರೇಂದ್ರ ಮೋದಿಯವರು ಕಳೆದ ವರ್ಷ ಫೆಬ್ರವರಿಯಲ್ಲಿ ಯುಎಇಗೆ ಭೇಟಿ ನೀಡಿದ್ದರು. ಭಾರತ ಮತ್ತು ಅರಬ್​ ಸಂಯುಕ್ತ ಸಂಸ್ಥಾನದ ವಾಣಿಜ್ಯಾತ್ಮಕ ಸಂಬಂಧ ಈಗ ಬಲಗೊಂಡಿದೆ. ಪರಸ್ಪರ ರಾಷ್ಟ್ರಗಳು ವ್ಯಾಪಾರದಲ್ಲಿ ಬಂಡವಾಳ ಹೂಡಿದ್ದು ಉದ್ಯಮ ಬಲಗೊಳ್ಳುತ್ತಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತ್ತು.

Also read: ನರೇಂದ್ರ ಮೋದಿ ಪ್ರಣಾಳಿಕೆ ಬಿಡುಗಡೆ; ಮತ್ತೆ ರಾಮಮಂದಿರದ ಭರವಸೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂ ಸಾಲ, ಸೇರಿದಂತೆ ಪ್ರಣಾಳಿಕೆಯ ಹೈಲೈಟ್ಸ್​ ಇಲ್ಲಿದೆ ನೋಡಿ..

ಮುಖ್ಯವಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ನರೇಂದ್ರ ಮೋದಿಯವರ ಪ್ರಯತ್ನಕ್ಕಾಗಿ ಈ ಪ್ರಶಸ್ತಿ ನೀಡಲಾಗಿದ್ದು ಕಳೆದ ಬಾರಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಈ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ, ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್​ ಡಬ್ಲ್ಯೂ ಬುಷ್​, ಫ್ರಾನ್ಸ್​ ಮಾಜಿ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಸೇರಿ ಹಲವು ಗಣ್ಯರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ನೀಡುತ್ತಿರುವ ಬಗ್ಗೆ ಅಬುಧಾಬಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಝಾಯದ್‌ ಅಲ್‌ ನಹ್ಯಾನ್‌ ಟ್ವೀಟ್​ ಮಾಡಿ, ಅರಬ್​ ಸಂಯುಕ್ತ ಸಂಸ್ಥಾನ ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರ ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದ್ದೇವೆ. ಇದೀಗ ನನ್ನ ಸ್ನೇಹಿತರೂ ಆದ ನರೇಂದ್ರ ಮೋದಿಯವರಿಂದ ಈ ಸಂಬಂಧಗಳು ಮತ್ತಷ್ಟು ಬಲಗೊಂಡಿವೆ. ಅವರ ಪ್ರಯತ್ನಕ್ಕೆ ಗೌರವಾರ್ಥವಾಗಿ ಯುಎಇ ಅಧ್ಯಕ್ಷರು ಪ್ರತಿಷ್ಠಿತ ಝಾಯದ್​ ಪ್ರಶಸ್ತಿ ನೀಡಲಿದ್ದಾರೆ. ಎಂದು ತಿಳಿಸಿದ್ದಾರೆ.