ಮಿಥಾಲಿ ರಾಜ್ ಬಗ್ಗೆ ಸಚಿನ್ ಹೇಳಿದ ಮಾತು ಕೇಳಿದ್ರೆ ನಿಮಗೆ ಖಂಡಿತ ಆಶ್ಚರ್ಯ ಆಗುತ್ತೆ…!

0
628

ಮಿಥಾಲಿ ರಾಜ್ ಬಗ್ಗೆ ಸಚಿನ್ ಹೇಳಿದ ಮಾತು ಕೇಳಿದ್ರೆ ನಿಮಗೆ ಖಂಡಿತ ಆಶ್ಚರ್ಯ ಆಗುತ್ತೆ…!

ಇತ್ತೀಚಿನ ದಿನಗಳಲ್ಲಿ ಈ ಮಿಥಾಲಿ ರಾಜ್ ಅನ್ನೋ ಹೆಸರು ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸಹ ಇದೆ.
ಕ್ರಿಕೆಟ್ ಇತಿಹಾಸದಲ್ಲಿ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಾಧನೆಗಳು ಅಪಾರ. ಅಂತಹ ಸಚಿನ್ ಅವರ ಸಾಧನೆಯೊಂದನ್ನು ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಮುರಿದಿದ್ದಾರೆ.

 

Sachin Tendulkar says Mithali Raj is fantastic-1
source;Wikipedia

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್ 69 ರನ್ ಪೇರಿಸಿದ್ದು ಆ ಮೂಲಕ 6 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಅಲ್ಲದೆ ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿ ಮಿಥಾಲಿ ರಾಜ್ ಗೆ ಸಲ್ಲುತ್ತದೆ.

Sachin Tendulkar says Mithali Raj is fantastic-2
source:Indiatimes.com

ಮಿಥಾಲಿ ರಾಜ್ 164ನೇ ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದು, ಸಚಿನ್ ಅವರು 6 ಸಾವಿರ ಗಡಿ ದಾಟಲು 170 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮಿಥಾಲಿ ರಾಜ್ ಅವರ ವಿಶ್ವದಾಖಲೆಯನ್ನು ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಶಂಸಿಸಿದ್ದಾರೆ. ಶುಭಾಶಯ ಮಿಥಾಲಿ ರಾಜ್, ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಸಾಧನೆಯನ್ನು ಮಿಥಾಲಿ ರಾಜ್ ಮಾಡಿದ್ದಾರೆ ಎಂದು ಹಂಚ್ಚಿಕೊಂಡಿದರು.

ಮತ್ತೆ ಸಚಿನ್ ತಮ್ಮ ಫೇಸ್ ಬುಕ್ ನಲ್ಲಿ ಮಿಥಾಲಿ ರಾಜ್ ಬಗ್ಗೆ ಬರೆದುಕೊಂಡಿದ್ದಾರೆ. ಮಿಥಾಲಿ ರಾಜ್ ಕ್ರಿಕೆಟ್ ಗೆ ಹೇಗೆ ಪರಿಚಯವಾಗಿದ್ದರೆ ಅನ್ನೋದನ್ನು ಹೇಳಿಕೊಂಡಿದ್ದಾರೆ.

Sachin Tendulkar says Mithali Raj is fantastic-3

ಪ್ರೀತಿಯ ಮಿಥಾಲಿ ರಾಜ್: ಅವರ ತಂದೆ, ನಿವೃತ್ತ ಏರ್ ಫೋರ್ಸ್ ಸಾರ್ಜೆಂಟ್ ದೊರೈ ರಾಜ್.
ಮಿಥಾಲಿ ರಾಜ್ ಪ್ರತಿದಿನ ಬೆಳಗ್ಗೆ ಲೇಟಾಗಿ ಎದ್ದೇಳುತ್ತಿದ್ದಳು. ಆಗ ಮಿಥಾಲಿ ರಾಜ್ ೮ ವರ್ಷದ ಹುಡುಗಿ ಇಂತಹ ಸಮಯದಲ್ಲಿ ಇವರ ತಂದೆ ಒಂದು ಉಪಾಯ ಮಾಡಿ ತನ್ನ ಸಹೋದರನ ಜೊತೆ ಕ್ರಿಕೆಟ್ ಆಡಲು ಕಳುಹಿಸಿದರು. ಜೊತೆಗೆ ಕೋಚಿಂಗ್ ಕೊಡಿಸುತ್ತಿದ್ದರು.

೮ ವರ್ಷದ ಹುಡುಗಿಯೊಬ್ಬಳು ಮುಂದೊಂದು ದಿನ ಭಾರತೀಯ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮಾಡುತ್ತಾಳೆ ಅನ್ನೋದು ಯಾರು ನಂಬಿರಲಿಲ್ಲ. ಆದ್ರೆ ಅವರ ಪ್ರತಿಭೆ ಗುರಿತಿಸಿ ಸರಿಯಾಯದ ದಿಕ್ಕಿನಲ್ಲಿ ಮುನ್ನೆಡೆಸಿದರೆ ಒಳ್ಳೆ ಫಲಿತಂಶ ಬರುತ್ತದೆ ಅನ್ನೋದಕ್ಕೆ ಇದೆ ಸಾಕ್ಷಿ ಎಂದು ಹೇಳಿದ್ದಾರೆ.

ನೀವು ಪ್ರಚಂಡ ಕ್ರೀಡಾಪಟು ಮತ್ತು ನೀವು ಆಡಲು ನೋಡಲು ಯಾವಾಗಲೂ ಅದ್ಭುತ ನೀವು ಇನ್ನು ದೊಡ್ಡ ದೊಡ್ಡ ದಾಖಲೆಗಳನ್ನು ಮಾಡಿ ನಿಮಗೆ ಧನ್ಯವಾದಗಳು ಎಂದು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.