ಸಬ್ಬಕ್ಕಿ ಅಥವಾ ಸಾಬುಧಾನೆಯ ಈ ಸೌಂದರ್ಯ ವರ್ಧಕ ಗುಣಗಳನ್ನು ತಿಳಿದರೆ ಅಚ್ಚರಿ ಆಗ್ತೀರ.

0
1227

1. ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕಲಿಸಿ, ಇದನ್ನು ಮುಖದ ಮೇಲೆ ಹಚ್ಚಿ ಇದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.

2. ಸಬ್ಬಕ್ಕಿಯನ್ನು ಜೇನು ಮತ್ತು ನಿಂಬೆಯ ರಸದೊಂದಿಗೆ ಚೆನ್ನಾಗಿ ಕಲಿಸಿ ಮುಖದ ಮೇಲೆ ಹಚ್ಚಿದರೆ ಮುಖದ ಮೇಲಿನ ಎಲ್ಲಾ ಕಲೆ ಮಾಯವಾಗುತ್ತವೆ.

3. ಸಬ್ಬಕ್ಕಿಯ ಪುಡಿಯನ್ನು ಮೊಸರಿನೊಂದಿಗೆ ಚೆನ್ನಾಗಿ ಕಲಿಸಿ ಮುಖಕ್ಕೆ ಹಚ್ಚಿದರೆ ಡಲ್ ಆದ ಚರ್ಮ ಹೊಳೆಯುತ್ತದೆ.

4. ಸಬ್ಬಕ್ಕಿಯನ್ನು ಆಲಿವ್‌ ಆಯಿಲ್‌ನಲ್ಲಿ ಚೆನ್ನಾಗಿ ಕಲಿಸಿ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ತಣ್ಣೇರಿನಿಂದ ತೊಳೆಯಿರಿ ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.

5. ಸಬ್ಬಕ್ಕಿ ಪುಡಿಯನ್ನು ಮೊಸರು, ಜೇನು ಮತ್ತು ರೋಸ್‌ ವಾಟರ್‌ ಜೊತೆ ಕಲಿಸಿ ಕೂದಲಿಗೆ ಹಚ್ಚಿದರೆ ಕೂದಲಿಗೆ ಹೊಸ ಶಿನೇ ಬರುತ್ತದೆ.

6. ಸಬ್ಬಕ್ಕಿ ಪುಡಿಯನ್ನು ಹಾಲು ಮತ್ತು ಅರಿಶಿನದ ಜೊತೆ ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಸುಕ್ಕುಗಟ್ಟುವಿಕೆ ದೂರವಾಗುತ್ತದೆ.

7. ಚರ್ಮದ ತುಂಬ ಪಿಂಪಲ್‌ ಆಗಿದ್ದರೆ ಸಬ್ಬಕ್ಕಿ ಪುಡಿಯ ಜೊತೆಗೆ ಅರಿಶಿನ ಮತ್ತು ರೋಸ್‌ ವಾಟರ್‌ ಕಲಿಸಿ ಹಚ್ಚಿದರೆ ಪಿಂಪಲ್ ವಾಸಿಯಾಗುತ್ತವೆ.

8. ಸಬ್ಬಕ್ಕಿ ಪುಡಿಯನ್ನು ಅದಕ್ಕೆ ಕಡ್ಲೆಬೇಳೆ ಹಿಟ್ಟು ಮತ್ತು ಮೊಸರು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಚರ್ಮಕ್ಕೆ ಹೊಸ ಹೊಳಪು ಸಿಗುತ್ತದೆ.