ಮತ್ತೊಂದು ಗ್ರಾಮ ದತ್ತು ಪಡೆದ ಸಚಿನ್…

0
986

ಭಾರತ ರತ್ನ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಇನ್ನೊಂದು ಹಿಂದುಳಿದ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಹೌದು, ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಇನ್ನೊಂದು ಗ್ರಾಮವನ್ನು ದತ್ತು ಸ್ವೀಕರಿಸುವುದಾಗಿ ಪ್ರಕಟಿಸಿದ್ದಾರೆ. 2014ರಲ್ಲಿ ಗುಂಟೂರು ಜಿಲ್ಲೆಯ ಸಮೀಪದ ಪುಟ್ಟಮರಾಜುವಾರಿ ಖಂಡ್ರಿಗಾ ಗ್ರಾಮವನ್ನು ದತ್ತು ಪಡೆದಿದ್ದ ಸಚಿನ್, ಈ ಗ್ರಾಮದಲ್ಲಿ 6 ಕೋಟಿ ರೂ. ಮೊತ್ತದ ಯೋಜನೆಗಳನ್ನು ಬುಧವಾರ ಉದ್ಘಾಟಿಸಿದ್ದಾರೆ. ಬಳಿಕ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿನ್, ಖಂಡ್ರಿಗಾದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಗೊಲ್ಲಪಲ್ಲಿ ಎಂಬ ಗ್ರಾಮವನ್ನು ದತ್ತು ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಆ ಗ್ರಾಮದ ಅಭಿವೃದ್ಧಿಗೆ 3.05 ಕೋಟಿ ರೂ.ಗಳನ್ನು ವ್ಯಯಿಸುವುದಾಗಿ ತಿಳಿಸಿದ್ದಾರೆ.

2014ರಲ್ಲಿ ಗುಂಟೂರು ಜಿಲ್ಲೆಯ ಸಮೀಪದ ಪುಟ್ಟಮರಾಜುವಾರಿ ಖಂಡ್ರಿಗಾ ಗ್ರಾಮವನ್ನು ದತ್ತು ಪಡೆದಿದ್ದ ಸಚಿನ್, ಈ ಗ್ರಾಮದಲ್ಲಿ 6 ಕೋಟಿ ರೂ. ಮೊತ್ತದ ಯೋಜನೆಗಳನ್ನು ಬುಧವಾರ ಉದ್ಘಾಟಿಸಿದ್ದಾರೆ. ಬಳಿಕ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿನ್, ಖಂಡ್ರಿಗಾದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಗೊಲ್ಲಪಲ್ಲಿ ಎಂಬ ಗ್ರಾಮವನ್ನು ದತು ¤ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಆ ಗ್ರಾಮದ ಅಭಿವೃದ್ಧಿಗೆ 3.05 ಕೋಟಿ ರೂ.ಗಳನ್ನು ವ್ಯಯಿಸುವುದಾಗಿ ತಿಳಿಸಿದ್ದಾರೆ.

ಖಂಡ್ರಿಗೆಯ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿ ಅವರಿಗೆ ಸರಿಯಾಗಿ ಸೌಲಭ್ಯಗಳು ಸಿಗುತ್ತಿವೆಯೇ ಎಂದು ವಿಚಾರಿಸಿಕೊಂಡರು. ರಾಜ್ಯ ಸಭೆ ಸದಸ್ಯರಾಗಿರುವ ಸಚಿನ್ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕನಸಿನ ಕೂಸಾದ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಖಂಡ್ರಿಗೆ ಗ್ರಾಮವನ್ನು ದತ್ತು ಪಡೆದಿದ್ದರು. ತೀರಾ ಹಿಂದುಳಿದ ಗ್ರಾಮವಾಗಿದ್ದ ಖಂಡ್ರಿಗೆ ಇಂದು ಸುಸಜ್ಜಿತ ಹಳ್ಳಿಯಾಗಿ ಮಾರ್ಪಟ್ಟಿದೆ.ಸಚಿನ್ 2014ರ ನವೆಂಬರ್’ನಲ್ಲಿ ಖಂಡ್ರಿಗಾ ಗ್ರಾಮವನ್ನು ದತ್ತು ಪಡೆದಿದ್ದರು. ಗ್ರಾಮಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ ಸಚಿನ್, ಗ್ರಾಮದ ನಿವಾಸಿಗಳ ಜತೆ ಸಚಿನ್ ಕೆಲ ಹೊತ್ತು ಸಂವಾದ ನಡೆಸಿದರು. ಗ್ರಾಮದಲ್ಲಿ ಮಹತ್ವದ ಬದಲಾವಣೆ ಆಗಿರುವುದು ಖುಷಿ ನೀಡಿದೆ ಎಂದು ಹೇಳಿದರು. ಇದೇ ವೇಳೆ, ಸ್ವಚ್ಛ ಮತ್ತು ಆರೋಗ್ಯಕರ ಭಾರತ ನಿರ್ಮಾಣ ಮಾಡುವಂತೆ ಜನರಿಗೆ ಕರೆ ನೀಡಿದರು.