ಸಬ್ಬಕ್ಕಿ ಹೇಗೆ ತಯಾರಾಗುತ್ತೆ ಗೊತ್ತಾ..!!

0
2491

ಸಬ್ಬಕ್ಕಿ ಹೇಗೆ ತಯಾರಾಗುತ್ತೆ ಗೊತ್ತಾ
ಸಾಬೂದಾನಿ, ಸಬ್ಬಕ್ಕಿ…. ಹೆಸರು ಕೇಳಿದರೆ ಸಾಕು ಇದರಿಂದ ಮಾಡಿದ ಖೀರು, ಕಿಚಡಿ ಸವಿದವರಿಗೆ ಬಾಯಲ್ಲಿ ನೀರೂರುತ್ತದೆ. ಉಪವಾಸ ಇರಬೇಕಾದಾಗ, ನವರಾತ್ರಿಯಂತಹ ವ್ರತಾಚರಣೆ ಸಂದರ್ಭಕ್ಕೆ ಉತ್ತಮ ಆಹಾರ ಪದಾರ್ಥ. ಭಾರತೀಯರ ಅಡುಗೆ ಮನೆಯಲ್ಲಿ ಇದಕ್ಕೊಂದು ಗೌರವಯುತ ಸ್ಥಾನವಿದೆ. ಸಾಬುದಾನಿ ವಡೆ, ಪಾಯಸ, ಕಿಚಡಿ ಹೀಗೆ ತರಹೇವಾರಿ ಭಕ್ಷ್ಯಗಳನ್ನು ಇದರಿಂದ ಮಾಡಲಾಗುತ್ತದೆ.

ಸಬ್ಬಕ್ಕಿಗೆ ಮೂಲವಸ್ತು ಮರಗೆಣಸುಟಾಪಿಯೋಕಾ ಅಥವಾ ಕಸ್ಸಾವಾ ಎಂದು ಕರೆಯಲ್ಪಡುವ ಮರಗೆಣಸಿನಿಂದಲೇ ಸಬ್ಬಕ್ಕಿ ತಯಾರಿಸಲಾಗುತ್ತದೆ. ಮರಗೆಣಸಿನ ತವರೂರು ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್. ಅಲ್ಲಿನ ಅಮೆಜಾನ್ ಇಂಡಿಯನ್ ಆದಿವಾಸಿಗಳು ಬಳಸುವ ಮರಗೆಣಸನ್ನು ಬ್ರೆಜಿಲ್, ಥೈಲ್ಯಾಂಡ್, ನೈಜೀರಿಯಾ, ಕಾಂಗೊ-ಕಿನ್ಶಾಸಾಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಭಾರತದಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ಅಸ್ಸಾಂಗಳಲ್ಲಿ ಮರಗೆಣಸು ಕೃಷಿ ನಡೆಯುತ್ತದೆ.

ಹವಾಮಾನ ಮತ್ತು ಮಣ್ಣುಮರಗೆಣಸು ಉಷ್ಣವಲಯದ ಬೆಳೆ. ಇದರ ಬೆಳವಣಿಗೆಗೆ ಕನಿಷ್ಠ ಎಂಟು ತಿಂಗಳು ಬೆಚ್ಚಗಿನ ಹವಾಮಾನ ಅಗತ್ಯ. ಮಳೆ ಅತ್ಯಧಿಕವಾಗಿ ಬೀಳುವ ಪ್ರದೇಶಗಳಲ್ಲೂ ಇದನ್ನು ಬೆಳೆಯಬಹುದು. ಪ್ರವಾಹವನ್ನು ಮಾತ್ರ ತಾಳಿಕೊಳ್ಳಲಾರದು. ಶುಷ್ಕ ಹವಾಮಾನವಿರುವ ಭಾಗದಲ್ಲಿ ಬೆಳೆದ ಮರಗೆಣಸು ಸಸಿ ತನ್ನ ಎಲೆಗಳನ್ನು ಉದುರಿಸಿ ತೇವಾಂಶ ಕಾಪಾಡಿಕೊಳ್ಳುತ್ತದೆ. ಮಳೆ ಶುರುವಾದಾಗ ಹೊಸ ಎಲೆಗಳು ಬೆಳೆಯುತ್ತವೆ.

ವಿಪರೀತ ಶೀತ ಅಥವಾ ಒಣ ಹವೆ ಇದ್ದಾಗ 18 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ನಂತರ ಫಸಲು ಕೊಯ್ಲಿಗೆ ಬರುತ್ತದೆ. ಒಂದು ವೇಳೆ ಮರಗಟ್ಟುವಂತಹ ಶೀತದ ಹವಾಮಾನವಿದ್ದರೆ ಇಳುವರಿ ಕಡಿಮೆ ಆಗುತ್ತದೆ. 4.5ರಿಂದ 8.0 ಪಿಎಚ್ ಅಂಶ ಹೊಂದಿರುವ ಮಣ್ಣಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬಿರು ಬಿಸಿಲಿದ್ದರಂತೂ ಉತ್ಪಾದನೆ ಅಧಿಕ.ಬೆಳೆ ಹೇಗೆ?ಮರಗೆಣಸು ಸಸ್ಯಗಳನ್ನು ಸಿದ್ಧಪಡಿಸಲು ಕಾಂಡದ ದಪ್ಪನೆ ತುಣುಕುಗಳನ್ನು ಕತ್ತರಿಸಿ ಹುಗಿಯಲಾಗುತ್ತದೆ.

