ಹಳ್ಳಿ ಪ್ರತಿಭೆಗೆ ಸಿಕ್ಕ ಸರಿಗಮಪ ಕಿರೀಟ, ಅಪ್ಪನ ಆಸೆ ಇಟ್ಟುಕೊಂಡು ಬೆಳೆದ ಸುನೀಲ್ ನ ಕಥೆ..!

0
701

ಝಿ ಕನ್ನಡದ ‘ಸರಿಗಮಪ ಸೀಸನ್ 13’ರ ವಿನ್ನರ್ ಸುನೀಲ್ ಅಪ್ಪಟ್ಟ ಹಳ್ಳಿ ಪ್ರತಿಭೆ ಮತ್ತು ತುಂಬ ಕಷ್ಟದಿಂದ ಬೆಳೆದು ಬಂದ ಪ್ರತಿಭೆ ಈ ಹುಡುಗ ತನ್ನ ತಂದೆಯ ಆಸೆಯನ್ನು ಮನದಲ್ಲಿ ಹಿಟ್ಟುಕೊಂಡು ಬೆಳೆದು ಬಂದ ಸುನೀಲ್ ನ ಕಥೆ ನಿಜವಾಗಲೂ ಒಂದು ಮೈಲಿಗಲ್ಲು ಅಂದ್ರೆ ತಪ್ಪಿಲ್ಲ ಅನ್ಸುತ್ತೆ. ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿದ್ದ ಒಟ್ಟು 6 ಮಂದಿ ಗಾಯಕರ ಪೈಕಿ ಕಲಬುರಗಿ ಜಿಲ್ಲೆ ನೆಲೋಗಿ ಗ್ರಾಮದ ಯುವಕ ಸುನೀಲ್, ಶೋ ವಿಜೇತರಾದರು.

sa ri ga ma pa sunil-2

ಸುನೀಲ್ ಹೇಳಿದ ಮಾತುಗಳು ಇಲ್ಲಿವೆ ನೋಡಿ.
ನಾನು ಯಾವತ್ತೂ ಈ ಗೆಲುವನ್ನು ನಿರಿಕ್ಷಿಸಿರಲಿಲ್ಲ ಒಂದು ದಿನ ಶೋ ನಲ್ಲಿ ನಮ್ಮ ಅಮ್ಮನ ಜೊತೆ ನಾನು ಅಡಿದಾಗ ನಂಗೆ ಅನಿಸಿತು ನಾನು ಗೆಲ್ಲಲೇಬೇಕು ಅಂತ ಅಂದುಕೊಂಡು ನ್ನನಲ್ಲಿ ನಾನು ಸಾಕಷ್ಟು ಬದಲಾವಣೆ ಮಾಡಿಕೊಂಡೆ ಅನ್ನೋದು ಸುನೀಲ್ ಮಾತಾಗಿದೆ.

sa ri ga ma pa sunil-1

ಸುನೀಲ್ ಮೂಲತಃ ಕಲಬುರಗಿ ಜಿಲ್ಲೆ ನೆಲೋಗಿ ಗ್ರಾಮದ ಯುವಕ ಆದ್ರೆ ಸುನೀಲ್ ಸಂಗೀತ ಕಲಿಯುವ ಉದ್ದೇಶದಿಂದ ಊರು ಬಿಟ್ಟು ಗದಗ ಜಿಲ್ಲೆಗೆ ಬಂದು ವಾಸಿಸುತ್ತಾನೆ ಮತ್ತು ಸಂಗೀತವನ್ನು ಕಲಿಯುತ್ತಾನೆ. ಈ ಮಟ್ಟಕ್ಕೆ ಬೆಳೆಸಿದ್ದು ಗದಗ. ‘ದ್ವಿತೀಯ ಪಿಯುಸಿ ಓದುತ್ತಿದ್ದಾಗಲೇ ನನಗೆ ಹಾಡುವ ಹುಚ್ಟು ಶುರುವಾಗಿತ್ತು. ಅದಕ್ಕಾಗಿ ಮನೆ ಬಿಟ್ಟು ಓಡಿ ಬಂದೆ. ಗದಗದಲ್ಲಿ ನೆಲೆ ನಿಂತೆ. ಅಲ್ಲಿ ನನಗೆ ಸಂಗೀತದ ನಂಟು ಬೆಳೆಯಿತು. ಆ ಊರಿನ ಕೊಡುಗೆಯೇ ನನ್ನ ಗೆಲುವಿಗೆ ಪೂರಕವಾಯಿತು’ ಎನ್ನುವ ಸುನೀಲ್, ಅದೇ ಊರಿನಲ್ಲಿದ್ದು ಸಂಗೀತ ಕಲಿಯುವ ಕನಸು ಕಟ್ಟಿಕೊಂಡಿದ್ದಾರೆ.

sa ri ga ma pa sunil-3

ನಾನು ಸಂಗೀತದಲ್ಲಿ ಏನಾದರು ಸಾಧಿಸಬೇಕು ಅನ್ನೋದು ಅಪ್ಪ ಅಮ್ಮನ ಆಸೆಯಾಗಿತ್ತು ಅಪ್ಪನ ಆಸೆ ಈಡೇರಿಸಬೇಕು ಅನ್ನೋದೆ ನನ್ನ ಬಹುದೊಡ್ಡ ಕನಸಾಗಿ ಉಳಿ ಯಿತು. ಇವತ್ತು ಅದಕ್ಕೊಂದು ವೇದಿಕೆ ಸಿಕ್ಕಿದೆ. ‘ ಸರೆಗಮಪ ಸೀಸನ್ 13’ ರಲ್ಲಿ ನಾನು ಗೆದ್ದಿದ್ದು ಅದಕ್ಕೆ ಸೇತುವೆ ಆಗಿದೆ. ಅಪ್ಪನ ಆಸೆ ಈಡೇರಿಸುವುದು ನನ್ನ ಮುಂದಿರುವ ಬಹುದೊಡ್ಡ ಕನಸು. ಅದನ್ನು ನನಸಾಗಿಸುತ್ತೇನೆ ಎನ್ನುವ ಭರವಸೆ ಮೂಡಿದೆ’ ಎನ್ನುತ್ತಾನೆ ಸುನೀಲ್