ಮತ್ತೊಂದು ವಿಮಾನ ದುರಂತ; ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಿಮಾನ- 41 ಪ್ರಯಾಣಿಕರು ಸುಟ್ಟು ಭಸ್ಮ..

0
292

ಕಳೆದ ವರ್ಷದಿಂದ ವಿಮಾನ ದುರಂತಗಳು ಹೆಚ್ಚಾಗಿ ನಡೆಯುತ್ತಿದ್ದು ಮತ್ತೊಂದು ದುರಂತ ನಡೆದಿದೆ. ಪ್ರಯಾಣಿಕರ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವಾಗ ಉಂಟಾದ ಅಗ್ನಿ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 41 ಜನ ಸಾವನ್ನಪ್ಪಿರುವ ಘಟನೆ ರಷ್ಯಾದ ಮಾಸ್ಕೋ ನಗರದಲ್ಲಿ ನಡೆದಿದೆ. ರಷ್ಯಾದಲ್ಲಿ ಈ ಹಿಂದೆ 2018 ಫೆಬ್ರವರಿ 11 ರಂದು ಅಂಟೋನೋವಾ ಎಎನ್ 148 ಹೆಸರಿನ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಈ ಅವಘಡದಲ್ಲೂ ಸುಮಾರು 71 ಪ್ರಯಾಣಿಕರು ಸಾವನ್ನಪ್ಪಿದ್ದರು. ರಷ್ಯಾ ವಿಮಾನಯಾನ ಇತಿಹಾಸದಲ್ಲಿ ಇದೊಂದು ದೊಡ್ಡ ದುರಂತ ಎಂದು ಬಣ್ಣಿಸಲಾಗಿತ್ತು. ಈಗ ಅಂತಹದೆ ಮತ್ತೊಂದು ದುರಂತ ನಡೆದಿದೆ.

Also read: ಚೌಕಿದಾರ್ ಚೋರ್ ಹೇಳಿಕೆಗೆ ಸುಪ್ರೀಂ ಕ್ಷಮೆ ಕೇಳಿದರು ಮತ್ತೆ ಮೋದಿಗೆ ಚೋರ್ ಹೇ ಅನ್ನೋದು ಬಿಡಲ್ಲ; ಎಂದ ರಾಹುಲ್ ಮತ್ತೆ ವಿವಾದಕ್ಕೆ ಗುರಿಯಾಗ್ತಾರ??

ಏನಿದು ಘಟನೆ?

ರಷ್ಯಾದ ಸುಖೋಯ್ ಸೂಪರ್​ಜೆಟ್ 100 ವಿಮಾನ ಮಾಸ್ಕೋದಿಂದ ನಿನ್ನೆ ಇಳಿಸಂಜೆ 78 ಜನ ಪ್ರಯಾಣಿಕರ ಜೊತೆ ಮರ್ಮನ್ಸ್ಕ್ ನಗರಕ್ಕೆ ಹಾರಾಟ ಆರಂಭಿಸಿತ್ತು. ಆದರೆ, ಹಾರಾಟ ಆರಂಭಿಸಿದ್ದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪೈಲಟ್​ಗಳು ವಿಮಾನವನ್ನು ತುರ್ತಾಗಿ ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ವೇಳೆ ರನ್​ವೇಗೆ ಇಳಿಯುತ್ತಿದ್ದಂತೆ ವಿಮಾನ ನೆಲಕ್ಕೆ ಅಪ್ಪಳಿಸಿ ಇಂಜಿನ್​ನಲ್ಲಿ ಅಗ್ನಿ ಕಾಣಿಸಿಕೊಂಡಿದೆ. ಪರಿಣಾಮ ವಿಮಾನದ ಮುಂಬದಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, 41 ಜನ ಮೃತಪಟ್ಟಿದ್ದಾರೆ.

ಅವಘಡದಲ್ಲಿ 37 ಜನರನ್ನು ರಕ್ಷಣೆ ಮಾಡಲಾಗಿದ್ದು, ಈ ಪೈಕಿ 11 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ತೀವ್ರ ಸಂತಾಪ ಸೂಚಿಸಿದ್ದರೆ, ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ನಂತರ ಅಪಘಾತದ ನಿಖರ ಕಾರಣ ತಿಳಿದುಬರಲಿದೆ.

Also read: ಶಾಲಾ ಮಕ್ಕಳಿಗೆ ಹಾಗೂ ಪಾಲಕರಿಗೆ ಸಿಹಿ ಸುದ್ದಿ; ಬ್ಯಾಗ್ ತೂಕ ಮಿತಿಗೊಳಿಸಿದ ಸರ್ಕಾರ ಬ್ಯಾಗ್ ರಹಿತ ದಿನ ಆಚರಣೆಗೆ ಆದೇಶ..