ಅದು ಬೇರು ಬಿಟ್ಟ ನಂತರ ಟಿಸಿಲೊಡೆದು ಹೊಸ ಸಸಿಯಾಗಿ ಬೆಳೆಯುತ್ತದೆ. ನಂತರ ಅವುಗಳನ್ನು ಕಿತ್ತು ನಾಟಿ ಮಾಡಲಾಗುತ್ತದೆ. ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳೆರಡರಲ್ಲೂ ಇದನ್ನು ಬೆಳೆಯಬಹುದು. ನೀರಾವರಿ ಪ್ರದೇಶಗಳಲ್ಲಿ ವರ್ಷವಿಡೀ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಮೇ-ಜೂನ್ ಸಮಯ ಅತ್ಯಂತ ಪ್ರಶಸ್ತ. ಮಣ್ಣಿನ ಗುಣಮಟ್ಟ ಸರಿಯಾಗಿರದಿದ್ದರೆ ಕಾಂಡದ ತುಣುಕುಗಳನ್ನು ಹುಗಿಯುವ ಮುನ್ನ ಹೊಲವನ್ನು ಸರಿಯಾಗಿ ಉಳುಮೆ ಮಾಡಿಕೊಳ್ಳಬೇಕು. 20ರಿಂದ 25 ಸೆಂ.ಮೀ. ಆಳ ಉಳುಮೆ ಮಾಡಿ ಮಣ್ಣನ್ನು ಸಡಿಲಗೊಳಿಸಿಕೊಳ್ಳಬೇಕು.

ಲಘು ಅಥವಾ ಹಗುರ ಮಣ್ಣು ಇದ್ದರೆ ಸಮತಲ ಪದ್ಧತಿ, ಗಡಸು ಮಣ್ಣಾದರೆ ದಿಬ್ಬ ಪದ್ಧತಿ ಅನುಸರಿಸುವುದು ರೂಢಿ. ನೀರಾವರಿಯಾದರೆ ಕಾಲುವೆ ಮತ್ತು ಬದುವು ಪದ್ಧತಿ ಅನುಸರಿಸಿ ಬೆಳೆಯಲಾಗುತ್ತದೆ. 8 ರಿಂದ 9 ತಿಂಗಳು ಅವಧಿಯ 2 ರಿಂದ 3ಸೆಂ.ಮೀ. ದಪ್ಪ ಇರುವ ರೋಗ ಮತ್ತು ಕೀಟ ಬಾಧೆ ನಿರೋಧಕ ಮರಗೆಣಸು ಸಸ್ಯಗಳ ಕಾಂಡದ ತುಣುಕುಗಳನ್ನು ಸರಿಯಾದ ಕ್ರಮದಲ್ಲಿ ಕತ್ತರಿಸಿ ಹೂಳಬೇಕು. ತುಣುಕುಗಳು 25 ರಿಂದ 30 ಸೆಂ.ಮೀ. ಉದ್ದ ಇದ್ದರೆ ಉತ್ತಮ.ನಾಟಿ ಹೇಗೆತುಣುಕುಗಳನ್ನು 5 ಸೆಂ.ಮೀ ಆಳವಾಗಿ ಹೂಳಬೇಕು.

ನಾಟಿ ಪದ್ಧತಿಯಲ್ಲಿ ಕಾಂಡದ ತುಣುಕುಗಳನ್ನು ಲಂಬವಾಗಿಯೂ, ನೇರವಾಗಿ ಹೂಳಬಹುದು. ಆದರೆ ಲಂಬವಾಗಿ ಹೂಳುವ ಪದ್ಧತಿಯಿಂದ ಪರಿಣಾಮಕಾರಿ ಇಳುವರಿ ಸಾಧ್ಯ.ಕಾಂಡದ ತುಣುಕುಗಳನ್ನು ಹುಗಿಯುವ ಅಂತರವನ್ನು ಟೊಂಗೆಗಳಿದ್ದರೆ ತುಣುಕುಗಳನ್ನು 75*75 ಸೆಂ.ಮೀ., ಅರ್ಧ ಟೊಂಗೆ ಮತ್ತು ಬೆಳೆದ ಟೊಂಗೆಗಳನ್ನು ಹೊಂದಿದ ಗಿಡಗಳ ಕಾಂಡದ ತುಣುಕುಗಳನ್ನು 90*90 ಸೆಂ.ಮೀ. ಅಂತರದಲ್ಲಿ ಹೂಳಬೇಕು.ಬೆಳೆ ಕೊಯ್ಲುಮರಗೆಣಸು ಬೆಳೆ 10 ರಿಂದ 12 ತಿಂಗಳ ಅವಧಿಯಲ್ಲಿ ಕಟಾವಿಗೆ ಬರುತ್ತದೆ. ಅಲ್ಪಾವಧಿ ಬೆಳೆ 6 ರಿಂದ 7 ತಿಂಗಳ ಅವಧಿಯದ್ದಾಗಿದೆ. ಸಾಮಾನ್ಯವಾಗಿ ಹೈಬ್ರಿಡ್ ತಳಿ ಮರಗೆಣಸು ಪ್ರತಿ ಹೆಕ್ಟೇರ್‍ಗೆ 30 ರಿಂದ 40 ಟನ್, ಅಲ್ಪಾವಧಿ ಬೆಳೆ 25 ರಿಂದ 30 ಟನ್ ಇಳುವರಿ ಕೊಡುತ್ತದೆ. ಕೊಯ್ಲಿನ ಸಮಯದಲ್ಲಿ ಗಿಡಗಳ ಕಾಂಡಗಳ ಬುಡವನ್ನು ಹಿಡಿದು ಕೀಳಲಾಗುತ್ತದೆ. ನಂತರ ಬೇರಿನ ಭಾಗದಲ್ಲಿ ಬೆಳೆದಿರುವ ಮರಗೆಣಸಿನ ಗಡ್ಡೆಗಳನ್ನು ಕಿತ್ತ ಗಿಡದಿಂದ ಬೇರ್ಪಡಿಸಲಾಗುತ್ತದೆ.