ರಷ್ಯಾದ S400 ಕ್ಷಿಪಣಿಗೆ ಭಾರತ 39 ಸಾವಿರ ಕೋಟಿ ನೀಡಲಿದೆ !!!

0
980

ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಹೆಚ್ಚು ಗಮನ ಹರಿಸಿರುವ ಭಾರತ, ರಷ್ಯಾದ ಅತ್ಯಾಧುನಿಕ ಕ್ಷಿಪಣಿಗಳ ಖರೀದಿಗೆ ೩೯ ಸಾವಿರ ಕೋಟಿ ರೂ ವೆಚ್ಚಮಾಡಲಿದೆ.

ಮುಂದಿನ ವಾರ ಗೋವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಈ ಕ್ಷಿಪಣಿಗಳ ಖರೀದಿ ಕುರಿತು ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.

‘ಎಸ್- ೪೦೦ ಟ್ರಂಪ್ತ್’ ಹೆಸರಿನ ಈ ಕ್ಷಿಪಣಿ ಶತ್ರುಗಳಿಂದ ತೂರಿ ಬರುವ ಕ್ಷಿಪಣಿಗಳನ್ನು ನಿಖರ ಗುರಿಯೊಂದಿಗೆ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದು ವಾಯುಪಡೆಯ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ಹೇಳಲಾಗಿದೆ. ಎಸ್-೪೦೦ನ ಐದು ಕ್ಷಿಪಣಿಗಳನ್ನು ಖರೀದಿಸಲು ಭಾರತ ಉದ್ದೇಶಿಸಿದೆ.

ಎಸ್-೪೦೦ ಮಾಸ್ಕೊ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಕ್ಷಿಪಣಿ ಆಗಿದೆ. ಇದು ರಾತ್ರಿ- ಬೆಳಗ್ಗೆ ಎರಡೂ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಸಿರಿಯಾದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಅಲ್ಲದೆ ೪೦೦ ಕಿ.ಮೀ. ವ್ಯಾಪ್ತಿಯಲ್ಲಿ ೩೦೦ಕ್ಕೂ ಹೆಚ್ಚು ಗುರಿಗಳನ್ನು ೩೬ ಕಡೆಗಳಿಂದ ಏಕಕಾಲದಲ್ಲಿ ತಲುಪುವ ಕ್ಷಮತೆ ಹೊಂ ದಿದೆ. ಸ್ಲೆಟ್ತ್ ವಿಮಾನ ಪತ್ತೆ ಹಚ್ಚುವ ರಾಡರ್ ಕೂಡ ಈ ಅಲ್ಪ ಜಾಗದಲ್ಲಿ ಹೊಂದಿದೆ. ಆದ್ದರಿಂದ ಇದು ವಾಯು ಪಡೆಯ ರಕ್ಷಣೆಗೆ ಇದು ಪ್ರಮುಖ ಅಸ್ತ್ರವಾಗಲಿದೆ ಎಂದು ಭಾವಿಸಲಾಗಿದೆ.

ಈ ಕ್ಷಿಪಣಿಗಳನ್ನು ಅಣುಸ್ಥಾವರ ಬಳಿ ನಿಯೋಜಿಸುವ ಆಲೋಚನೆ ಇದೆ. ಇದೇ ವೇಳೆ ಎರಡೂ ರಾಷ್ಡ್ರಗಳು ನೌಕಾಪಡೆಗಾಗಿ ಹೆಲಿ ಕಾಫ್ಟರ್ ಅಭಿವೃದ್ಶಿಪಡಿಸುವುದು ಹಾಗೂ ಭಾರತದಿಂದ ೨೨೦ ಬಹುಪಯೋಗಿ ಕಮೊವ್ ಹೆಲಿಕಾಫ್ಟರ್ ಮಾರಾಟ ಕುರಿತು ಒಪ್ಪಂದ ಆಗುವ ಸಾಧ್ಯತೆಗಳಿವೆ.