ಉತ್ತರ ಮರ್ಮನ್ಸ್ಕ್ ನಗರದ ಶೆರ್ಮೆಟಿವೋ ವಿಮಾನ ನಿಲ್ದಾಣದಿಂದ ಈ ವಿಮಾನ ಹಾರಾಟ ಆರಂಭಿಸಿತ್ತು. ಬಳಿಕ ವಿಮಾನದಲ್ಲಿ ತಾಂತ್ರಿಕ ಉಂಟಾಗಿ ಅದು ಹಿಂತಿರುಗಿತ್ತು. ಹಿಂತಿರುಗುತ್ತಿದ್ದಾಗ ವಿಮಾನದಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ತುರ್ತು ಭೂ ಸ್ಪರ್ಶ ಮಾಡಿದ್ದಾರೆ. ಮೊದಲ ಬಾರಿಗೆ ತುರ್ತು ಭೂ ಸ್ಪರ್ಶ ಮಾಡಲು ಯತ್ನಿಸಿದ ಪೈಲಟ್‍ಗೆ ಸಾಧ್ಯವಾಗಿಲ್ಲ. ಬಳಿಕ ಮತ್ತೊಮ್ಮೆ ತುರ್ತು ಭೂ ಸ್ಪರ್ಶ ಮಾಡುವಾಗ ನೆಲಕ್ಕೆ ಟೈರ್ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಕಪ್ಪು ದಟ್ಟ ಹೊಗೆ ವಿಮಾನ ನಿಲ್ದಾಣದಲ್ಲಿ ಆವರಿಸಿತ್ತು.

ಈ ವಿಮಾನದಲ್ಲಿ ನಾಲ್ವರು ಮಕ್ಕಳು ಸೇರಿದಂತೆ 41 ಮಂದಿ ನೋಡು ನೋಡುತ್ತಿದ್ದಂತೆ ಸಜೀವ ದಹನವಾಗಿದ್ದಾರೆ. ಅದೃಷ್ಟವಶಾತ್ ವಿಮಾನ ಸ್ಫೋಟಗೊಂಡಿಲ್ಲ. ವಿಮಾನ ನಿಂತ ಬಳಿಕ ತುರ್ತು ನಿರ್ಗಮನ ಮೂಲಕ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ರಷ್ಯಾದ ತನಿಖಾ ತಂಡದ ವಕ್ತಾರ ಎಲಿನಾ ಮಾರ್ಕೊಸ್‍ಕಾಯ ಬೆಳಗಿನ ಜಾವ 41 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ ಆರೋಗ್ಯ ಸಚಿವ ವೆರೋನಿಕಾ ಸ್ಕೋವರ್ತಸೋವಾ 38 ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದು, 40 ಮಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ವಿಮಾನ ದೋಷ ಕುರಿತು ಮೊದಲೇ ಮಾಹಿತಿ ಇತ್ತು;

Also read: ಪ್ರಧಾನಿ ಮೋದಿಯವರ ಆಡಳಿತದಲ್ಲಿ ಕಾಶಿಯಲ್ಲಿ ಏನೆಲ್ಲಾ ಬದಲಾಗಿದೆ? ಸದ್ಯ ಗಂಗಾ ನದಿಯ ಸ್ವಚ್ಚತೆ ಹೇಗಿದೆ??

ಸುಖೋಯ್ ಸೂಪರ್ ಜೆಟ್ ಪ್ರಯಾಣಿಕರ ವಿಮಾನದಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿವೆ ಎಂದು 2016ರಲ್ಲೇ ರಷ್ಯಾದ ವಿಮಾನಯಾನ ಇಲಾಖೆ ಆರೋಪಿ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ, ಇದು ರಷ್ಯಾದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ನೆಚ್ಚಿನ ಯೋಜನೆಯಾಗಿತ್ತು. ಅಲ್ಲದೆ ರಷ್ಯಾದ ವಿಮಾನಯಾನ ಸಾರಿಗೆಯಲ್ಲಿ ಸುಖೋಯ್​​ ಅನ್ನು ಮುನ್ನಲೆಗೆ ತರಲು ಅವರು ಉತ್ಸುಕರಾಗಿದ್ದರು. ಪರಿಣಾಮ ಈ ವಿಮಾನದ ಹಾರಾಟಕ್ಕೆ ಯಾವುದೇ ಅಡ್ಡಿ ಎದುರಾಗಿರಲಿಲ್ಲ. ಇದಲ್ಲದೆ 2018ರಲ್ಲಿ ಸುಮಾರು 100 ಸುಖೋಯ್ ಪ್ರಯಾಣಿಕರ ವಿಮಾನಗಳ ತಯಾರಿಕೆಗೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಈ ಅಪಘಾತದ ನಂತರ ಸರ್ಕಾರ ಈ ಕುರಿತು ಚಿಂತನೆ ನಡೆಸಲಿದೆ ಎಂದು ತಿಳಿದುಬಂದಿದೆ.